ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಬುದ್ದ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಚಿಂತನಶೀಲರಾಗಬೇಕಿದೆ ಎಂದು ಪಟ್ಟಣದ ಸಾಹಿತಿ ಮನಸುಳಿ ಮೋಹನ್
ಹೇಳಿದ್ದಾರೆ. ಅವರು, ತಾಲೂಕು ಕನ್ನಡ ಸಾಹಿತ್ಯ. ಪರಿಷತ್ತು, ಮಹಿಳಾ ಘಟಕ, ಹೋಬಳಿ ಘಟಕ, ಯುವ ಘಟಕ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗಿರಿನಗರ ಡಾ. ಬಿ. ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ದಲಿತ ಸಾಹಿತ್ಯದಲ್ಲಿ ಸಾಂಸ್ಕೃತಿಕ ಚಿಂತನೆ ಎಂಬ ವಿಷಯದ ಕುರಿತು ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ದಲಿತ ಮತ್ತು ಬಲಿತವರ ಮಧ್ಯೆ ಬಹಳ ಕಂದಕವಿದೆ.ಬುದ್ಧ, ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಿದೆ. ಅವರ ವಿಚಾರಧಾರೆ ಮನನ ಮಾಡಿಕೊಂಡು ಜೀವನ ಮಾಡಬೇಕಿದೆ. ನಮಗೆ ಮಹಾತ್ಮ ಗಾಂಧಿ ಸ್ವಾತಂತ್ರ್ಯತಂದುಕೊಟ್ಟು ನಮ್ಮ ಜೀವನ ನೆಮ್ಮದಿಯಾಗಿಸಿದ್ದಾರೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರಪಂಚದಲ್ಲೆ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟಿದ್ದಾರೆ, ಸಾವಿರಾರು ಪುಸ್ತಕಗಳನ್ನು ಓದಿ ನಮಗೆ ಜ್ಞಾನದ ಸಂಪತ್ತನ್ನು ಪಸರಿಸಿದ್ದಾರೆ. ಅವರ ಚಿಂತನೆ ಪುಸ್ತಕಗಳನ್ನೊದಿದರೆ ಸಾಕು ನಾವು ಧನ್ಯರಾಗುತ್ತೇವೆ. ವಿದ್ಯಾರ್ಥಿಗಳು ಮೊದಲು ಅವರ ಪುಸ್ತಕ ಓದಬೇಕು ಎಂದು ತಿಳಿಸಿದರು.ಕವಾಲಿ ಸೋಮಶೇಖರ್ ಮಾತನಾಡಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪ್ರಸ್ತುತ ಆಳವಡಿಸಿಕೊಂಡು ಅವರ ಚಿಂತನೆಗಳನ್ನು ಮೇಲಕು ಹಾಕಬೇಕಿದೆ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಕಸಾಪ ಪ್ರತಿದಿನ ಕಾರ್ಯಕ್ರಮ ಆಯೋಜಿಸುತ್ತಿದೆ, ವಿದ್ಯಾರ್ಥಿಗಳಿಗೆ ಒಳ್ಳೆಯ ಉಪನ್ಯಾಸಕರಿಂದ ವಿಚಾರ - ಮಂಥನದ ಮೂಲಕ ಜ್ಞಾನದ ಅರಿವು ಮುಟ್ಟಿಸುವ ಹಂಬಲದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳಿಂದ ಪ್ರಯೋಜನವಾದರೆ ನಮಗೆ ಸಂತೋಷ ಎಂದ ಅವರು ವಸತಿ ನಿಲಯದ ಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು,ಕನ್ನಡಶ್ರೀ ಭಗವಾನ್ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ಅರಿವು ವೇದಿಕೆ ಶಿವಣ್ಣ, ಲೇಖಕ ತ.ಮ.ದೇವಾನಂದ್, ಮುಗುಳಿ ಮಂಜಯ್ಯ, ವಸತಿ ನಿಲಯದ ಮುಬಾರಕ್, ಶಿಕ್ಷಕರಾದ ಟಿ.ಗಿರೀಶ್, ಚಂದ್ರಶೇಖರ್, ಮಂಜುನಾಥ್, ಶೇಖರಪ್ಪ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.18ಕೆಟಿಆರ್.ಕೆ.3ಃ
ತರೀಕೆರೆಯಲ್ಲಿ ತಾಲೂಕು ಕಸಾಪ, ಮಹಿಳಾ ಘಟಕ, ಹೋಬಳಿ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಸಿದ್ದ ಶ್ರಾವಣ ಸಾಹಿತ್ಯ. ಸಂಭ್ರಮ ಉದ್ಘಾಟನೆಯನ್ನು ಕನ್ನಡ ಶ್ರೀ ಬಿ.ಎಸ್.ಭಗವಾನ್ ನೆರವೇರಿಸಿದರು. ತಾ.ಕಸಾಪ ಅಧ್ಯಕ್ಷ ರವಿದಳವಾಯಿ, ಸಾಹಿತಿ ಮನಸುಳಿ ಮೋಹನ್, ಕವಾಲಿ ಸೋಮಶೇಖರ್, ಲೇಖಕ ತ.ಮ.ದೇವಾನಂದ್ ಮತ್ತಿತರರು ಇದ್ದರು.