ರಾಜ್ಯದ 3 ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ

KannadaprabhaNewsNetwork | Published : Nov 7, 2024 12:35 AM

ಸಾರಾಂಶ

ಚಿಕ್ಕಮಗಳೂರು, ರಾಜ್ಯದ 3 ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (ಎಸ್‌ಐಡಿಎಚ್) ಕಲ್ಲು ಹಾಕಿದೆ.- ಇದು, ಮಕ್ಕಳ ಪೋಷಕರ ಆಕ್ರೋಶದ ಮಾತು.ಎಸ್‌ಐಡಿಎಚ್‌ನಲ್ಲಿನ ಉಂಟಾದ ತಾಂತ್ರಿಕ ದೋಷದಿಂದಾಗಿ ರಾಜ್ಯದ 3 ಐಟಿಐ ಕಾಲೇಜುಗಳ ಸುಮಾರು 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

- ಪ್ರಥಮ ಹಾಗೂ ದ್ವಿತೀಯ ವರ್ಷದ ಪರೀಕ್ಷೆ । ಎಸ್‌ಐಡಿಎಚ್ ತಂತ್ರಾಂಶದ ಅವಾಂತರಆರ್. ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯದ 3 ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (ಎಸ್‌ಐಡಿಎಚ್) ಕಲ್ಲು ಹಾಕಿದೆ.- ಇದು, ಮಕ್ಕಳ ಪೋಷಕರ ಆಕ್ರೋಶದ ಮಾತು.ಎಸ್‌ಐಡಿಎಚ್‌ನಲ್ಲಿನ ಉಂಟಾದ ತಾಂತ್ರಿಕ ದೋಷದಿಂದಾಗಿ ರಾಜ್ಯದ 3 ಐಟಿಐ ಕಾಲೇಜುಗಳ ಸುಮಾರು 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ವಿಜಾಪುರ ಜಿಲ್ಲೆಯ ಗಾಣಗಪುರದ ಸರ್ಕಾರಿ ಐಟಿಐ ಕಾಲೇಜುಗಳ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯಿಂದ ಹೊರಗೆ ಉಳಿಯುವಂತಾಗಿದೆ.ಮೊದಲನೇ ವರ್ಷದ ಶಿಕ್ಷಣ ಮುಗಿಯುತ್ತಿದ್ದಂತೆ ಎರಡನೇ ವರ್ಷಕ್ಕೆ ಸಕಾಲದಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ತರಗತಿಗಳಿಗೂ ಹಾಜರಾಗಿದ್ದಾರೆ. ಪರೀಕ್ಷಾ ಶುಲ್ಕವನ್ನು ಸಹ ಪಾವತಿ ಮಾಡಿದ್ದಾರೆ. ಆದರೆ, ಪರೀಕ್ಷೆ ಬರೆಯಲು ಈ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವೇ ಬಂದಿಲ್ಲ. ಇದರಿಂದ ಈ ವರ್ಷ ಪರೀಕ್ಷೆ ಮುಗಿಸಿ, ಸರ್ಟಿಫಿಕೇಟ್‌ ಪಡೆದು ಕಾಲಾಜಿನಿಂದ ಹೊರ ಹೋಗಿ ತಮ್ಮ ಭವಿಷ್ಯರೂಪಿಸಿಕೊಳ್ಳ ಬೇಕಿದ್ದ ವಿದ್ಯಾರ್ಥಿಗಳು ಇನ್ನೂ ಒಂದು ವರ್ಷ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಅದೇ ರೀತಿ ಮೊದಲ ವರ್ಷದ ವಿದ್ಯಾರ್ಥಿಗಳಿಗೂ ಎರಡನೇ ವರ್ಷಕ್ಕೆ ತೆರಳಲು ಬರೆಯಬೇಕಾದ ವಾರ್ಷಿಕ ಪರೀಕ್ಷೆಗೆ ಪ್ರವೇಶ ಪತ್ರ ಬಂದಿಲ್ಲ ಹಾಗಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಪರೀಕ್ಷೆ ಬರೆಯದೆ ಎರಡನೇ ವರ್ಷಕ್ಕೆ ತೆರಳಲು ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲದೆ ಇರುವುದರಿಂದ ಬಹಳಷ್ಟು ತೊಂದರೆಯಾಗಿದೆ.ಅವಕಾಶ ವಂಚಿತ:ಪ್ರತಿ ವರ್ಷ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಐಟಿಐ ಕಾಲೇಜಿನ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಈ ಬಾರಿಯೂ ಕೂಡ ನಿಗದಿತ ಸಮಯಕ್ಕೆ ಪರೀಕ್ಷೆ ನಡೆದಿದೆ. ರಾಜ್ಯದಲ್ಲಿ ಒಟ್ಟು 270 ಸರ್ಕಾರಿ ಐಟಿಐ ಕಾಲೇಜುಗಳಿದ್ದು, ಇದರ ಪೈಕಿ ಈ 3 ಕಾಲೇಜುಗಳು ಹೊರತುಪಡಿಸಿ ಇನ್ನುಳಿದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಐಟಿಐ ಕಾಲೇಜುಗಳಲ್ಲೂ ಪರೀಕ್ಷೆಗಳು ನಡೆದಿವೆ. ಕಳೆದ 15 ದಿನಗಳ ಹಿಂದೆ ಫಲಿತಾಂಶವೂ ಕೂಡ ಬಂದಿದೆ.ಈ ಬಾರಿ ರೈಲ್ವೆ ಇಲಾಖೆಯಲ್ಲಿ ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ತಮ್ಮ ಮಕ್ಕಳು ಪರೀಕ್ಷೆ ಬರೆದು ತೇರ್ಗಡೆ ಆಗಿದ್ದರೆ ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ಪರೀಕ್ಷೆ ತೆಗೆದುಕೊಳ್ಳಲು ಅನುಕೂಲವಾಗುತ್ತಿತ್ತು. ಈ ಅವಕಾಶದಿಂದ ವಂಚಿತರಾಗಿದ್ದಾರೆಂದು ಪೋಷಕರು ಅಳಲನ್ನು ತೋಡಿಕೊಂಡಿದ್ದಾರೆ.ವರ್ಷ ಕಾಯಬೇಕು: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಒಂದೇ ವರ್ಷದಲ್ಲಿ ಮೂರು ಬಾರಿ ಬರೆಯಲು ಅವಕಾಶ ಇದೆ. ಆದರೆ, ಈ ಅವಕಾಶ ಐಟಿಐನಲ್ಲಿ ಇಲ್ಲ. ಒಮ್ಮೆ ವಿದ್ಯಾರ್ಥಿ ಅನುತ್ತೀರ್ಣವಾದರೆ ಆತ ಮತ್ತೊಮ್ಮೆ ಪರೀಕ್ಷೆ ಬರೆಯಲು ಒಂದು ವರ್ಷ ಕಾಯಬೇಕು. ಹಾಗಿರುವಾಗ ಈ ರೀತಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ (ತಾಂತ್ರಿಕ ದೋಷದಿಂದಾಗಿ) ನಿಯಮದಂತೆ 2025ರ ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಪರೀಕ್ಷೆಯನ್ನೆ ಬರೆಯಬೇಕು. ಇತ್ತ ಕಾಲೇಜು ಮುಗಿದಿದೆ. ಪರೀಕ್ಷೆಗಾಗಿ ಮಾತ್ರ ಇನ್ನೂ ಒಂದು ವರ್ಷ ಕಾಯಬೇಕಾದ ಅನಿವಾರ್ಯತೆಯನ್ನು ವಿದ್ಯಾರ್ಥಿಗಳು ಎದುರಿಸುವಂತಾಗಿದೆ.. ಒಟ್ಟಾರೆ ತಂತ್ರಾಂಶದ ಎಡವಟ್ಟು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕಲ್ಲು ಹಾಕಿದೆ.-- ಬಾಕ್ಸ್--ಚಿಕ್ಕಮಗಳೂರು ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪರೀಕ್ಷೆ ವಂಚಿತ ಪ್ರಥಮ- ದ್ವಿತೀಯ ವರ್ಷದ ಒಟ್ಟು 130 ವಿದ್ಯಾರ್ಥಿಗಳುಫಿಟ್ಟರ್‌ - 45, ಇ ಆ್ಯಂಡ್‌ ಎಂ- 31ವೆಲ್ಡರ್‌ - 10ಮೆಕಾನಿಕಲ್‌ ವೆಹಿಕಲ್‌ - 21ಸಿ ಆ್ಯಂಡ್‌ ಸಿ 23--- ಬಾಕ್ಸ್ --ಚಿಕ್ಕಮಗಳೂರಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ನನ್ನ ಇಬ್ಬರು ಮಕ್ಕಳು ಇ ಆ್ಯಂಡ್‌ ಎಂ (ಎಲೆಕ್ಟ್ರೀಕಲ್ ಆಂಡ್ ಮೆಕಾನಿಕಲ್)ನಲ್ಲಿ ಓದುತ್ತಿದ್ದಾರೆ. ಈ ಬಾರಿ ಎರಡನೇ ವರ್ಷದ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ, ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ತಂತ್ರಾಂಶ ದೋಷದಿಂದ ಮಕ್ಕಳಿಗೆ ಅನ್ಯಾಯವಾಗಿದೆ. ಸರ್ಕಾರ ಇದನ್ನು ಸರಿಪಡಿಸಬೇಕು.- ಧರ್ಮಶೆಟ್ಟಿಪೋಷಕರುಪೋಟೋ ಫೈಲ್ ನೇಮ್ 6 ಕೆಸಿಕೆಎಂ 1---ಸರ್ಕಾರಿ ಐಟಿಐ ಕಾಲೇಜಿನ ವಾರ್ಷಿಕ ಪರೀಕ್ಷೆ ನಡೆಸಲು ಪ್ರವೇಶ ಪತ್ರಗಳು ಬರುತ್ತಿದ್ದಂತೆ ನಮ್ಮ ಕಾಲೇಜಿಗೆ ಸಂಬಂಧಿಸಿದಂತೆ ಇಲಾಖೆಯ ಸಂಬಂಧಪಟ್ಟವರ ಗಮನಕ್ಕೆ ತರಲಾಗಿತ್ತು. ಆದರೆ, ಪ್ರವೇಶ ಪತ್ರ ಬರದೆ ಇದ್ದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಎಸ್‌ಐಡಿಎಚ್‌ನಲ್ಲಿನ ದೋಷದಿಂದಾಗಿ ಈ ರೀತಿ ಆಗಿದೆ.- ಪ್ರದೀಪ್ಪ್ರಾಂಶುಪಾಲರುಸರ್ಕಾರಿ ಐಟಿಐ ಕಾಲೇಜುಚಿಕ್ಕಮಗಳೂರು-----------------------------------------ಪೋಟೋ ಫೈಲ್‌ ನೇಮ್‌ 6 ಕೆಸಿಕೆಎಂ 2ಚಿಕ್ಕಮಗಳೂರಿನ ಸರ್ಕಾರಿ ಐಟಿಐ ಕಾಲೇಜು.

Share this article