ಶ್ರದ್ಧೆಯಿಂದ ಕಲಿತರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ: ತೇಜಸ್ವಿನಿ

KannadaprabhaNewsNetwork |  
Published : Jan 07, 2025, 12:33 AM IST
ಚಿಕ್ಕಮಗಳೂರಿನ ಜೆವಿಎಸ್‌ ಶಾಲೆಯಲ್ಲಿ ನಡೆದ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ತೇಜಸ್ವಿನಿ ಅವರು ಉದ್ಘಾಟಿಸಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್‌, ಮನುಕುಮಾರ್‌, ಲಕ್ಷ್ಮಣ್‌ಗೌಡ, ರೀನಾ ಸುಜೇಂದ್ರ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಶಿಕ್ಷಕರು ಹೇಳುವ ಪಾಠವನ್ನು ಶ್ರದ್ಧೆಯಿಂದ ಕಲಿತಾಗ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ಸಹಕಾರಿ ಯಾಗುತ್ತದೆ ಎಂದು ಡಿಆರ್‌ಸಿಎಸ್‌ನ ಉಪ ನಿರ್ದೇಶಕರಾದ ತೇಜಸ್ವಿನಿ ಹೇಳಿದರು.

ನಗರದ ಜೆವಿಎಸ್ ಶಿಕ್ಷಣ ಸಮೂಹ ಸಂಸ್ಥೆಗಳು ಏರ್ಪಡಿಸಿದ್ದ ಕ್ರೀಡಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಿಕ್ಷಕರು ಹೇಳುವ ಪಾಠವನ್ನು ಶ್ರದ್ಧೆಯಿಂದ ಕಲಿತಾಗ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ಸಹಕಾರಿ ಯಾಗುತ್ತದೆ ಎಂದು ಡಿಆರ್‌ಸಿಎಸ್‌ನ ಉಪ ನಿರ್ದೇಶಕರಾದ ತೇಜಸ್ವಿನಿ ಹೇಳಿದರು.ನಗರದ ಜೆವಿಎಸ್ ಶಿಕ್ಷಣ ಸಮೂಹ ಸಂಸ್ಥೆಗಳು ಏರ್ಪಡಿಸಿದ್ದ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ, ಕಾಲೇಜುಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳು ಆಯೋಜನೆಗೊಂಡಾಗ ಪಠ್ಯೇತರ ವಿಷಯಗಳಲ್ಲಿ ವಿದ್ಯಾರ್ಥಿ ಗಳಿಗೆ ಆಸಕ್ತಿ ಮೂಡುತ್ತದೆ. ಜೊತೆಗೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ನಾಂದಿಯಾಗುತ್ತದೆ ಎಂದು ತಿಳಿಸಿದರು.ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಇಟ್ಟು ಪರಿಶ್ರಮದಿಂದ ಪ್ರಯತ್ನ ಮಾಡಿದರೆ ಸಾಧನೆ ಮಾಡಬಹುದು. ಜೊತೆಗೆ ಪಠ್ಯಗಳ ವಿಷಯದಲ್ಲಿ ಅಧ್ಯಯನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಇಷ್ಟ ಪಟ್ಟು ಶಾಲೆಯಲ್ಲಿ ಕಲಿಯಬೇಕು ಆಗ ಮಾತ್ರ ತಮ್ಮ ಗುರಿ ಸಾಧಿಸಲು ಸಾಧ್ಯ. ಸಮಾಜದ ಎಲ್ಲರೊಂದಿಗೆ ಸಂಯಮ ದಿಂದ ಬೆರೆತಾಗ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ ಎಂಬುದು ಕ್ರೀಡಾಕೂಟ ಮತ್ತು ಕ್ರೀಡೆಗಳ ಉದ್ದೇಶ ಎಂದರು.ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಯುತ್ತದೆ. ಈ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆ ಗುರುತಿಸಿ ಹೊರ ತರುವ ಜವಾಬ್ದಾರಿ ಇದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಜೆವಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳು ಚಿಕ್ಕಮಗಳೂರಿನಲ್ಲಿ ಪ್ರತಿಷ್ಠಿತ ಶಾಲೆಗಳಾಗಿವೆ, ಕಳೆದ 3 ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ಶಾಲೆಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲಾಗಿದ್ದು, ಶಿಕ್ಷಕರು, ಕಾಲೇಜು ಪ್ರಾಧ್ಯಾಪಕರು ಸೇರಿದಂತೆ ಸರ್ವರ ಪರಿಶ್ರಮದಿಂದ ಇಂದು 850 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆಂದರು.ಶಾಲಾ ಸಹ ಕಾರ್ಯದರ್ಶಿ ಕೆ.ಕೆ.ಮನುಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಜೆವಿಎಸ್ ಶಾಲೆಯಲ್ಲಿ ಸಿಬಿಎಸ್‌ಇ ಪಠ್ಯ ಕ್ರಮ ತರಲು ತಯಾರಿ ನಡೆಸಲಾಗುತ್ತಿದೆ, ಪ್ರತಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್‌ಗೌಡ, ನಿರ್ದೇಶಕರಾದ ಎಂ.ಅಶೋಕ್, ಬಿ.ಸಿ.ಶ್ರೀನಾಥ್, ನಾರಾಯಣಗೌಡ, ಸುರೇಂದ್ರ, ಸಲಹಾ ಸಮಿತಿ ಸದಸ್ಯ ಎಸ್.ಎಸ್. ವೆಂಕಟೇಶ್, ಎಂ.ಪಿ.ಗಂಗೇಗೌಡ, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ, ಕಾರ್ಯದರ್ಶಿ ಅಮಿತಾ ವಿಜೇಂದ್ರ, ನಿರ್ದೇಶಕರಾದ ಮಂಜುಳಾ ಹರೀಶ್, ವೇದಾ ಚಂದ್ರಶೇಖರ್, ಪ್ರಾಂಶುಪಾಲೆ ತೇಜಸ್ವಿನಿ, ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕ ತೇಜಸ್‌ಮೂರ್ತಿ, ಮುಖ್ಯ ಶಿಕ್ಷಕ ವಿಜಿತ್ ಶಶಿಧರ್ ಉಪಸ್ಥಿತರಿದ್ದರು.

5 ಕೆಸಿಕೆಎಂ 3ಚಿಕ್ಕಮಗಳೂರಿನ ಜೆವಿಎಸ್‌ ಶಾಲೆಯಲ್ಲಿ ನಡೆದ ಕ್ರೀಡಾ ದಿನಾಚರಣೆಯನ್ನು ತೇಜಸ್ವಿನಿ ಉದ್ಘಾಟಿಸಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್‌, ಮನುಕುಮಾರ್‌, ಲಕ್ಷ್ಮಣ್‌ಗೌಡ, ರೀನಾ ಸುಜೇಂದ್ರ ಇದ್ದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?