ವಾಡಿ ಗದಗ ರೈಲ್ವೆ ಮಾರ್ಗ ಚುರುಕುಗೊಳಿಸಲು ಸುಬೇದಾರ್ ಮನವಿ

KannadaprabhaNewsNetwork |  
Published : Sep 06, 2024, 01:02 AM IST
ಬುಧವಾರ ಯಾದಗಿರಿಗೆ ಆಗಮಿಸಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ಹಿರಿಯ ಮುಖಂಡ, ಶಹಾಪುರದ ಡಾ. ಚಂದ್ರಶೇಖರ್ ಸುಬೇದಾರ್ ಯಾದಗಿರಿ ಪ್ರವಾಸ ಮಂದಿರದಲ್ಲಿ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

Subedar request to speed up Wadi Gadag railway line

- ಕಾಮಗಾರಿ ಸಕಾಲದಲ್ಲಿ ಮುಗಿಸಲು ರೈಲ್ವೆ ಸಚಿವ ಸೋಮಣ್ಣಗೆ ಮನವಿ

- ರೈತರ ಮಕ್ಕಳಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೊಗ ನೀಡಲು ಆಗ್ರಹ

-------

ಕನ್ನಡಪ್ರಭ ವಾರ್ತೆ ಶಹಾಪುರ.

ವಾಡಿ- ಗದಗ್‌ ಮಾರ್ಗದ ರೈಲ್ವೆ ಕಾಮಗಾರಿ ಹಲವು ವರ್ಷಗಳಿಂದ ಆಮೆಗತಿಯಲ್ಲಿ‌‌ ನಡೆಯುತ್ತಿದ್ದು, ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಗೆ ಸೂಚಿಸಿ ಸಕಾಲದಲ್ಲಿ ಕಾಮಗಾರಿ ಮುಗಿಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ಹಿರಿಯ ಮುಖಂಡ ಡಾ.ಚಂದ್ರಶೇಖರ ಸುಬೇದಾರ ಅವರ ನಿಯೋಗ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಯಾದಗಿರಿ ಜಿಲ್ಲಾ ಪ್ರವಾಸದಲ್ಲಿದ್ದ ಕೇಂದ್ರ ಸಚಿವರನ್ನು ಭೇಟಿಯಾಗಿ‌ ಸನ್ಮಾನಿಸಿ ಮಾತನಾಡಿದ ಡಾ. ಚಂದ್ರಶೇಖರ್ ಸುಬೇದಾರ್ ಅವರು, ವಾಡಿ - ಗದಗ ಮಾರ್ಗದ ಕಾಮಗಾರಿಗೆ ಭೂಮಿ ನೀಡಿದ ರೈತರಿಗೆ ಹೆಚ್ಚಿನ‌ ಪರಿಹಾರ ನೀಡಬೇಕು, ಭೂಮಿ‌ ನೀಡಿದ ರೈತರ ಕುಟುಂಬದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೊಗ‌ ನೀಡಬೇಕು. ಹಾಗೆ ಯಾದಗಿರಿ ಜಿಲ್ಲೆಯಾಗಿ 14 ವರ್ಷಗಳು ಕಳೆದಿವೆ. ರೈಲ್ವೆ ಇಲಾಖೆಗೆ ಹೆಚ್ಚು ಆದಾಯ ತರುವ ಯಾದಗಿರಿಗೆ ಸುಮಾರು 12 ರೈಲುಗಳು ನಿಲ್ಲುವದಿಲ್ಲ. ತಾವೇ ರೈಲ್ವೆ ಸಚಿವರಿದ್ದು ನಿಲುಗಡೆಗೆ ಆದೇಶ ನೀಡಬೇಕು ಎಂದರು. ಅಲ್ಲದೆ ಯಾದಗಿರಿ ರೈಲ್ವೆ ನಿಲ್ದಾಣವನ್ನು‌ ಮೇಲ್ದರ್ಜೆಗೆ ಏರಿಸಿ ಈ ಭಾಗದ ಜನರಿಗೆ ಸೌಲಭ್ಯ ನೀಡಬೇಕು ಎಂದು‌ ಮನವಿ ಮಾಡಿದರು.

ಸೋಮಣ್ಣ ಸ್ಪಂದನೆ: ಡಾ. ಸುಬೇದಾರ್‌ ಸಲ್ಲಿಸಿರುವ ಬೇಡಿಕೆಗಳು ನ್ಯಾಯಯುತವಾಗಿದ್ದು ಕೂಡಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಸಚಿವ ವಿ ಸೋಮಣ್ಣ ನಿಯೋಗಕ್ಕೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ‌ಮಗನೂರ, ರಾಜಶೇಖರ ಗುಗಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

-------

5ವೈಡಿಆರ್‌19 : ಯಾದಗಿರಿಗೆ ಆಗಮಿಸಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ಹಿರಿಯ ಮುಖಂಡ, ಶಹಾಪುರದ ಡಾ. ಚಂದ್ರಶೇಖರ್ ಸುಬೇದಾರ್ ಯಾದಗಿರಿ ಪ್ರವಾಸ ಮಂದಿರದಲ್ಲಿ ಮನವಿ ಪತ್ರ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ