ಹುಬ್ಬಳ್ಳಿ:
ಕೌಶಲ್ಯ ಅಭಿವೃದ್ಧಿ, ಸ್ವಚ್ಛ, ಸುಂದರ, ಸುರಕ್ಷಿತ ಪಾದಚಾರಿ ಮಾರ್ಗ ಎಂಬ ಆಶಯದಡಿ ನಡೆದ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಅಂಗಡಿಕಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿ, ಫುಟ್‌ಪಾತ್‌ಗಳಲ್ಲಿ ಕಂಡುಬಂದ ಅಡೆತಡೆ ಗುರುತಿಸಿ ಛಾಯಾಚಿತ್ರಗಳ ಮೂಲಕ ದಾಖಲಿಸಿದರು. ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ಕ್ಯೂ ಆರ್ ಕೋಡ್ (ಪ್ರತಿಕ್ರಿಯೆ ಸ್ಕ್ಯಾನರ್) ಅಳವಡಿಸಲಾತು.
ವಿದ್ಯಾನಗರ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ಎಂ. ಹಾಗೂ ಹಿರಿಯ ವೈದ್ಯರಾದ ಡಾ. ಮಹಾಂತೇಶ ಸಜ್ಜನರ, ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ಮೋಹನ್ ಜೆ. ಅವರು ಅಭಿಯಾನಕ್ಕೆ ಚಾಲನೆ ನೀಡಿದರು.ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಸ್ಥಳದಲ್ಲೇ ಉಪಸ್ಥಿತರಿದ್ದು ಅಗತ್ಯ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ನೀಡಿದರು. ಈ ಸಂದರ್ಭದಲ್ಲಿ ಕಾಟನ್ ಮಾರ್ಕೆಟ್ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ಮೋಹನ್ ಜೆ. ನೇತೃತ್ವದ ಟ್ರಾಫಿಕ್ ಪೊಲೀಸ್ ತಂಡವೂ ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿ ಪಾದಚಾರಿ ಸುರಕ್ಷತೆ ಕುರಿತು ಮಾರ್ಗದರ್ಶನ ನೀಡಿತು.
ಈ ಯೋಜನೆಗೆ ಶಾಲೆಯ ಅಧ್ಯಕ್ಷ ಡಾ. ಕೆ.ಎ. ಪ್ರಸಾದ ಹಾಗೂ ಅಕಾಡೆಮಿಕ್ ಹೆಡ್ ಶ್ರೇಯಾ ಕಿರಣ್ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆಯಿತು.