ಸೌಲಭ್ಯ ಬಳಸಿ ವಿದ್ಯಾಭ್ಯಾಸ ಮಾಡಿ

KannadaprabhaNewsNetwork |  
Published : Jan 17, 2025, 12:45 AM IST
ಚೇಳೂರು ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ  ಆಯೋಜಿಸಲಾಗಿದ್ದ ಪ್ರೇರಣ ಕಾರ್ಯಕ್ರಮ ಶಾಸಕ ಸುಬ್ಬಾರೆಡ್ಡಿ, ಪಿ ಆರ್ ಚಲಂ, ಜೆ ಎನ್ ಜಾಲರಿ, ಕಡ್ಡಿಲು ವೆಂಕಟರವಣಪ್ಪ,ಸುರೇಂದ್ರ, ಕೆಜಿ ವೆಂಕಟರವಣಪ್ಪ,ಇತರರು ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು. ಈ ಬಾರಿ ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೆ ಉತ್ತಮ ಫಲಿತಾಂಶ ಲಭಿಸಬೇಕು. ಅದು ತಂದೆ ತಾಯಿ ಹಾಗೂ ಶಿಕ್ಷಕರಿಗೆ ತೃಪ್ತಿ ತರಬೇಕು. ವಿದ್ಯಾರ್ಥಿಗಳಿಗೆ ಸರಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಒಳ್ಳೆದು ಫಲಿತಾಂತದ ಮೂಲಕ ಸಾರ್ಥಕತೆ ತಂದುಕೊಡಬೇಕು.

ಕನ್ನಡಪ್ರಭ ವಾರ್ತೆ ಚೇಳೂರು

ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಗತ್ಯವಿರುವ ಸವಲತ್ತುಗಳನ್ನು ಸರ್ಕಾರ ಪೂರೈಸುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆಯಲು ಚಿತ್ತ ಹರಿಸಬೇಕು ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ತಾಲೂಕಿನ ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿ ಆಯೋಜಿಸಲಾಗಿದ್ದ ಪ್ರೇರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.ಪೋಷಕರ ಶ್ರಮ ಅರಿತುಕೊಳ್ಳಿ

ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಡುವ ಶ್ರಮವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಉಳಿದಿರುವ ದಿನಗಳಲ್ಲಿ ಹೆಚ್ಚಿನ ಶ್ರಮ ಹಾಕಬೇಕು. ಮನಸ್ಸಿನ ದೃಢತ್ವ ಬೆಳೆಸಿಕೊಳ್ಳ ಬೇಕು ಎಂದರು. ಪಿಡಿಓ ಕೆ ವೆಂಕಟಾಚಲಪತಿ ಮಾತನಾಡಿ ಪರೀಕ್ಷೆಗೆ ಭಯ ಪಡಬಾರದು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಅದಕ್ಕೆ ವಿಷಯವನ್ನು ಮನನ, ಪುನರ್ ಮನನ ಮಾಡಿಕೊಳ್ಳಬೇಕು.ಅರ್ಥವಾಗದ್ದನ್ನು ಶಿಕ್ಷಕರಿಂದ ಕೇಳಿ ಕಲಿಯಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಉತ್ತಮವಾಗಿ ಬರೆಯುವ ಮೂಲಕ ಬದುಕಿನ ಮುಂದಿನ ಘಟ್ಟವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಆತ್ಮವಿಶ್ವಾಸ ಬೆಳೆಸಿಕೊಳ್ಳಿ

ಸರ್ಕಲ್ ಇನ್ಸ್‌ಪೆಕ್ಟರ್ ಜನಾರ್ದನ್ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು. ಈ ಬಾರಿ ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೆ ಉತ್ತಮ ಫಲಿತಾಂಶ ಲಭಿಸಬೇಕು. ಅದು ತಂದೆ ತಾಯಿ ಹಾಗೂ ಶಿಕ್ಷಕರಿಗೆ ತೃಪ್ತಿ ತರಬೇಕು. ವಿದ್ಯಾರ್ಥಿಗಳಿಗೆ ಸರಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಒಳ್ಳೆದು ಫಲಿತಾಂತದ ಮೂಲಕ ಸಾರ್ಥಕತೆ ತಂದುಕೊಡಬೇಕು ಎಂದರು.ಈ ಸಂದರ್ಭದಲ್ಲಿ, ತಹಸಿಲ್ದಾರ್ ಶ್ರೀನಿವಾಸಲು ನಾಯ್ಡು, ಪಿಡಿಒ ಕೆ ವೆಂಕಟಚಲಪತಿ, ಕಾಂಗ್ರೆಸ್‌ ಕಾಂಗ್ರೆಸ್ ಹಿರಿಯ ಮುಖಂಡ ಆರ್ ಚಲಂ, ಜೆ ಎನ್ ಜಾಲರಿ,ಸುರೇಂದ್ರ, ಕ.ದ.ಸಂ.ಸ.ಜಿಲ್ಲಾ ಸಂಚಾಲಕರು ಕಡ್ಡಿಲು ವೆಂಕಟರವಣಪ್ಪ,,ಕ.ರ.ವೆ ಅಧ್ಯಕ್ಷರು ಕೆಜಿ ವೆಂಕಟರವಣಪ್ಪ, ಆರ್ ಐ ಈಶ್ವರ್,ಗ್ರಾಂ ಪ. ಅಧ್ಯಕ್ಷರು ಕೌಸ್ತರ್ ಹಾಜರಿದ್ದರು..

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ