ಪತಂಜಲಿ ಯೋಗ ಸಮಿತಿಯಿಂದ ಸಚಿವರಿಗೆ ಅಭಿನಂದನೆ ಬೀದರ್: ಜಿಲ್ಲೆಯನ್ನು ಹೊಸ ಪ್ರಗತಿ ಪಥದಲ್ಲಿ ತಗೆದುಕೊಂಡು ಹೋಗಲು ಅಗಲಿರಿಳು ಶ್ರಮಿಸುತ್ತಿದ್ದೇನೆ. ಮುಂದೆಯು ಕೂಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನರ ಉತ್ತಮ ಜೀವನ ಸುಗಮಗೊಳಿಸಲು ಪಣತೊಡುವುದಾಗಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಬಿವಿಬಿ ಕಾಲೇಜಿನ ಕ್ಯಾಂಪಸ್ ನಲ್ಲಿ ದೇಶದ ಪ್ರತಿಷ್ಠತ ಸೈನಿಕ ಶಾಲೆ ಬೀದರ್ ಜಿಲ್ಲೆಗೆ ಮಂಜೂರು ಮಾಡಿಸಿದ್ದಕ್ಕೆ ಪತಂಜಲಿ ಯೋಗ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತಾನಾಡಿದ ಅವರು, ಕೇಂದ್ರ ಸರ್ಕಾರ ಜಿಲ್ಲೆಗೆ ಸೈನಿಕ ಶಾಲೆ ಬಂಪರ್ ಕೊಡುಗೆ ನೀಡಿದೆ. ನಗರದ ಎಚ್‌ಕೆಇ ಸೊಸೈಟಿಯ ನ್ಯಾಶನಲ್ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಶಾಲೆಯಲ್ಲಿ ಬಿವಿಬಿ ಕಾಲೇಜು ಆವರಣದಲ್ಲಿ ಪ್ರಾರಂಭವಾಗಲಿದೆ ಎಂದರು. ಬೀದರ್ ಹೆಸರು ದೇಶದಲ್ಲಿಯೆ ಅಭಿವೃದ್ಧಿ ಪತದಲ್ಲಿ ಮಿಂಚುತ್ತಿದೆ. ನಾವೆಲ್ಲಾ ಹೆಮ್ಮೆ ಪಡಬೇಕೆಂದು ಹೇಳಿದರು. ಗವರ್ನಿಂಗ್ ಕೌನ್ಸಿಲ್ ಮೆಂಬರ್ ಎಚ್ ಕೆ ಇ ಸಂಸ್ಥೆ ಕಲಬುರ್ಗಿ ಹಾಗೂ ಕನ್ವೇನರ್ ಬಿವಿಬಿ ಕಲೇಜ್ ಕ್ಯಾಂಪಸ್ ಬೀದರ್ನ ಡಾ.ರಜನೀಶ್ ಎಸ್ ವಾಲಿ ಮಾತನಾಡಿ, ಕೇಂದ್ರ ಸರ್ಕಾರದ ಸೈನಿಕ ಶಾಲೆ ನಮ್ಮ ಹೈದ್ರಾಬಾದ್ ಕರ್ನಾಟಕ ಭಾಗದ ಪ್ರತಿಷ್ಠಿತ ಸಂಸ್ಥೆ ಎಚ್. ಕೆ ಶಿಕ್ಷಣ ಸಂಸ್ಥೆಗೆ ಸಿಕಿದ್ದು ನಮಗೆ ಬಹಳ ಸಂತೋಷವಾಗಿದೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಡಾ.ರಜನೀಶ್ ಎಸ್ ವಾಲಿ, ಬಿವಿಬಿ ಕಾಲೇಜಿನ ಪದವಿ ಪ್ರಾಂಶುಪಾಲರಾದ ಪಿ ವಿಠಲರೆಡ್ಡಿ, ಶಿವಕುಮಾರ ಭಾಲ್ಕೆ, ಬಾಬುರಾವ್ ಧಾನಿ, ಶಿವಶಂಕರ, ಮಲ್ಲಿಕಾರ್ಜುನ ಇಟಗ ನವದಗೇರಿ ಅವರಿಗೆ ಸನ್ಮಾನಿಸಲಾಯಿತು. ಪತಂಜಲಿ ಯೋಗ ಸಮಿತಿ ಜಿಲ್ಲಾ ಅದ್ಯಕ್ಷ ಯೋಗೇಂದ್ರ ಯದಲಾಪುರೆ ಅಧ್ಯಕ್ಷತೆ ವಹಿಸಿದರು. ಸರ್ಕಾರಿ ಅಭಿಯೋಜಕ ವಕೀಲರಾದ ಸಂಜೀವಕುಮಾರ ಸಜ್ಜನಶೆಟ್ಟಿ,ಸ್ವಾಭಿಮಾನ ಭಾರತ ಟ್ರಷ್ಟನ ಅಧ್ಯಕ್ಷ ಅಜಯ ಕುಮಾರ ದುಬೆ, ಡಿಎಚ್ಓ ಡಾ. ಮಹೇಶ ಬಿರಾದಾರ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.