ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರು ಸಪ್ತಗಿರಿ ಆಂಗ್ಲ ಪ್ರೌಢಶಾಲೆ ಮತ್ತು ಎಸ್.ಜಿ.ಕಾನ್ವೆಂಟ್ ವತಿಯಿಂದ ಶಾಲೆಯ ಆವರಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಪ್ತಗಿರಿ ಸಂಭ್ರಮ-2025 ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಕನಸನ್ನು ಬಿತ್ತೋಣ, ಪುಸ್ತಕಗಳನ್ನು ಓದಲು ನೀಡೋಣ, ಉತ್ತಮ ವಾತವರಣ ಕಲ್ಪಿಸಿ ಕಲಿಕಾ ಪೂರಕ ಅವಕಾಶಗಳನ್ನು ಕಲ್ಪಿಸೋಣ, ಕನಸುಗಳನ್ನು ಸಾಕಾರಗೊಳಿಸಲು ಒಗ್ಗೂಡಿಸಿ ಶ್ರಮಿಸೋಣ ಎಂದರು.ಹಿರಿಯ ವಿದ್ಯಾರ್ಥಿನಿ ಜಿ.ಡಿ.ಅಮೃತಾ ಮಾತನಾಡಿ, ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳಿಗೆ ಉತ್ತಮ ಬುನಾದಿಯನ್ನು ಹಾಕಿಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ತುಂಬುವ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿದೆ ಎಂದರು.
ಕಳೆದ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೂರೆಗೊಂಡಿತು.ಎಚ್.ಎಂ.ಆನಂದ್ ಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗುಲ್ನಾಜ್ ಬಾನು, ಟ್ರಸ್ಟ್ ಕಾರ್ಯದರ್ಶಿ ಗಿರಿಗೌಡ, ಲತಾ, ಎ.ಎಸ್.ಐ.ಸಿದ್ದರಾಜು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಿ.ಎಸ್. ಕೃಷ್ಣ, ವಿದ್ಯಾ ಸಂಸ್ಥೆಯ ನಿರ್ದೇಶಕ ಎ.ಟಿ.ಶ್ರೀನಿವಾಸ್, ನರೀಪುರ ರಾಜು, ಮುಖಂಡರಾದ ಎಚ್.ಎಂ.ಆನಂದ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಜ.8ರಂದು ಡಾ.ವಿದ್ಯಾಭೂಷಣರಿಂದ ಭಕ್ತಿ ಸುಧೆಮಂಡ್ಯ:
ಶ್ರೀವ್ಯಾಸರಾಜ ಮಠ, ಶ್ರೀರಾಘವೇಂದ್ರಸ್ವಾಮಿಗಳ ಮಠ, ವಿ.ಶ್ರೀನಿವಾಸಮೂರ್ತಿ ಬಳಗ, ಶ್ರೀಕೃಷ್ಣಮಂಡಲಿ ಹಾಗೂ ಶ್ರೀ ಮಾದ್ವಸಂಘ ಇವರ ವತಿಯಿಂದ ಜ.೮ರಂದು ಸಂಜೆ ೬ ಗಂಟೆಗೆ ನಗರದ ಶ್ರೀವ್ಯಾಸರಾಜ ಮಠದ ಆವರಣದಲ್ಲಿ ಡಾ. ವಿದ್ಯಾಭೂಷಣ ಅವರಿಂದ ಭಕ್ತಿ ಸುಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ೬ ಗಂಟೆಯಿಂದ ೮.೩೦ರವರೆಗೆ ಡಾ. ವಿದ್ಯಾಭೂಷಣ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿ.ಶ್ರೀನಿವಾಸಮೂರ್ತಿ ಅವರು ಕೋರಿದ್ದಾರೆ.