ಹಸಿವಿನಿಂದ ವಿದ್ಯಾರ್ಥಿನಿ ಅಸ್ವಸ್ಥ: ಎಸಿ ಮನೆ ಮುಂದೆ ಧರಣಿ

KannadaprabhaNewsNetwork |  
Published : May 25, 2024, 12:47 AM IST
ಫೋಟೋ24ಕೆಪಿಎಲ್ಎನ್ಜಿ01  | Kannada Prabha

ಸಾರಾಂಶ

ಲಿಂಗಸುಗೂರಿನ ಅಂಬೇಡ್ಕರ್‌ ವಸತಿ ನಿಲಯದಲ್ಲಿ ಊಟ ಸಿಗದೆ ರೊಚ್ಚಿಗೆದ್ದ ವಿದ್ಯಾರ್ಥಿನಿಯರಿಂದ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರ ಜೊತೆಗೆ ಅಡುಗೆ ಸಿಬ್ಬಂದಿ ಹಾಗೂ ವಾರ್ಡನ್ ಸೇರಿದಂತೆ ಇಲಾಖೆ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಊಟವಿಲ್ಲದೇ ವಿದ್ಯಾರ್ಥಿನೋರ್ವಳು ಅಸ್ವಸ್ಥಗೊಂಡಿದ್ದು, ವಸತಿ ನಿಲಯದ ಊಟಕ್ಕೆ ಆಗ್ರಹಿಸಿ ವಿದ್ಯಾರ್ಥಿನಿಯರು ಗುರುವಾರ ರಾತ್ರಿ ಸಹಾಯಕ ಆಯುಕ್ತರ ನಿವಾಸದ ಮುಂದೆ ರಾತ್ರಿ 11 ಗಂಟೆಯಿಂದ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.

ಪುರಸಭೆ ವ್ಯಾಪ್ತಿಯ ಹುಲಿಗುಡ್ಡದಲ್ಲಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಯದಲ್ಲಿ ನಿಗದಿತ ಸಮಯಕ್ಕೆ ಅಡುಗೆ ತಯಾರಿಸಿಲ್ಲ. ವಿದ್ಯಾರ್ಥಿನಿಯರಿಗೆ ಊಟ ಸಿಗದಿದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಸಹಾಯಕ ಆಯುಕ್ತರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸುವ ವೇಳೆ ಹಸಿವಿನಿಂದ ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಪ್ರಿಯಾಂಕ ಎಚ್ಚರ ತಪ್ಪಿದಳು. ಈ ವೇಳೆ ಪೋಲೀಸ್ ವಾಹನದಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.

ಸಹಾಯಕ ಆಯುಕ್ತರ ನಿವಾಸದ ಮುಂದೆ ಧರಣಿ ನಡೆಸುವ ಸ್ಥಳಕ್ಕೆ ವಾರ್ಡನ್ ನಾಗರತ್ನ ಆಗಮಿಸಿ ವಿದ್ಯಾರ್ಥಿನಿಯರಿಗೆ ಧರಣಿ ಕೈಬಿಡಬೇಕೆಂದು ಮನವಿ ಮಾಡಿದರು. ಇದಕ್ಕೆ ಜಗ್ಗದ ವಿದ್ಯಾರ್ಥಿನಿಯರು ಧರಣಿ ಮುಂದೆವರಿಸಿ ವಸತಿನಿಲಯದಲ್ಲಿ ವಿದ್ಯಾರ್ಥಿನಿಯರ ಗೋಳು ಕೇಳುವವರು ಇಲ್ಲದಂತಾಗಿದೆ. ಸೂಕ್ತ ಸೌಲತ್ತುಗಳು ಸಿಗದೆ ಪರದಾಡುವಂತಾಗಿದೆ. ಊಟವಿಲ್ಲದೇ ವಿದ್ಯಾರ್ಥಿನಿ ಓರ್ವಳು ಅಸ್ವಸ್ಥಗೊಂಡಿದ್ದಾಳೆ. ವಿದ್ಯಾರ್ಥಿನಿಯರ ಜೊತೆಗೆ ಅಡುಗೆ ಸಿಬ್ಬಂದಿ ಹಾಗೂ ವಾರ್ಡನ್ ಸೇರಿದಂತೆ ಇಲಾಖೆ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವಕ್ತಪಡಿಸಿದರು.

ವಿದ್ಯಾರ್ಥಿನಿ ಪ್ರೇಮಾ ಅಸ್ವಸ್ಥ:ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಪ್ರೇಮಾ ಗೌಡೂರು ತಾಂಡಾ ಹಸಿವಿನಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ವಿದ್ಯಾರ್ಥಿನಿಯನ್ನು ಪೋಲೀಸ್ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಬಳಿಕ ವಿದ್ಯಾರ್ಥಿನಿಯ ಆರೋಗ್ಯ ಸುಧಾರಿಸಿದೆ ಎಂದು ತಿಳಿದು ಬಂದಿದೆ.

ನಂತರ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್‌ ಡಾ.ಮಲ್ಲಪ್ಪ ಯರಗೋಳ, ಧರಣಿ ನಿತರ ವಿದ್ಯಾರ್ಥಿನಿಯರ ಮನವೊಲಿಸಿ ವಸತಿ ನಿಲಯದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲಾಗುವುದು ಎಂದು ಮನವಿ ಮಾಡಿದರು. ನಂತರ ವಿದ್ಯಾರ್ಥಿನಿಯರು ಧರಣಿ ಕೈಬಿಟ್ಟು ವಸತಿ ನಿಯಲಕ್ಕೆ ತೆರಳಿದರು.

ವಸತಿ ನಿಯದಲ್ಲಿನ ಸಮಸ್ಯೆಗಳ ತಾಲೂಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಮನಕ್ಕೆ ತಂದರೆ ಆತ ದೂರು ನೀಡುವ ವಿದ್ಯಾರ್ಥಿನಿಯರು ನಿಮ್ಮ ವಿಳಾಸ ನೀಡಬೇಕು ಎಂದು ಹೇಳುತ್ತಾರೆ. ಸಮಸ್ಯೆ ಹೇಳಿದ ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ಪ್ರಶ್ನಿಸುತ್ತಾರೆ ಎಂದು ಆರೋಪಿಸಿದರು.

ಅಡುಗೆದಾರರ ವರ್ಗಾವಣೆ:

ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಊಟ ಸರಿಯಾದ ಸಮಯಕ್ಕೆ ಮಾಡದ ಅಡುಗೆದಾರರನ್ನು ವರ್ಗಾವಣೆ ಮಾಡಿ ಬೇರೆ ಅಡುಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಉಳಿದ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಸಿದ್ದನಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ