)
- ದಾವಣಗೆರೆ ದಕ್ಷಿಣದ ಮತ ಎಣಿಕೆಗೆ ಮುನ್ನ ತೆರೆಯದ ಸ್ಟ್ರಾಂಗ್ ರೂಂಗಳ ಡಬಲ್ ಲಾಕರ್ ಬೀಗಗಳು - - -
ದಾವಣಗೆರೆ ದಕ್ಷಿಣ ಕ್ಷೇತ್ರದ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಂನಲ್ಲಿದ್ದ ನಾಲ್ಕು ಕೊಠಡಿಗಳ ಪೈಕಿ 2 ಕೊಠಡಿಗಳ ಬೀಗವನ್ನು ತೆಗೆಯುವ ಬದಲು, ಬಾಗಿಲಿಗೆ ಹಾಕಿದ್ದ ಚಿಲಕಗಳನ್ನೇ ಒಡೆದು ತೆಗೆದ ಘಟನೆ ಸೋಮವಾರ ನಡೆಯಿತು.
ನಗರದ ಡಿಆರ್‌ಆರ್ ಶಾಲೆಯ ಮತ ಎಣಿಕಾ ಕೇಂದ್ರದ ನಾಲ್ಕು ಸ್ಟ್ರಾಂಗ್ ರೂಂಗಳ ಬೀಗಗಳನ್ನು ತೆರೆಯಲು ಹರಸಾಹಸ ಮಾಡಿದ ಸಿಬ್ಬಂದಿ ಕಡೆಗೆ ಬೀಗ ತೆಗೆಯುವ ಬದಲಿಗೆ ಚಿಲಕವನ್ನೇ ಸುತ್ತಿಗೆಯಿಂದ ಒಡೆದು ತೆಗೆಯಬೇಕಾದ ಪರಿಸ್ಥಿತಿ ಬಂದಿದ್ದು ಸಾಕಷ್ಟು ಪ್ರಶ್ನೆಗೆ ಆಸ್ಪದ ಮಾಡಿಕೊಟ್ಟಿದೆ.ಚುನಾವಣಾಧಿಕಾರಿ ಬಳಿ ಇದ್ದ ಕೀಗಳಿಂದ ಸ್ಟ್ರಾಂಗ್ ರೂಂಗಳ ಬೀಗಗಳು ತೆಗೆದುಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಬಾಗಿಲುಗಳ ಚಿಲಕಗಳನ್ನು ಮುರಿದು, ಸ್ಟ್ರಾಂಗ್ ರೂಂ ಬಾಗಿಲುಗಳನ್ನು ತೆರೆಯಲಾಯಿತು. 4 ಸ್ಟ್ರಾಂಗ್ ರೂಂಗಳ ಪೈಕಿ 2 ಸ್ಟ್ರಾಂಗ್ ರೂಂಗಳ ಬೀಗಗಳನ್ನು ತೆಗೆಯಲಾಗದೇ, ಚಿಲಕಗಳನ್ನು ಮುರಿದು, 2 ಸ್ಟ್ರಾಂಗ್ ರೂಂಗಳ ಬೀಗಗಳನ್ನು ಹಾಗೆಯೇ ತೆಗೆಯಲಾಯಿತು. ಬೀಗ ತೆಗೆಯಲು ಸಿಬ್ಬಂದಿ ಹರಸಾಹಸ ಮಾಡಿದ್ದು ಮಾತ್ರ ಗಮನ ಸೆಳೆಯಿತು.
ಅನಂತರ ಸ್ಟ್ರಾಂಗ್ ರೂಂನಿಂದ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಶುರುವಾಯಿತು. ಮೊದಲು ಅಂಚೆ ಮತಗಳ ಎಣಿಕೆಯನ್ನು ಆರಂಭಿಸಲಾಯಿತು. ಕ್ಷೇತ್ರದಲ್ಲಿ 217 ಅಂಚೆ ಮತಪತ್ರಗಳು, 10 ಸೇವಾ ಮತಗಳ ಎಣಿಕೆ ನಡೆಯಿತು. ಒಟ್ಟು 227 ಮತಗಳ ಎಣಿಕೆ ಕಾರ್ಯ ಶುರುವಾಯಿತು. ಸ್ಟ್ರಾಂಗ್ ರೂಂ ಬೀಗದ ಕೈಗಳ ಗೊಂದಲದ ಮಧ್ಯೆಯೂ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಬೇಕಾಯಿತು.
- - -