ಧಾರವಾಡ: ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಕ್ಷೇತ್ರಗಳ ಅರಿವು ತಿಳಿದುಕೊಳ್ಳುವಿಕೆಯತ್ತ ವಿದ್ಯಾರ್ಥಿಗಳು ತಮ್ಮ ಚಿತ್ತ ಹರಿಸಬೇಕು. ಆ ಮೂಲಕ ಸಾಧನೆಯ ಶಿಖರ ತಲುಪಲು ಸಾಧ್ಯ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಡಾ. ಸೂರಜ ಜೈನ್ ಮಾತನಾಡಿ, ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕ. ಹೀಗಾಗಿ ವಿದ್ಯಾರ್ಥಿಗಳು ಕಲೆ, ಕ್ರೀಡೆ ಸೇರಿದಂತೆ ಇನ್ನಿತರ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸನ್ನದ್ಧರಾಗಬೇಕು ಎಂದರು.
ಸಿದ್ಧಲಿಂಗಯ್ಯ ಹಿರೇಮಠ ಹಾಗೂ ದಾನೇಶ್ವರಿ ಅಂಗಡಿ ನಿರೂಪಿಸಿದರು. ವಿಜಯಲಕ್ಷ್ಮಿ ಸ್ವಾಗತಿಸಿದರು. ರಂಜಿತಾ ಬಳಿಗೇರಿ ಸ್ವಾಗತಿಸಿದರು. ಸಂಹಿತಾ ಹೆಗಡೆ ವಂದಿಸಿದರು. ಡಾ.ಕೆ.ಎಚ್. ನಾಗಚಂದ್ರ, ಪ್ರೊ. ವಿವೇಕ ಲಕ್ಷ್ಮೇಶ್ವರ, ಡಾ. ಆರ್.ವಿ. ಚಿಟಗುಪ್ಪಿ, ಪ್ರೊ. ಎನ್.ಜಿ. ಪುಡಕಲಕಟ್ಟಿ, ಪ್ರೊ. ಶ್ರೀಕಾಂತ ರಾಗಿಕಲ್ಲಾಪುರ, ಶ್ರವಣಕುಮಾರ ಯೋಗಿ, ಜಿನ್ನಪ್ಪ ಕುಂದಗೋಳ, ಪಲ್ಲವಿ ಸುಂಕದ ಮತ್ತಿತರರು ಇದ್ದರು.