ಅರ್ಥಶಾಸ್ತ್ರ ಕಲಿಯುವುದರಿಂದ ಉದ್ಯೋಗವಕಾಶಗಳು ಹೆಚ್ಚು: ಪ್ರಸನ್ನ ಪಂಢರಿ

KannadaprabhaNewsNetwork |  
Published : May 02, 2025, 12:10 AM IST
ಕಾರ್ಯಕ್ರಮವನ್ನು ಉದ್ಘಾಟಿಸಿದರು.  | Kannada Prabha

ಸಾರಾಂಶ

ಅರ್ಥಶಾಸ್ತ್ರ ಕಲಿಯುವುದರಿಂದ ಉದ್ಯೋಗವಕಾಶಗಳು ಹೆಚ್ಚು ಎಂದು ಪ್ರಸನ್ನ ಪಂಢರಿ ತಿಳಿಸಿದರು.

ಗದಗ:ಅರ್ಥಶಾಸ್ತ್ರ ಕಲಿಯುವುದರಿಂದ ಉದ್ಯೋಗವಕಾಶಗಳು ಹೆಚ್ಚು ಎಂದು ಪ್ರಸನ್ನ ಪಂಢರಿ ತಿಳಿಸಿದರು.

ಅವರು ತಾಲೂಕಿನ ಹುಲಕೋಟಿ ಕೆ.ಎಚ್.ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಅರ್ಥಶಾಸ್ತ್ರದಲ್ಲಿ ಉದ್ಯೋಗಾವಕಾಶಗಳು ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಅರ್ಥಶಾಸ್ತ್ರವನ್ನು ಕಲಿಯುವುದರಿಂದ ಬೇರೆ ಬೇರೆ ಇಲಾಖೆಗಳಲ್ಲಿ ಇನ್ಸೂರೆನ್ಸ್ ಅಡ್ಮಿಸ್ಟ್ರೇಟರ್ ಆಫೀಸರ್, ಆರ್ಥಿಕ ಮತ್ತು ಸಾಂಖಿಕ ಇಲಾಖೆಯಲ್ಲಿ ಅಧಿಕಾರಿಗಳಾಗಿ, ಬ್ಯಾಂಕುಗಳಲ್ಲಿ ಹಣಕಾಸು ಅಧಿಕಾರಿಯಾಗಿ, ಇಂಡಿಯನ್ ಎಕನಾಮಿಕ್ ಸರ್ವಿಸ್ ಅಧಿಕಾರಿಯಾಗಿ, ಆರ್ ಬಿ ಐ ಗ್ರೇಡ್ ಬಿ ಆಫೀಸರ್ ಆಗಿ ಕರ್ನಾಟಕ ಎಕ್ಸೈಸ್ ಇನ್‌ಸ್ಪೆಕ್ಟರ್ ಆಗಿ, ಕಮಾಂಡ್ ಡಿಫೆನ್ಸ್ ಸರ್ವಿಸ್, ನ್ಯಾಶನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ರೈಲ್ವೆ ಅಕೌಂಟ್ ಸರ್ವಿಸ್, ಇಂಡಿಯನ್ ಸರ್ವಿಸ್ ಹೀಗೆ ವಿವಿಧ ಇಲಾಖೆಗಳಲ್ಲಿ ಅರ್ಥಶಾಸ್ತ್ರ ಪದವಿಯನ್ನು ಮುಗಿಸಿದ ನಂತರ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದರು. ಪ್ರಾಂಶುಪಾಲ ಡಾ. ಸುಧಾ ಕೌಜಗೇರಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಿ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಮಹಾಂತೇಶ, ಜಯಲಕ್ಷ್ಮಿ ಎಚ್. ಎಫ್ ಮುಂತಾದವರು ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ, ಜಿತೇಂದ್ರ ಜಹಗೀರದಾರ, ಡಾ. ಮಂಜುನಾಥ್ ತ್ಯಾಳಗಡಿ, ಭೀಮೇಶ್, ಸಾವಿತ್ರಿ. ಟಿ, ಪರಶುರಾಮ ಕಟ್ಟಿಮನಿ, ಸಂತೋಷ ಲಮಾಣಿ, ನವೀನ್ ತಿರ್ಲಾಪುರ, ಡಾ. ಕಿರಣಕುಮಾರ್ ರಾಯರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚಂದ್ರಪ್ಪ ಎಚ್. ಸ್ವಾಗತಿಸಿದರು. ರೇಖಾ ಶಿರಹಟ್ಟಿ ಪ್ರಾರ್ಥಿಸಿದರು. ಕಾಶವ್ವ ಕಟ್ಟಿಮನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ದೇವಸ್ಥಾನಕ್ಕೆ ಡಿಸಿ ಭೇಟಿ
ವಾಕ್, ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಮಾದರಿ