ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಕಾಳಜಿ ವಹಿಸಲಿ

KannadaprabhaNewsNetwork |  
Published : Nov 21, 2025, 02:30 AM IST
ಫೋಟೋವಿವರ-(18ಎಂಎಂಎಚ್‌3) ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯೆ ಡಾ.ರೂಪಾ ಕಾರ್ಯಕ್ರಮ ಉದ್ಘಾಟಿಸಿದರು.  | Kannada Prabha

ಸಾರಾಂಶ

ದ.ರಾ. ಬೇಂದ್ರೆ ಜನಸಾಮಾನ್ಯರ ನಡುವೆ ಇದ್ದು, ಜನಪದ ದಾಟಿಯಲ್ಲಿ ಕಾವ್ಯಗಳನ್ನು ಸೃಷ್ಟಿ ಮಾಡಿದವರು,

ಮರಿಯಮ್ಮನಹಳ್ಳಿ: ದ.ರಾ. ಬೇಂದ್ರೆ ಮತ್ತು ಕುವೆಂಪು ಅವರು ಹೊಸಗನ್ನಡ ಕಾವ್ಯವನ್ನು ಸತ್ವಪೂರ್ಣವಾಗಿ ಬೆಳೆಸಲು ಇಂದಿನ ಕವಿಗಳಿಗೆ ಮಾರ್ಗದರ್ಶರಾಗಿ ಇದ್ದಂತಹವರು ಎಂದು ಹೊಸಪೇಟೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಯು.ಆರ್. ರಾಘವೇಂದ್ರ ರಾವ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಮರಿಯಮ್ಮನಹಳ್ಳಿ ಹೋಬಳಿ ಘಟಕ ಮತ್ತು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಾಲಿಕೆಯಲ್ಲಿ, “ದ.ರಾ.ಬೇಂದ್ರೆಯವರ ಬದುಕು ಮತ್ತು ಕಾವ್ಯ” ಎಂಬ ವಿಷಯದ ಕುರಿತು ಮಾತನಾಡಿದರು.ದ.ರಾ. ಬೇಂದ್ರೆ ಜನಸಾಮಾನ್ಯರ ನಡುವೆ ಇದ್ದು, ಜನಪದ ದಾಟಿಯಲ್ಲಿ ಕಾವ್ಯಗಳನ್ನು ಸೃಷ್ಟಿ ಮಾಡಿದವರು, ಬರೀ ಕಾವ್ಯಗಳ ಮಾತ್ರವಲ್ಲದೆ ವಿಮರ್ಶೆ, ನಾಟಕ, ಈ ರೀತಿ ಸಾಕಷ್ಟು ಸಾಹಿತ್ಯವನ್ನು ಸೃಷ್ಟಿಸುವ ಮೂಲಕ ಹೊಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ಕವಿಯಾಗಿದ್ದರು ಎಂದರು.ಕಾಲೇಜಿನ ಪ್ರಾಚಾರ್ಯೆ ಡಾ. ರೂಪಾ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ಬಿ.ಎಂ.ಎಸ್. ಮೃತ್ಯುಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಗ್ರಂಥಪಾಲಕ ಸೈಯ್ಯದ್ ಉಸ್ಮಾನ್, ಕಾಲೇಜಿನ ಅಭಿವೃದ್ದಿ ಸಮಿತಿಯ ಸದಸ್ಯ ಡಾ. ಈ. ಯರಿಸ್ವಾಮಿ ಮತ್ತಿತರರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಮೌನೇಶ್ ಬಡಿಗೇರ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಕಾರ್ಯದರ್ಶಿ ಬಿ. ಪರಶುರಾಮ ನಿರೂಪಿಸಿದರು.

ನಂತರ ನಡೆದ ಗಾಯನ ಕಾರ್ಯಕ್ರಮದಲ್ಲಿ ಗಾಯಕರಾದ ಹನುಮಯ್ಯ, ಮಹಾಂತೇಶ್ ನೆಲ್ಲುಕುದುರೆ, ಹನುಮನಹಳ್ಳಿ ದುರುಗೇಶ, ಜಿ. ನಾಗವೇಣಿ, ಗೊಲ್ಲರಹಳ್ಳಿಯ ಜಿ.ಕೆ. ಮೌನೇಶ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಚಾರ್ಯೆ ಡಾ. ರೂಪಾ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದು ಧರ್ಮ ಒಗ್ಗೂಡಿಸಿ ಗಟ್ಟಿಯಾಗಿಸಬೇಕು
ಚಾಲುಕ್ಯ ಉತ್ಸವಕ್ಕೆ ಇಂದು ಸಿಎಂ ಚಾಲನೆ