ಎಸ್.ಎಂ.ಸೈಯದ್ ಗಜೇಂದ್ರಗಡ
ಗಜೇಂದ್ರಗಡ, ನರೇಗಲ್ ಪಟ್ಟಣಗಳು ಸೇರಿದಂತೆ ಮುಶಿಗೇರಿ, ನಿಡಗುಂದಿ ಗ್ರಾಮಗಳಲ್ಲಿ ತಲಾ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಇದ್ದು ಗಜೇಂದ್ರಗಡ, ನರೇಗಲ್ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದರೆ, ನಿಡಗುಂದಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ ವಿಭಾಗಗಳಿವೆ. ಆದರೆ ಮುಶಿಗೇರಿ ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರವಿದೆ. ಇತ್ತ ನರೇಗಲ್ ಹೊರತುಪಡಿಸಿ ಎಲ್ಲ ಕಾಲೇಜುಗಳಲ್ಲಿ ಪ್ರಭಾರಿ ಪ್ರಾಚಾರ್ಯರಿದ್ದು, ಅರ್ಧದಷ್ಟು ಉಪನ್ಯಾಸಕರು ಹಾಗೂ ಡಿ ಗ್ರುಪ್ ಮತ್ತು ಪ್ರಥಮ ದರ್ಜೆ ಸಹಾಯಕರ ಕೊರತೆ ಎದ್ದು ಕಾಣುತ್ತಿದೆ.
ಗಜೇಂದ್ರಗಡದ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು ೧೧ ಕಾಯಂ ಉಪನ್ಯಾಸಕರಿರಬೇಕು. ಆದರೆ ೬ ಉಪನ್ಯಾಸಕರು ಹಾಗೂ ೫ ಅತಿಥಿ ಉಪನ್ಯಾಸಕರಿದ್ದಾರೆ. ನಿಡಗುಂದಿಯ ಡಾ. ವೀರಪ್ಪ ಸಂಕನೂರ ಸರ್ಕಾರಿ ಪಿಯು ಕಾಲೇಜಿಗೆ ಪ್ರತಿವರ್ಷ ಉತ್ತಮ ಫಲಿತಾಂಶ ಲಭಿಸುತ್ತಿದೆ. ಕಾಲೇಜಿನಲ್ಲಿ ಓಟ್ಟು ೭ಕಾಯಂ ಉಪನ್ಯಾಸಕರಿರಬೇಕು. ಸದ್ಯ ೪ ಜನರಿದ್ದು, ಇಬ್ಬರು ಅತಿಥಿ ಉಪನ್ಯಾಸಕರ ಜತೆಗೆ ಬೇರೆ ಕಾಲೇಜಿನ ಒಬ್ಬ ಉಪನ್ಯಾಸಕರನ್ನು ನಿಯುಕ್ತಿ ಮಾಡಿಕೊಳ್ಳಲಾಗಿತ್ತು. ಅಲ್ಲದೆ ಈ ತಿಂಗಳ (ಮೇ) ಅಂತ್ಯಕ್ಕೆ ಸಮಾಜಶಾಸ್ತ್ರ ಉಪನ್ಯಾಸಕರು ನಿವೃತ್ತಿ ಹೊಂದಲಿದ್ದಾರೆ. ನರೇಗಲ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು ೧೪ ಕಾಯಂ ಉಪನ್ಯಾಸಕರಿರಬೇಕು. ಆದರೆ ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಅಕೌಂಟೆನ್ಸಿ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳ ಕಾಯಂ ಉಪನ್ಯಾಸಕರ ಕೊರತೆಯಿದೆ. ಅಲ್ಲದೆ ಸದ್ಯದಲ್ಲಿಯೇ ಕನ್ನಡ ಉಪನ್ಯಾಸಕರು ಪದೋನ್ನತಿ ಹೊಂದಲಿದ್ದಾರೆ. ಮುಶಿಗೇರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ೭ ಕಾಯಂ ಉಪನ್ಯಾಸಕರ ಪೈಕಿ ಇಬ್ಬರು ಮಾತ್ರ ಇದ್ದಾರೆ.ಗಜೇಂದ್ರಗಡದ ಕಾಲೇಜಿನಲ್ಲಿ ಮಹಿಳಾ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕತೆಯಿದ್ದು, ಇನ್ನುಳಿದ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕಿದ್ದರೂ ಸಹ ಆಡಳಿತ ಹಾಗೂ ಸಂಬಂಧಿಸಿದವರು ಇತ್ತ ಗಮನ ಹರಿಸದಿರುವುದು ವಿಪರ್ಯಾಸ.
ಬಾಕ್ಸ್
ಪಟ್ಟಣದಲ್ಲಿ ಸರ್ಕಾರಿ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರು ಎರಡ್ಮೂರು ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ ಪರಿಣಾಮ ಒಂದು ಅವಧಿ ಈ ಕಾಲೇಜಿನಲ್ಲಿ ಮುಗಿಸಿದರೆ ಇನ್ನೊಂದು ಅವಧಿ ಮತ್ತೊಂದು ಕಾಲೇಜಿನ ಉಪನ್ಯಾಸ ಮಾಡುತ್ತಾರೆ. ಪರಿಣಾಮ ವಿದ್ಯಾರ್ಥಿಗಳಿಗೆ ಉಪನ್ಯಾಸಕಿಂತ ಅವರ ಹಾಜರಿ ಮುಖ್ಯವಾಗಿಸಿಕೊಂಡಿರುತ್ತಾರೆ. ಹೀಗಾಗಿ ಪ್ರವೇಶಾತಿ ಹಾಗೂ ಫಲಿತಾಂಶ ಕುಂಠಿತವಾಗುತ್ತಿದೆ. ಗಜೇಂದ್ರಗಡ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣವಾಗುತ್ತಿದೆ. ಅಲ್ಲದೆ ಕಲಾ ವಿಭಾಗ ಹೊರತುಪಡಿಸಿದರೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಫಲಿತಾಂಶ ಸೊರಗುತ್ತಿದೆ. ಹೀಗಾಗಿ ಕಾಯಂ ಉಪನ್ಯಾಸಕರ ನೇಮಕಕ್ಕೆ ಸರ್ಕಾರಕ್ಕೆ ಮುಂದಾಗಬೇಕು ಎನ್ನುವ ಒತ್ತಾಯಗಳಿವೆ.
ಕಾಲೇಜುಗಳು; ಒಟ್ಟು ಇರಬೇಕಾದ ಉಪನ್ಯಾಸಕರ ಸಂಖ್ಯೆ; ಖಾಯಂ ಉಪನ್ಯಾಸಕರುನರೇಗಲ್ -೧೪-೩
ನಿಡಗುಂದಿ -೭ -೪
ಗಜೇಂದ್ರಗಡ-೧೧-೬ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಹಾಗೂ ಫಲಿತಾಂಶ ವರ್ಷದಿಂದ ವರ್ಷಕ್ಕೆ ಸುಧಾರಣೆಯಾಗುತ್ತಿದೆ ಎಂದು ಪ್ರಭಾರಿ ಪ್ರಾಚಾರ್ಯರು, ಸರ್ಕಾರಿ ಪಿಯು ಕಾಲೇಜು ಗಜೇಂದ್ರಗಡ ಬಿ.ಬಿ.ಗುರಿಕಾರ ತಿಳಿಸಿದ್ದಾರೆ.