ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಪರಿಚಯ ಅಗತ್ಯ: ವಿಶಾಲಾಕ್ಷಿ

KannadaprabhaNewsNetwork |  
Published : May 09, 2025, 12:33 AM IST
ಶಿಗ್ಗಾಂವಿ ಗಂಜಿಗಟ್ಟಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕಾಲೇಜು ಬೋಧಕ ಸಿಬ್ಬಂದಿಯೊಂದಿಗೆ ತಿಮ್ಮಾಪುರದ ಎಂ.ಎಸ್. ಸೈನ್ಸ್‌ ಆ್ಯಂಡ್‌ ಟೆಕ್ನಾಲಾಜಿ ಪಾರ್ಕ್‌ಗೆ ಬುಧವಾರ ಭೇಟಿ ನೀಡಿದರು. | Kannada Prabha

ಸಾರಾಂಶ

ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ ಏನು? ಎಂಬುದನ್ನು ಡೆಮೋಗಳ ಮೂಲಕ ವಿಭಿನ್ನವಾಗಿ ವಿದ್ಯಾರ್ಥಿಗಳಿಗೆ ವಿವರಿಸುವ ಜತೆಗೆ ಅವುಗಳ ಅನುಭವವನ್ನು ಅವರಿಂದಲೇ ಪ್ರಯೋಗಿಸಿ ತೋರಿಸಲಾಗುತ್ತದೆ ಎಂದು ವಿಶಾಲಾಕ್ಷಿ ಹೇಳಿದರು.

ಶಿಗ್ಗಾಂವಿ: ತಂತ್ರಜ್ಞಾನದ ಪ್ರಮುಖ ವಿಷಯಗಳಾದ ಸೋಲಾರ್, ಸೆನ್ಸಾರ್‌, ರೋಬೋಟಿಕ್ಸ್‌ ಹಾಗೂ ಎಲ್‌ಸಿಡಿ ಅನಾವರಣಗಳ ಲಾಭಗಳೇನು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸುವ ಅಗತ್ಯ ಇದೆ ಎಂದು ಶಿಗ್ಗಾಂವಿ ಗಂಜಿಗಟ್ಟಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ವಿಶಾಲಾಕ್ಷಿ ಎಸ್. ಜಾಧವ ತಿಳಿಸಿದರು.

ತಾಲೂಕಿನ ತಿಮ್ಮಾಪುರದ ಎಂ.ಎಸ್. ಸೈನ್ಸ್ ಆ್ಯಂಡ್‌ ಟೆಕ್ನಾಲಾಜಿ ಪಾರ್ಕ್‌ಗೆ ಬುಧವಾರ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿದ ಬಳಿಕ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ ಏನು? ಎಂಬುದನ್ನು ಡೆಮೋಗಳ ಮೂಲಕ ವಿಭಿನ್ನವಾಗಿ ವಿದ್ಯಾರ್ಥಿಗಳಿಗೆ ವಿವರಿಸುವ ಜತೆಗೆ ಅವುಗಳ ಅನುಭವವನ್ನು ಅವರಿಂದಲೇ ಪ್ರಯೋಗಿಸಿ ತೋರಿಸಲಾಗುತ್ತದೆ ಎಂದು ವಿಶಾಲಾಕ್ಷಿ ಹೇಳಿದರು.

ಅತಿಥಿ ಉಪನ್ಯಾಸಕರಾದ ಶ್ರೇಯಾ ಪಾಟೀಲ್ ಹಾಗೂ ದೀಪಾ ಡಿ. ಜಕ್ಕನ್ನನವರ ಮಾತನಾಡಿ, ಐಟಿಐ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾರ್ಕ್‌ನ ಐದು ಗ್ಯಾಲರಿಗಳು ವಿಶಿಷ್ಟ ಅನುಭವ ನೀಡುತ್ತದೆ ಎಂದರು.

೪೪ ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿಯೊಂದಿಗೆ ಭಾಗವಹಿಸಿದ್ದರು.ಗ್ರಾಮೀಣ ಪ್ರದೇಶದಲ್ಲಿ ಉಚಿತ ಬೇಸಿಗೆ ಶಿಬಿರಕ್ಕೆ ಶ್ಲಾಘನೆ

ಹಾವೇರಿ: ನಗರ ಪ್ರದೇಶಗಳಲ್ಲಿ ಖಾಸಗಿ ಸಂಸ್ಥೆಗಳು ಬೇಸಿಗೆ ಶಿಬಿರ ನಡೆಸುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಉಚಿತವಾಗಿ ಬೇಸಿಗೆ ಶಿಬಿರ ನಡೆಸುತ್ತಿರುವುದು ಸಂತಸದ ಸಂಗತಿ ಎಂದು ಆಲದಕಟ್ಟಿ ಗ್ರಾಪಂ ಅಧ್ಯಕ್ಷ ನಿಂಗಪ್ಪ ನಿಂಬಕ್ಕನವರ ತಿಳಿಸಿದರು.

ತಾಲೂಕಿನ ಆಲದಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಆಲದಕಟ್ಟಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಹಾಗೂ ಆಶಾಕಿರಣ ಸಂಸ್ಥೆ ಸಹಯೋಗದಲ್ಲಿ ಜರುಗಿದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಾಯಕ ಅಂಗಡಿ ಮಾತನಾಡಿ, ಈ ಶಿಬಿರವು 15 ದಿನಗಳ ಕಾಲ ನಡೆಯುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳ ಸ್ನೇಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ದೇಶಿ ಆಟಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.ತರಬೇತಿ ಸಂಯೋಜಕ ಮುತ್ತುರಾಜ ಮಾದರ ಮಾತನಾಡಿ, ಮಗುವಿನಲ್ಲಿರುವ ಸೂಪ್ತ ಶಕ್ತಿ ಹೊರಹಾಕುವುದು, ಸಂವಹನ ಕೌಶಲ್ಯ, ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯತೆ ಇದೆ. ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಎನ್ನುವ ಮನೋಭಾವನೆಯಿಂದ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.ಎಸ್‌ಡಿಎಂಸಿ ಉಪಾಧ್ಯಕ್ಷರಾದ ನಯನಾ ಮಂಜುನಾಥ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ದಶಮನಿ, ಸಮೀರ ಯಲವದಹಳ್ಳಿ, ರುದ್ರೇಶ ಹಳ್ಳಿಕೇರಿ, ಎಸ್‌ಡಿಎಂಸಿ ಸದಸ್ಯರಾದ ಪೂರ್ಣಿಮಾ ದಶಮನಿ, ಶಂಭು ಗೌಡಪ್ಪನವರ, ಮಾಲತೇಶ ಕೋಳೂರು ಪಾಲ್ಗೊಂಡಿದ್ದರು.ಪ್ರ‍್ರಧಾನ ಗುರುಗಳಾದ ಗಂಗಾಧರ ಜಾವೂರ ಸ್ವಾಗತಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕ ಎಸ್.ಕೆ. ಗೌಡಪ್ಪನವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶೇಷ ಅಗತ್ಯತೆಯುಳ್ಳ 50 ಮಕ್ಕಳ ವೈದ್ಯಕೀಯ ಮೌಲ್ಯಾಂಕನ: ಟಿ. ಮಂಜುನಾಥ್
ಕ್ರೀಡಾಂಗಣ ಕಟ್ಟಲು ಸ್ಥಳ ಮಂಜೂರು