ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು

KannadaprabhaNewsNetwork |  
Published : Mar 29, 2026, 01:30 AM IST
28ಎಚ್ಎಸ್ಎನ್4 : ಅಪಘಾತಕ್ಕೆ ಕಾರಣವಾದ ಕಾರು. ಒಳ ಚಿತ್ರದಲ್ಲಿ ಮೃತಪಟ್ಟ ಬಾಲಕ. | Kannada Prabha

ಸಾರಾಂಶ

ಕಾಮಸಮುದ್ರದ ರಾಧಕೃಷ್ಣ ಎಂಬುವರ ಪುತ್ರ ಚಿರಂತ್‌ ಗೌಡ ಹಳೇಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಶಾಲೆ ಮುಗಿಸಿಕೊಂಡು ಹಳೇಕೋಟೆಯಿಂದ ಸರ್ಕಾರಿ ಬಸ್ಸಿನಲ್ಲಿ ಕಾಮಸಮುದ್ರಕ್ಕೆ ಆಗಮಿಸಿದ್ದಾನೆ. ಬಸ್ಸಿನಿಂದ ಇಳಿದು ಮನೆಗೆ ತೆರಳಲು ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚಿರಂತ್‌ಗೌಡ ಸ್ಥಳದಲೇ ಮೃತಪಟ್ಟಿದ್ದಾನೆ. ನಗರ ಠಾಣೆ ಪೊಲೀಸರು ಕಾರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಕಾಮಸಮುದ್ರ ಸಮೀಪದ ಹೆದ್ದಾರಿಯಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚಿರಂತ್‌ಗೌಡ(೧೪) ಎಂಬ ೮ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕಾಮಸಮುದ್ರದ ರಾಧಕೃಷ್ಣ ಎಂಬುವರ ಪುತ್ರ ಚಿರಂತ್‌ ಗೌಡ ಹಳೇಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಶಾಲೆ ಮುಗಿಸಿಕೊಂಡು ಹಳೇಕೋಟೆಯಿಂದ ಸರ್ಕಾರಿ ಬಸ್ಸಿನಲ್ಲಿ ಕಾಮಸಮುದ್ರಕ್ಕೆ ಆಗಮಿಸಿದ್ದಾನೆ. ಬಸ್ಸಿನಿಂದ ಇಳಿದು ಮನೆಗೆ ತೆರಳಲು ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚಿರಂತ್‌ಗೌಡ ಸ್ಥಳದಲೇ ಮೃತಪಟ್ಟಿದ್ದಾನೆ. ನಗರ ಠಾಣೆ ಪೊಲೀಸರು ಕಾರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜೃಂಭಣೆಯಿಂದ ನಡೆದ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ
ಸಿಎನ್‌ಜಿ ದರ ಏರಿಕೆಗೆ ಆಟೋ ಚಾಲಕರ ಆಕ್ರೋಶ