ಚನ್ನಪಟ್ಟಣ: ವಿದ್ಯಾರ್ಥಿಗಳು ವಿದ್ಯಾರ್ಥಿ ಅಬಧಿಯಲ್ಲಿ ಸಮಯ ವ್ಯರ್ಥ ಮಾಡಬಾರದು. ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಕಲಿತ ಶಾಲೆ ಹಾಗೂ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಕಿವಿಮಾತು ಹೇಳಿದರು.
ನಗರದ ಬಡಾ ಮಕಾನ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಉರ್ದು ಶಾಲಾ ಮಕ್ಕಳಿಗೆ ಉಚಿತ ಟ್ರಾಕ್ ಸೂಟ್ ವಿತರಿಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು, ಶಿಕ್ಷಣದ ಬಗ್ಗೆ ಕಾಳಜಿಯಿರುವ ದಾನಿಗಳು ಮಕ್ಕಳಿಗೆ ಬೇಕಾಗಿರುವ ಕಲಿಕಾ ವಸ್ತುಗಳನ್ನು ಒದಗಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂದರು.ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್ ನಗರ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು ಅವರಿಗೆ ಸಾರ್ವಜನಿಕರ ಸಹಕಾರ ಬಹು ಮುಖ್ಯವಾಗಿದೆ. ನಗರದಲ್ಲಿ ಸ್ವಚ್ಛತೆ ಇದ್ದಾಗ ಮಾತ್ರ ನಾವುಗಳು ಉಸಿರು ಆಡಲು ಸಾಧ್ಯ. ಬೀಡಿ ಕಾಲೋನಿ ಅಭಿವೃದ್ಧಿ ಮತ್ತು ಯುಜಿಡಿ ಕಾಮಗಾರಿಗೆ ಬೇಕಾಗಿದ್ದ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ. ನಗರದ ಸ್ವಚ್ಛತೆಗೆ ನಾಗರಿಕರು ಕೈಜೋಡಿಸಬೇಕು ಎಂದರು.
ರಾಜ್ಯ ಹಜ್ ಕಮಿಟಿ ಛೇರ್ಮನ್ ಅಲ್ಹಾ ಜಲ್ಪೀಕರ್ ಅಹಮದ್ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಸಾಧನೆಯ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ಬರೀ ಪರೀಕ್ಷೆಯಲ್ಲಿ ತೇರ್ಗೇಡೆಯಾಗುವ ದೃಷ್ಟಿಯಿಂದಷ್ಟೇ ವಿದ್ಯಾಭ್ಯಾಸ ನಡೆಸದೆ ಕಲಿಯುವ ಆಸಕ್ತಿಯಿಂದ ಓದಬೇಕು ಎಂದು ಹೇಳಿದರು.ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ, ಸಿದ್ದೇಶ್, ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್, ಉಪಾಧ್ಯಕ್ಷ ಸಿ.ಜಿ.ಲೋಕೇಶ್, ಸದಸ್ಯರಾದ ಲಿಯಾಕತ್ ಆಲಿ ಖಾನ್, ಶಬೀರ್, ಮತೀನ್, ಅಭಿದಾ ಬಾನು, ನಿಗಾರ್ ಬೇಗಂ, ಎಸ್.ಕೆ.ಸಾದತ್ ವುಲ್ಲಾ ಸಕಾಫ್ ಇತರರಿದ್ದರು.
ಪೊಟೋ೩೧ಸಿಪಿಟಿ೧:ಚನ್ನಪಟ್ಟಣದ ಬಡಾ ಮಕಾನ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.