ಆತ್ಮ ರಕ್ಷಣೆಗೆ ವಿದ್ಯಾರ್ಥಿಗಳು ಕರಾಟೆ ಕಲಿಯಬಹುದು: ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Sep 02, 2025, 01:00 AM IST
ಕರಾಟೆ ಕಲಿಯುವ ಮೂಲಕ ವಿದ್ಯಾರ್ಥಿಗಳು ಆತ್ಮ ರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆಃ ಶಾಸಕ ಜಿ.ಹೆಚ್.ಶ್ರೀನಿವಾಸ್  | Kannada Prabha

ಸಾರಾಂಶ

ತರೀಕೆರೆಕರಾಟೆ ಕಲಿಯುವ ಮೂಲಕ ವಿದ್ಯಾರ್ಥಿಗಳು ಆತ್ಮ ರಕ್ಷಣೆ ಮಾಡಿಕೊಳ್ಳಬಹುದು. ಪಟ್ಟಣದಲ್ಲಿ ಕರಾಟೆ ತರಬೇತುದಾರ ಸೈಯದ್ ರಿಯಾಜ್ ಸೇವಾ ಮನೋಭಾವದಿಂದ ಮಕ್ಕಳಿಗೆ ಕರಾಟೆ ಕಲೆ ಕಲಿಸುತ್ತಿದ್ದಾರೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ತರೀಕೆರೆ ಓಪನ್ ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಕರಾಟೆ ಕಲಿಯುವ ಮೂಲಕ ವಿದ್ಯಾರ್ಥಿಗಳು ಆತ್ಮ ರಕ್ಷಣೆ ಮಾಡಿಕೊಳ್ಳಬಹುದು. ಪಟ್ಟಣದಲ್ಲಿ ಕರಾಟೆ ತರಬೇತುದಾರ ಸೈಯದ್ ರಿಯಾಜ್ ಸೇವಾ ಮನೋಭಾವದಿಂದ ಮಕ್ಕಳಿಗೆ ಕರಾಟೆ ಕಲೆ ಕಲಿಸುತ್ತಿದ್ದಾರೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ನಡೆದ ತರೀಕೆರೆ ಓಪನ್ 7 ನೇ ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟಿಸಿ ಮಾತನಾಡಿ ಪಟ್ಟಣದಲ್ಲಿ 7 ನೇ ಬಾರಿಗೆ ಸೌತ್ ಇಂಡಿಯಾ ಚಾಂಪಿಯನ್ ಶಿಪ್ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಕರಾಟೆ ಕಲಿಕೆಗೆ ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಪುರಸಭೆ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು 30 ವರ್ಷಗಳಿಂದ ಕಷ್ಟದ ಸಮಯದಲ್ಲು ಸರ್ಕಾರದ ನೆರವಿಲ್ಲದೇ ಮಕ್ಕಳಿಗೆ ಕರಾಟೆ ಕಲಿಸಲಾಗುತ್ತಿದೆ. ಪುರಸಭೆಯಿಂದ ಬಾಕ್ಸಿಂಗ್ ತರಬೇತಿಗೆ ಬೇಕಾದ ಸ್ಥಳ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಪುರಸಭೆ ಸದಸ್ಯ ಟಿ.ಜಿ.ಶಶಾಂಕ್ ಮಾತನಾಡಿ ಮಕ್ಕಳಲ್ಲಿ ಕ್ರೀಡಾ ಚಟುವಟಿಕೆಗಳು ಉಲ್ಲಾಸ ಹಾಗೂ ಸ್ಪೂರ್ತಿ ತುಂಬುತ್ತದೆ ಎಂದರು. ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಸರ್ಕಾರ ಕರಾಟೆ ಕಲೆಯನ್ನು ಪಠ್ಯವಾಗಿಸಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.ಕನಾ೯ಟಕ ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ವಿನೋದ್ ಮಾತನಾಡಿ ಬೇರೆ ಜಿಲ್ಲೆಗಳಲ್ಲಿ ಕರಾಟೆಗೆ ಪ್ರೋತ್ಸಾಹ ಸಿಕ್ಕಿದೆ. ತರೀಕೆರೆಯಲ್ಲು ಸಹ ಆಡಳಿತದಿಂದ ಸಹಕಾರ ಕೋರಿದರು.ಹಿರಿಯ ಕರಾಟೆ ತರಬೇತುದಾರರಿಗೆ ಸನ್ಮಾನ ಮಾಡಲಾಯಿತು. ಸೈಯದ್ ರಿಯಾಜ್, ಕುಮಾರಸ್ವಾಮಿ , ಬಾಲರಾಜ್, ಆರೀಫ್, ಕೌಶಿಕ್, ಮನು, ನರಸಿಂಹ ಸ್ವಾಮಿ ಹಾಗೂ ಇತರರು ಇದ್ದರು.

-

31ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ತರೀಕೆರೆ ಓಪನ್ 7 ನೇ ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಸದಸ್ಯರಾದ ಟಿ.ಜಿ.ಶಶಾಂಕ, ಟಿ.ದಾದಾಪೀರ್ ಮತ್ತಿತರರು ಇದ್ದರು

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?