ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಾಸನ
ವಿದ್ಯಾರ್ಥಿಗಳು ತಮ್ಮಲ್ಲಿರುವ ಸ್ಫೂರ್ತಿಯನ್ನು ತಾವೇ ಎಚ್ಚರಿಸಿಕೊಳ್ಳುವ ಗುಣ ಬೆಳೆಸಿಕೊಂಡರೇ ಮುಂದೆ ಹೆಚ್ಚಿನ ಸಾಧನೆ ಮಾಡುವ ಅವಕಾಶ ಸಿಗುತ್ತದೆ ಎಂದು ಭಾರತ ಮತ್ತು ಪ್ರಚಾರ ಸಚಿವಾಲಯ ಮೈಸೂರಿನ ಕ್ಷೇತ್ರ ಪ್ರಚಾರ ಅಧಿಕಾರಿ ಎಸ್.ಟಿ. ಶೃತಿ ತಿಳಿಸಿದರು.ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ದೇವಾಂಗ ನೌಕರರ ಸಂಘ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ದೇವಾಂಗ ನೌಕರರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ದೇವಾಂಗ ನೌಕರರ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದ ಅವರು, ದೇವಾಂಗ ಸಮುದಾಯದ ಮಕ್ಕಳು ಹೆಚ್ಚಿನ ಅಂಕ ಗಳಿಸಿರುವುದು ನನಗೆ ಸಂತೋಷ ತಂದಿದೆ. ನಾನು ಮೂಲತಃ ಸಕಲೇಶಪುರ ತಾಲೂಕಿನರಾಗಿದ್ದು, ಸಾಧನೆ ಮಾಡಬೇಕು ಎಂದು ನಾನು ಓದಿದವಳಲ್ಲ. ಓದುತ್ತ ಇದ್ದು, ಹಂತ ಹಂತವಾಗಿ ಶಿಕ್ಷಣ ಪಡೆಯುತ್ತಲೆ ಈಗ ಸರಕಾರಿ ಹುದ್ದೆಯಲಿದ್ದೇನೆ. ವಿದ್ಯಾರ್ಥಿಗಳಲ್ಲಿ ಒಂದು ಸ್ಫೂರ್ತಿ ಎಂಬುದು ಇರಬೇಕು. ಅದನ್ನ ಆಗಾಗ ತಂದೆ ತಾಯಿ ಎಚ್ಚರಿಸಬಾರದು. ಸ್ನೇಹಿತರು, ಅಕ್ಕ ತಂಗಿ ಯಾರು ಕೂಡ ಎಚ್ಚರಿಸದೇ ನಮ್ಮನ್ನು ನಾವು ಎಚ್ಚರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ನಿಮ್ಮ ಚಿನ್ನದಂತ ಸಮಯವನ್ನು ನೀವೆ ಸೆಟ್ ಮಾಡಿಕೊಳ್ಳಬೇಕು. ಶಿಕ್ಷಣ ಪಡೆಯಬೇಕಾದರೇ ಅನೇಕರು ಕಷ್ಟಗಳನ್ನು, ಬಡತನವನ್ನು ನೋಡಿರುತ್ತಾರೆ. ನಮಗಿಂತ ಹೆಚ್ಚಿನ ಸಾಧನೆ ಮಾಡುವ ಅವಕಾಶ ಈಗಿನ ಮಕ್ಕಳಲ್ಲಿ ಇದೆ ಎಂದು ಸಲಹೆ ನೀಡಿದರು. ಇರುವ ಅವಕಾಶವನ್ನು ವ್ಯರ್ಥ ಮಾಡದೇ ಮುಂದೊಂದು ದಿನ ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದರು.ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತರಾದ ಜಿ.ಆರ್. ಮಂಜೇಶ್ ವಿಶೇಷ ಆಹ್ವಾನಿತರಾಗಿ ಭಾಗಹಿಸಿ ಮಾತನಾಡಿದ ಅವರು, ಎಲ್ಲಾರಿಗೂ ತಂದೆ ತಾಯಿ ಸಾಕಬೇಕು ಎನ್ನುವ ಆಸೆ ಇದ್ದೆ ಇರುತ್ತದೆ. ಆದರೆ ನಾವು ಎಷ್ಟು ಬೇಕು ಅಷ್ಟೆ ಕೆಲಸ ಮಾಡಬಹುದು. ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಇರುವ ೧೫ ಜನ ನರ್ಸ್‌ಗಳು ಅವರೆಲ್ಲಾ ದೇವಾಂಗ ಸಮುದಾಯದವರು. ನಮ್ಮ ಮಕ್ಕಳು ಚನ್ನಾಗಿ ಓದಬೇಕು. ಒಳ್ಳೆಯ ಹುದ್ದೆಗಳನ್ನು ಅಲಂಕರಿಸಬೇಕು. ಮಕ್ಕಳು ತಂದೆ ತಾಯಿಗೆ ಹೆಸರು ತಂದು ಕೊಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಕಿವಿಮಾತು ಹೇಳಿದರು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಪರಸ್ಪರ ಪರಿಚಯ ಮಾಡಿಕೊಂಡು ಒಳ್ಳೆಯ ವಿಚಾರವನ್ನು ಹಂಚಿಕೊಳ್ಳುವಂತೆ ಸಲಹೆ ನೀಡಿದರು.ಜಿಲ್ಲಾ ದೇವಾಂಗ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಎಸ್. ಸತೀಶ್, ಅಧ್ಯಕ್ಷ ಬಿ. ಸೋಮಶೇಖರ್, ಪಿ.ಇ.ಎಸ್. ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೆಜ್ಮೆಂಟ್ ಪ್ರಾಂಶುಪಾಲ ಬಿ.ಎನ್. ಯುವರಾಜು, ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್, ಅಬಕಾರಿ ಇಲಾಖೆ ಉಪ ಆಯುಕ್ತ ಡಿ. ನಾಗೇಶ್ ಕುಮಾರ್, ಹಿಮ್ಸ್ ಸಹ ಪ್ರಾಧ್ಯಾಪಕ ಡಾ. ಹಾಲೇಶ್, ಆರೋಗ್ಯಾಧಿಕಾರಿ ಡಾ. ವಿಜಯ್, ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್, ಅರಿವಳಿಕೆ ತಜ್ಞ ಡಾ. ಸುಹಾಸ್, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಲೋಕೇಶ್, ತಾಲೂಕು ಅಧ್ಯಕ್ಷ ಎಸ್. ವಸಂತ ಕುಮಾರ್, ಲೆಕ್ಕಪರಿಶೋಧಕ ಜಲೇಂದ್ರ, ಮಸ್ಕಾಂ ಅಧೀಕ್ಷಕ ಎಂಜಿನಿಯರ್ ಎ.ಎಸ್. ಮಂಜುನಾಥ್, ಡಿ.ಎಚ್. ಉಮೇಶ್, ಆರ್.ಟಿ.ಒ. ಮಲ್ಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಲ್. ದೇವರಾಜು ಇತರರು ಉಪಸ್ಥಿತರಿದ್ದರು. ಗೊರೂರು ಶಿವೇಶ್ ಕಾರ್ಯಕ್ರಮ ನಿರೂಪಿಸಿದರು.