ಕನ್ನಡಪ್ರಭ ವಾರ್ತೆ ಬೆಂಗಳೂರು
ಕೃಷಿ ಅರ್ಥಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಇವರು ಕೃಷಿ ವಿವಿಯ ಒಂದು ಚಿನ್ನದ ಪದಕ ಮತ್ತು ದಾನಿಗಳ ಆರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ಗೃಹಿಣಿಯಾಗಿರುವ ತಾಯಿಯವರು ನೀಡಿದ ಬೆಂಬಲದಿಂದಾಗಿ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಸದ್ಯ ಕೃಷಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದೇನೆ. 7 ಪದಕ ಪಡೆದದ್ದು ತುಂಬಾ ಸಂತಸ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೃಷಿ ಸಂಶೋಧಕಿ ಅಥವಾ ಸಹಾಯಕ ಪ್ರಾಧ್ಯಾಪಕಿಯಾದರೂ ಆಗಬೇಕು. ರೈತರ ಸಂಕಷ್ಟ ಪರಿಹರಿಸಬೇಕು ಎಂಬ ಅದಮ್ಯ ಆಸೆಯಿದೆ ಎನ್ನುತ್ತಾರೆ. ಇವರ ಸಹೋದರ ಸಹ ತೋಟಗಾರಿಕಾ ವಿದ್ಯಾರ್ಥಿಯಾಗಿರುವುದು ವಿಶೇಷವಾಗಿದೆ.‘ಪ್ರಭಾವ’ ನೋಡಿ ಅಧಿಕಾರಿಆಗಲು ನಿರ್ಧಾರ: ನಂದಿತಾ
ಗ್ರಾಮೀಣ ಪ್ರದೇಶದ ಕಾರ್ಯಾನುಭವಕ್ಕಾಗಿ ನಾವು ಮೂರು ತಿಂಗಳು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ವಾಸ್ತವ್ಯ ಹೂಡಿದ್ದೆವು. ಮೂರು ತಿಂಗಳು ರೈತರಿಗೆ ಕೃಷಿ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರೂ ಅವರು ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅಲ್ಲಿನ ತಹಶೀಲ್ದಾರರು ಒಮ್ಮೆ ನಾವಿದ್ದಲ್ಲಿಗೆ ಆಗಮಿಸಿ ರೈತರಿಗೆ ಮಾಹಿತಿ ನೀಡಿದಾಗ ಅದನ್ನು ಬಹಳಷ್ಟು ಆಸಕ್ತಿಯಿಂದ ರೈತರು ಆಲಿಸಿದರು. ಇದನ್ನು ಗಮನಿಸಿದ ನಾನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆದು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ನಿರ್ಧರಿಸಿದ್ದೇನೆ ಎಂದರು. ನಂದಿನಿ ಅವರು ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರಿನವರಾಗಿದ್ದಾರೆ. ತಂದೆ ಬಿಎಂಟಿಸಿ ನಿರ್ವಾಹಕರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.