ಕನ್ನಡಪ್ರಭ ವಾರ್ತೆ ಹೊಸಕೋಟೆ
ಶುಕ್ರವಾರ ಬೆಳಗಿನ ಜಾವ ೪.೩೦ರ ಸುಮಾರಿಗೆ ಎಕ್ಸುಯುವಿ ಕಾರು-ಬೈಕ್-ಕ್ಯಾಂಟರ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ದೇವನಾಯಕನಹಳ್ಳಿಯ ಗಗನ್(26), ಕಾರಿನಲ್ಲಿದ್ದ ಬೆಂಗಳೂರು ನಿವಾಸಿ, ಆರ್‌ವಿ ಕಾಲೇಜು ವಿದ್ಯಾರ್ಥಿ ಅಶ್ವಿನ್ ನಾಯರ್(17), ಎಚ್‌ವಿಆರ್ ಲೇಔಟ್ ನಿವಾಸಿ ಸಿಎಂಆರ್ ಶಾಲೆ ವಿದ್ಯಾರ್ಥಿಗಳಾದ ಅರ್ಹನ್ ಶರೀಫ್(17), ಅಯನ್ ಆಲಿ(17), ಭರತ್(18), ಈತನ್ ಜಾರ್ಜ್(17) ಫರ್ಹಾನ್(17) ಮೃತ ದುರ್ದೈವಿಗಳು. ಅಪಘಾತದ ತೀವ್ರತೆ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ವಿದ್ಯಾರ್ಥಿ ಅಯನ್ ಆಲಿಗೆ ಸೇರಿದ ಕಾರಿನಲ್ಲಿ ಸ್ನೇಹಿತರೆಲ್ಲಾ ಜಾಲಿ ರೈಡ್‌ಗೆ ಬಂದಿದ್ದರು. ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಹೋಗುವ ಸಂದರ್ಭದಲ್ಲಿ ಎಂ.ಸತ್ಯವಾರ ಬಳಿ ಕಾರು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಗನ್ ಗಾಡಿ ಸಮೇತ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಹಾರಿ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಬಳಿಕ ಬೈಕ್‌ಗೆ ಡಿಕ್ಕಿಯಾದ ಕಾರು ಮುಂದೆ ಚಲಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ವೇಳೆ ಕ್ಯಾಂಟರ್ ವಾಹನದ ಆಕ್ಸೆಲ್ ತುಂಡಾಗಿ ಕ್ಯಾಂಟರ್ ಕೂಡ ಸರ್ವೀಸ್ ರಸ್ತೆಗೆ ಹಾರಿ ಪಲ್ಟಿಯಾಗಿ ಬಿದ್ದಿದೆ. ಇತ್ತ ಡಿಕ್ಕಿ ಮಾಡಿದ ಕಾರು ಕೂಡ ಅಪ್ಪಚ್ಚಿಯಾಗಿ ಕಾರಿನಲ್ಲಿದ್ದ ಆರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಐಜಿಪಿ ಲಾಬುರಾಮ್ ಭೇಟಿ:
ದೃಷ್ಟಿಹೀನ ತಾಯಿಗೆ ಆಸರೆಯಾಗಿದ್ದ ಗಗನ್:
-ಲಾಬೂರಾಮ್ ಕೇಂದ್ರ ವಲಯದ ಐಜಿಪಿ
ಮೃತ ಅಶ್ವಿನ್ ನಾಯರ್ ಮೂಲತಃ ಕೇರಳದ ಹುಡುಗ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ತಂದೆ ತಾಯಿ ಜೊತೆ ಬಂದು ನೆಲೆಸಿದ್ದ. ಶುಕ್ರವಾರ ಬೆಳಿಗ್ಗೆ ಸ್ನೇಹಿತರ ಜೊತೆ ಜಾಲಿ ರೈಡ್ ಬಂದಿದ್ದ ಅಶ್ವಿನ್ ಅಪಘಾತದಲ್ಲಿ ಮೃತಪಟ್ಟಿದ್ದ. ಪೊಲೀಸರು ಬೆಳಿಗ್ಗೆ ಮನೆಯವರಿಗೆ ಕರೆ ಮಾಡುವವರೆಗೆ ಅಶ್ವಿನ್ ಮನೆಯಲ್ಲಿ ಮಲಗಿದ್ದಾನೆಂದೇ ಪೋಷಕರು ಭಾವಿಸಿದ್ದರು. ಪೋಷಕರಿಗೆ ಗೊತ್ತಿಲ್ಲದಂತೆ ಸ್ನೇಹಿತರ ಜೊತೆ ಜಾಲಿ ರೈಡ್ ಹೋಗಿದ್ದು ದುರಂತಕ್ಕೀಡಾಗಿದ್ದಾನೆ.
ಮೃತ ವಿದ್ಯಾರ್ಥಿಗಳ ಶವಗಳನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದ ತಕ್ಷಣ ಮೃತ ವಿದ್ಯಾರ್ಥಿಗಳ ಪೋಷಕರು ಕುಟುಂಬ ಸಮೇತ ಆಸ್ಪತ್ರೆ ಬಳಿಗೆ ಆಗಮಿಸಿದರು. ಮಕ್ಕಳ ಮೃತ ದೇಹಗಳನ್ನು ಕಂಡ ಪೋಷಕರ ಆಕ್ರಂದ ಮುಗಿಲು ಮುಟ್ಟುತ್ತಿತ್ತು.