ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ತಲೆದೂಗಿದೆ ಮಹಿಳೆಯರು ಮಕ್ಕಳು ಹನಿ ನೀರಿಗಾಗಿ ನಲ್ಲಿಗಳ ಮುಂದೆ ಶೇಖರಣೆಗಾಗಿ ಪರದಾಡುವಂಥ ಸ್ಥಿತಿ ಉಂಟಾಗಿದೆ.
ಮಹಿಳೆಯರ ಅಕ್ರೋಶ:
ಕಳೆದ ಹಲವಾರು ದಿನಗಳಿಂದ ಬಂಡಳ್ಳಿ ಗ್ರಾಮದ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ನೀರಿನ ಸಮಸ್ಯೆ ಇರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು ನಿರ್ಲಕ್ಷ ವಹಿಸಿರುವ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಇಚ್ಛಾ ಶಕ್ತಿ ಕೊರತೆಗೆ ಮಹಿಳೆಯರು ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೀರಿಗಾಗಿ ವಿಕಲಚೇತನ ಪರದಾಟ :
ಬಂಡಳ್ಳಿ ಗ್ರಾಮದ ವಿಕಲಚೇತನ ಮಹೇಶ್ ಈ ಬಡಾವಣೆಯಲ್ಲಿ ವಾಸವಾಗಿದ್ದು ನೀರಿನ ಸಮಸ್ಯೆ ಇರುವುದರಿಂದ ಮಧ್ಯರಾತ್ರಿ ನೀರಿನ ಸಂಗ್ರಹಣೆಗಾಗಿ ನಲ್ಲಿ ಮುಂದೆ ನಿಂತು ಬಿಂದಿಗೆಗಳಲ್ಲಿ ನೀರು ಸಂಗ್ರಹಿಸಿ ತನ್ನ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಲು ಸಹ ಪರದಾಡಿದ ಸ್ಥಿತಿ ಉಂಟಾಗಿದೆ ಮುಂದಾದರು ಇತ್ತ ಜನಪ್ರತಿನಿಧಿಗಳು ಅಧಿಕಾರಿಗಳು ಗಮನಹರಿಸಿ ಗ್ರಾಮದಲ್ಲಿರುವ ನೀರಿನ ಸಮಸ್ಯೆಯನ್ನು ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮಹಿಳೆಯರಾದ ಪಾತಮ್ಮ ಮಂಗಳಮ್ಮ ಚಿನ್ನಮ್ಮ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಕೋಟ್
ಬೋರ್‌ವೆಲ್‌ಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕುಸಿತಿದೆ ಹೀಗಾಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದು ಅಲ್ಲಿನ ನಿವಾಸಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.ವಿಶ್ವನಾಥ್ , ಪಿಡಿಒ ಬಂಡಳ್ಳಿ