ವಿದ್ಯಾರ್ಥಿಗಳು ಉತ್ತಮ ಮೌಲ್ಯ ಅಳವಡಿಸಿಕೊಳ್ಳಿ: ಕೆ.ಜೆ.ಕಾಂತರಾಜ್

KannadaprabhaNewsNetwork |  
Published : Jan 09, 2025, 12:45 AM IST
೮ ಬೀರೂರು ೧ಬೀರೂರಿನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ  ಮಂಗಳವಾರ ಸಂಜೆ ಕನ್ನಡ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಸ್ಕೂಲ್‌ನ ಶಾಲಾ ವಾರ್ಷಿಕೋತ್ಸವವವನ್ನು ತರೀಕೆರೆ ಎಸಿ ಕೆ.ಜೆ.ಕಾಂತರಾಜ್ ಉದ್ಘಾಟಿಸಿದರು. ಕನ್ನಡ ಸಂಘದ ಅಧ್ಯಕ್ಷ ವಿಶ್ವನಾಥಗೌಡ, ಬಿಇಒ ರುದ್ರಮ್ಮ, ಮುಖ್ಯಶಿಕ್ಷಕಿ ಸಬೀನ ಮೇರಿ ಇದ್ದರು. | Kannada Prabha

ಸಾರಾಂಶ

Students should adopt good values: K.J. Kantaraj

-ಉದ್ಘಾಟನೆ

-----

-ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬ್ರೈಟ್ ಫ್ಯೂಚರ ಇಂಗ್ಲೀಷ್ ಶಾಲೆ ವಾರ್ಷಿಕೋತ್ಸವ

----

ಕನ್ನಡಪ್ರಭ ವಾರ್ತೆ ಬೀರೂರು

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಂಸ್ಕಾರದಂತಹ ಉತ್ತಮ ಮೌಲ್ಯಗಳನ್ನು ರೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಹೇಳಿದರು.

ಅವರು ಕನ್ನಡ ಸಂಘದ ಸಹಯೋಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬ್ರೈಟ್‌ ಫ್ಯೂಚರ್ ಇಂಗ್ಲಿಷ್‌ ಸ್ಕೂಲ್‌ನ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜೀನವದಲ್ಲಿ ಸಾಧನೆ ಮಾಡಬೇಕಾದರೆ ವಿದ್ಯಾರ್ಥಿಗಳು ವಿದ್ಯೆಯನ್ನು ಒಲಿಸಿಕೊಂಡು ಸೋಮಾರಿ ತನವನ್ನು ತ್ಯಜಿಸಬೇಕು. ಮುಂದೆ ಗುರಿ ಇದ್ದು, ನಮ್ಮೊಂದಿಗೆ ಗುರುಗಳಿದ್ದರೆ ಏನನ್ನಾದರೂ ಸಾಧಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ದೊರೆತ ಜ್ಞಾನವನ್ನು ಸದುಪಯೋಗಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಆತ್ಮವಿಶ್ವಾಸದಿಂದ ತಲೆಎತ್ತಿ ನಿಲ್ಲಬಹುದು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಣ ಎತ್ತರದ ಸಾಧನೆಗೆ ಅಡಿಪಾಯವಾಗಿದ್ದು, ನಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡಾಗ ಏನನ್ನಾದರೂ ಸಾಧಿಸಲು ಸಾಧ್ಯ. ವಿಭಿನ್ನ ಸಾಧನೆಗಳ ಮೂಲಕ ಬ್ರೈಟ್ ಫ್ಯೂಚರ್ ಶಾಲೆ ಉನ್ನತಿ ಗಳಿಸಿ ಅಪಾರ ಪೋಷಕರ ಮನಗೆಲ್ಲುತ್ತಿರುವುದಕ್ಕೆ ಆಗಮಿಸಿರುವ ಪೋಷಕರೆ ಸಾಕ್ಷಿ. ವಿದ್ಯಾರ್ಥಿಗಳು ಅಂಕಗಳಿಕೆಗೆ ಮೀಸಲಿರಿಸದೆ, ಪಠ್ಯೇತರ ಚಟುವಟಿಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ವೇದಿಕೆ ಸಾಕ್ಷಿಯಾಗಿದೆ ಎಂದರು.

ಬಿ.ಇಒ ಟಿ.ಆರ್.ರುದ್ರಪ್ಪ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಹೆಚ್ಚು ಆಸಕ್ತಿವಹಿಸಬೇಕು ಮತ್ತು ಆ ಶಾಲೆಯ ಅಭಿವೃದ್ಧಿ ಭಾಗವೇ ಪೋಷಕರು. ಪರಿಸರ ಸಂರಕ್ಷಣೆಯ ಬಗ್ಗೆ ಶಿಕ್ಷಕರು ಅರಿವು ಮೂಡಿಸುವ ಅವಶ್ಯಕತೆ ಇದೆ. ಆಧುನಿಕ ಸೋಗಿನಲ್ಲಿ ಇಂದು ಮಾನವ ಪರಿಸರವನ್ನು ಹಾಳುಗೆಡವುದರ ಪರಿಣಾಮ ಮುಂದಿನ ದಿನಗಳಲ್ಲಿ ಆಮ್ಲಜನಕವನ್ನು ಸಹ ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದರು.

ಬೇರೆಯವರ ಮೇಲೆ ಅವಲಂಬಿತರಾಗದೇ ದುಡಿದು ತಿನ್ನವ ಕಾಯಕವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಪೋಷಕರು ಕಲಿಸಿದಾಗ ಮಾತ್ರ ಅವರು ಜೀವನವನ್ನು ಎದುರಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಂಘದ ಅಧ್ಯಕ್ಷ ಹೆಚ್.ಸಿ.ವಿಶ್ವನಾಥ ಗೌಡ ಮಾತನಾಡಿ, ಪೋಷಕರು ಬರಿ ಮಕ್ಕಳನ್ನು ಶಾಲೆಗೆ ಕಳುಹಿಸಿದರೇ ನಮ್ಮ ಕೆಲಸ ಮುಗಿಯಿತೆಂದು ಸುಮ್ಮನೇ ಕೂರದೇ ತಾವು ಸಹ ಶಾಲೆಗೆ ಬಂದು ಮಕ್ಕಳ ಕಲಿಕೆ ಬಗ್ಗೆ ಗಮನಹರಿಸಿ ಅವರನ್ನು ತಿದ್ದುವ ಕೆಲಸ ಮಾಡಬೇಕು ಮತ್ತು ಮಕ್ಕಳನ್ನು ತಮ್ಮ ಆಸ್ತಿಯನ್ನಾಗಿ ಮಾಡಿಕೊಳ್ಳಲು ಯಾರು ಕದಿಯಲಾಗದ ಸಂಪತ್ತಾದ ವಿದ್ಯೆಯನ್ನು ಕಲಿಸಬೇಕು, ಪೋಷಕರು ಬರಿ ಶಿಕ್ಷಣ ನೀಡುವುದು ಮುಖ್ಯವಲ್ಲ ಅವರಿಗೆ ಮೂಲಭೂತ ಶಿಕ್ಷಣ ಮನೆಗಳಲ್ಲೇ ನೀಡಬೇಕೆಂದು ಸಲಹೆ ನೀಡಿದರು.

ಶಾಲಾ ಮುಖ್ಯಶಿಕ್ಷಕಿ ಸಬೀನಮೇರಿ ಶಾಲೆಯ ವಾರ್ಷಿಕ ವರದಿ ಮಂಡಿಸಿದರು.

ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ವಿ.ನಾಗೇಂದ್ರಶ್ರೇಷ್ಠಿ, ಶಿಕ್ಷಕರಾದ ರಾಘವೇಂದ್ರ, ಫಯಾಜ್, ಉಮೇಶ್, ಶಾಲಿನಿ, ಲೀಲಾವತಿ, ನಾಗರತ್ನ, ಮಂಜುನಾಥ, ಜ್ಯೋತಿ, ಸುಕನ್ಯ, ಸವಿತಾ, ಅನು಼ಷ, ಸರಿತ, ಪ್ರೇಮ, ಶೋಭ, ಪೂಜಾ, ಅನುರಾಧ ಶೀಲಾ , ಕೀರ್ತಿಕುಮಾರ್, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

ಗಮನಸೆಳೆದ ಎಸಿ ಗಾಯನ: ಎಸಿ ಕೆ.ಜೆ.ಕಾಂತರಾಜ್, ಕನ್ನಡದ ಮಾತು ಚೆಂದ ಕನ್ನಡದ ನೆಲ ಚೆಂದ ಕನ್ನಡಿಗರ ಮನಸ್ಸು ಚಿನ್ನ ಹಾಡನ್ನು ಹೇಳಿದಾಗ ಮಕ್ಕಳು ಅವರ ಹಾಡಿಗೆ ಕುಣಿದು ಕುಪ್ಪಳಿಸಿದರೆ, ಸರ್ಕಾರಿ ಅಧಿಕಾರಿಗಳಲ್ಲು ಉತ್ತಮ ಪ್ರತಿಭೆ ಇದೆ ಎಂದು ಪೋಷಕರು ಶ್ಲಾಘಿಸಿದರು.

-----

ಫೋಟೊ: ೮ ಬೀರೂರು ೧

ಬೀರೂರಿನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ಕನ್ನಡ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ಬ್ರೈಟ್ ಫ್ಯೂಚರ್ ಇಂಗ್ಲಿಷ್‌

ಸ್ಕೂಲ್‌ನ ಶಾಲಾ ವಾರ್ಷಿಕೋತ್ಸವವವನ್ನು ತರೀಕೆರೆ ಎಸಿ ಕೆ.ಜೆ.ಕಾಂತರಾಜ್ ಉದ್ಘಾಟಿಸಿದರು. ಕನ್ನಡ ಸಂಘದ ಅಧ್ಯಕ್ಷ ವಿಶ್ವನಾಥಗೌಡ, ಬಿಇಒ ರುದ್ರಮ್ಮ, ಮುಖ್ಯಶಿಕ್ಷಕಿ ಸಬೀನ ಮೇರಿ ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?