ವಿದ್ಯಾರ್ಥಿಗಳು ತಂತ್ರಜ್ಞಾನದ ಬಗ್ಗೆ ಸಂಶೊಧನೆ ಮಾಡಿ: ತಾಳಂಪಳ್ಳಿ

KannadaprabhaNewsNetwork |  
Published : Mar 05, 2024, 01:36 AM IST
ಚಿತ್ರ 4ಬಿಡಿಆರ್52 | Kannada Prabha

ಸಾರಾಂಶ

ನಮ್ಮ ಸಂಸ್ಥೆ ಶೈಕ್ಷಣಿಕ ವಲಯದಲ್ಲಿ ಎಕ್ಯಾಡೆಮಿಕ್ ಹಾಗೂ ರಿಸರ್ಚ ಎರಡೂ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು, ಪದವಿ ಮುಗಿಸಿದರೆ ಸಾಲದು, ಜೊತೆ-ಜೊತೆಗೆ ಹೊಸ-ಹೊಸ ಟೆಕ್ನಾಲಾಜಿಗಳ ಬಗ್ಗೆ ಸಂಶೊಧನೆ ಮಾಡಬೇಕು.

ಬಸವಕಲ್ಯಾಣ: ನಮ್ಮ ಸಂಸ್ಥೆ ಶೈಕ್ಷಣಿಕ ವಲಯದಲ್ಲಿ ಎಕ್ಯಾಡೆಮಿಕ್ ಹಾಗೂ ರಿಸರ್ಚ ಎರಡೂ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು, ಪದವಿ ಮುಗಿಸಿದರೆ ಸಾಲದು, ಜೊತೆ-ಜೊತೆಗೆ ಹೊಸ-ಹೊಸ ಟೆಕ್ನಾಲಾಜಿಗಳ ಬಗ್ಗೆ ಸಂಶೊಧನೆ ಮಾಡಬೇಕು ಎಂದು ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷರಾದ ದೀಲಿಪಕುಮಾರ ಎಸ್.ತಾಳಂಪಳ್ಳಿ ನುಡಿದರು.

ಅವರು ನಗರದ ಹೊರವಲಯದಲ್ಲಿರುವ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಜೀವನದಲ್ಲಿ ಮುನ್ನುಗ್ಗಬೇಕಾಗುತ್ತದೆ. ಜೊತೆಗೆ ತಮ್ಮ ಜೀವನದಲ್ಲಿ, ಈ ದೇಶದ ಸನಾತನ ಕಾಲದ ಸಂಸ್ಕಾರವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಬೀದರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಬಿ.ಎಸ್.ಬಿರಾದರ ಮಾತನಾಡಿ, ವಿದ್ಯಾರ್ಥಿಗಳಿಗೆ, ಜೀವನದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ, ಒಳ್ಳೆಯ ಸಂಸ್ಕಾರ ಅಳವಡಿಸಿಕೊಂಡು, ರಾಜ್ಯ ಹಾಗೂ ದೇಶದ ಸೇವೆಯಲ್ಲಿ ತೊಡಗಿಕೊಂಡು, ಅದರ ಬೆಳವಣಿಗೆಗಾಗಿ ತಮ್ಮ ಕೊಡುಗೆಯನ್ನು ನೀಡಬೇಕೇಂದರು.

ಬೀದರ ವಿಶ್ವವಿದ್ಯಾಲಯ ಅಭಿವೃದ್ಧಿ ಹೊಂದ ಬೇಕಾದರೆ, ಬಸವಕಲ್ಯಾಣ ಶೈಕ್ಷಣಿಕ ಸಂಸ್ಥೆಯಂತಹ ಸಂಸ್ಥೆಗಳ ಸಹಕಾರ ಬಹಳ ಅತ್ಯಗತ್ಯ ಎಂದು ಹೇಳಿದರು.

ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಅಧಿಕಾರಿ ಡಾ.ಬಸವರಾಜ ಗಾದಗಿ ಮಾತನಾಡಿ, ಪದವಿ ಮುಗಿಸಿದ ನಂತರ ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕುವ ಬದಲು ತಮ್ಮ ಸ್ವಂತ ಉದ್ದಿಮೆ ಸ್ಥಾಪಿಸಿ ಜನರಿಗೆ ಉದ್ಯೋಗ ನೀಡುವಂತಹ ಉದ್ಯಮಿಗಳಾಗಿ ಬೆಳೆಯಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಪಿಐ ಅಲಿಸಾಬ ಮಾತನಾಡಿದರು. ಪ್ರಾಚಾರ್ಯ ಅಶೋಕಕುಮಾರ ವಣಗೇರಿ ಸ್ವಾಗತಿಸಿದರು ವರ್ಷಾ ಜಿ. ಹಾಗೂ ವಿದ್ಯಾಸಾಗರ ಮೂಲಗೆ ನಿರೂಪಿಸಿದರೆ ಡಾ: ಅರುಣಕುಮಾರ ಎಲಾಲ್ ವಂದಿಸಿದರು.

ನಂತರ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ವಿದ್ಯಾರ್ಥಿಗಳಿಂದ ಸಾರ್ವಜನಿಕರಿಗೆ ಮನಮುಟ್ಟುವಂತಹ ಸಾಂಸ್ಕೃತಿಕ ಕಾರ್ಯಕ್ರಮ ಜೊತೆಗೆ ರಾಮಾಯಣದ ನಾಟಕವು ಎಲ್ಲರ ಮನಸೂರೆಗೊಂಡಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಬಸವಕಲ್ಯಾಣ ಐಟಿಐ ಕಾಲೇಜಿನ ಪ್ರಾಚಾರ್ಯ ಶಿವಕುಮಾರ ಸ್ವಾಮಿ, ಬಸವಕಲ್ಯಾಣ ಪದವಿ ಕಾಲೇಜಿನ ಪ್ರಾಚಾರ್ಯ ದಿನೇಶ ಗಣೂರೆ, ಬಸವಕಲ್ಯಾಣ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ.ಎನ್. ಸ್ವಾಮಿ, ಬಸವಕಲ್ಯಾಣ ಪಾಲಿಟೇಕ್ನಿಕ್ ಕಾಲೇಜಿನ ಪ್ರಾಚಾರ್ಯ ಎನ್.ಆರ್.ಕೋಡ್ಲೆ, ಬಸವಕಲ್ಯಾಣ ಇಂಜಿನೀಯರಿಂಗ್ ಕಾಲೇಜಿನ ಪ್ರೇಮಸಾಗರ ಪಾಟೀಲ, ಋಷಿಕೇಶ ಭೂಸಾರೆ, ಶಂಕರ ಆಗರಗಿ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಎಲ್ಲಾ ಕಾಲೇಜಿನ ಶಿಕ್ಷಕ-ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’
ಅರೈ ಘಟಕಕ್ಕಾಗಿ ಮಂಡ್ಯದಲ್ಲೇ 100 ಎಕ್ರೆ ಕೊಡಿ: ಎಚ್‌ಡಿಕೆ ಪತ್ರ