ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Oct 11, 2025, 12:02 AM IST
10ಎಚ್ಎಸ್ಎನ್6 : ಹೊಳೆನರಸೀಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಾಸನದ ಶಾಲಾ ಕಾಲೇಜಿಗೆ ತೆರಳಲು ಅಗತ್ಯ ಬಸ್ ವ್ಯವಸ್ಥೆ ಇಲ್ಲದೇ ಹೈರಾಣವಾಗಿದ್ದ ವಿದ್ಯಾರ್ಥಿಗಳು ಬಸ್‌ಗಳು ನಿಲ್ದಾಣದಿಂದ ಹೊರಹೋಗದಂತೆ ತಡೆದು ಪ್ರತಿಭಟಿಸಿದರು. | Kannada Prabha

ಸಾರಾಂಶ

ಹೊಳೆನರಸೀಪುರ ಪಟ್ಟಣದಿಂದ ಹಾಸನದ ಶಾಲಾ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು ಅಗತ್ಯ ಬಸ್ ವ್ಯವಸ್ಥೆ ಇಲ್ಲದೇ ಹೈರಾಣಾಗಿದ್ದ ವಿದ್ಯಾರ್ಥಿಗಳು ಶುಕ್ರವಾರ ಬಸ್‌ಗಳು ನಿಲ್ದಾಣದಿಂದ ಬಸ್ಸುಗಳು ಹೊರಹೋಗದಂತೆ ತಡೆದು ಪ್ರತಿಭಟಿಸಿದರು. ಕರ್ನಾಟಕ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಆರಂಭಿಸಿದ ಬಳಿಕ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಬಹುತೇಕ ಎಲ್ಲಾ ಬಸ್‌ಗಳಲ್ಲಿ ಜನದಟ್ಟನೆಯೊಂದಿಗೆ ಓಡಾಡುವ ಪರಿಸ್ಥಿತಿಯೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಂಕಷ್ಟ ಉಂಟು ಮಾಡಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದಿಂದ ಹಾಸನದ ಶಾಲಾ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು ಅಗತ್ಯ ಬಸ್ ವ್ಯವಸ್ಥೆ ಇಲ್ಲದೇ ಹೈರಾಣಾಗಿದ್ದ ವಿದ್ಯಾರ್ಥಿಗಳು ಶುಕ್ರವಾರ ಬಸ್‌ಗಳು ನಿಲ್ದಾಣದಿಂದ ಬಸ್ಸುಗಳು ಹೊರಹೋಗದಂತೆ ತಡೆದು ಪ್ರತಿಭಟಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಆರಂಭಿಸಿದ ಬಳಿಕ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಬಹುತೇಕ ಎಲ್ಲಾ ಬಸ್‌ಗಳಲ್ಲಿ ಜನದಟ್ಟನೆಯೊಂದಿಗೆ ಓಡಾಡುವ ಪರಿಸ್ಥಿತಿಯೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಂಕಷ್ಟ ಉಂಟು ಮಾಡಿದೆ. ಪಟ್ಟಣದಿಂದ ಹಾಸನದ ವಿವಿಧ ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯ ಬೆಳ್ಳಗೆ ೭.೩೦ರಿಂದ ಶಾಲೆ ಕಾಲೇಜಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಲು ಪ್ರಾರಂಭಿಸುವ ವಿದ್ಯಾರ್ಥಿಗಳು ೯.೩೦ರ ತನಕ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಲೇ ಇರುತ್ತಾರೆ. ಆದರೆ ೮.೧೫ ತನಕ ಸಮಯಕ್ಕೆ ಸರಿಯಾಗಿ ಕೆಲವೊಮ್ಮೆ ಆಗಮಿಸುವ ಬಸ್‌ಗಳು ವಿದ್ಯಾರ್ಥಿಗಳಲ್ಲಿ ನೆಮ್ಮದಿ ಮೂಡಿಸಿದರೇ ನಂತರಲ್ಲಿ ಬಸ್‌ಗಳು ಆಗಮಿಸದೇ ವಿದ್ಯಾರ್ಥಿಗಳು ಶಿಕ್ಷಕರ ಬೈಗುಳ ಜತೆಗೆ ಹಾಜರಾತಿ ಕೊರತೆಯಿಂದ ಅನುಭವಿಸುವ ಮಾನಸಿಕ ಹಿಂಸೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಗೊತ್ತು.

ಈ ಕುರಿತು ವಿದ್ಯಾರ್ಥಿಯೊಬ್ಬ ಮಾತನಾಡಿ ಪ್ರತಿನಿತ್ಯ ನಾವುಗಳು ಅನುಭವಿಸುವ ಹಿಂಸೆಯ ಬಗ್ಗೆ ನಮ್ಮ ತಾಲೂಕಿನ ರಾಜಕಾರಣಿಗಳಿಗೆ ಯಾವುದೇ ಕಾಳಜಿಯಿಲ್ಲ, ಅವರು ನೀ ಹೊಡೆದಂತೆ ಮಾಡು, ನಾ ಅತ್ತಂತ್ತೆ ಮಾಡುತ್ತೇನೆ ಎಂಬ ವೃತ್ತಿಪರ ರಾಜಕಾರಣಿಯಂತೆ ವರ್ತಿಸುತ್ತಿರುವುದು ಸರಿಯಲ್ಲ. ಇಂದಿನ ತಂತ್ರಜ್ಞಾನ ಎಲ್ಲವನ್ನೂ ಅರ್ಥೈಸಿಕೊಳ್ಳುವ ಜ್ಞಾನ ನೀಡಿದ್ದು, ನಾವು ಇಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಗೌರವವನ್ನು ಉಳಿಸಿಕೊಳ್ಳುವುದು ಅಥವಾ ತಿರಸ್ಕರಿಸುವುದು ಅವರಿಗೆ ಬಿಟ್ಟ ವಿಚಾರ ಹಾಗೂ ಸಮಸ್ಯೆಗೆ ಕೆಲ ದಿನಗಳಲ್ಲಿ ಮುಕ್ತಿ ದೊರೆಯುತ್ತೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ