ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರ ಮುಂದೆ ಶನಿವಾರ ಮಹೇಶ್ ಶೆಟ್ಟಿ ಹಾಗೂ ಸೌಜನ್ಯ ಪರವಾಗಿರುವ ಇತರ ಹೋರಾಟಗಾರರ ಪರವಾಗಿ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆರಾಜು ತಂಡ ವಾದ ಮಂಡಿಸಿತು. ಧರ್ಮಸ್ಥಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ರಾಜಶೇಖರ ಹಿಲಿಯಾರ್ ಹಾಗೂ ಇತರರು ಹಾಜರಾಗಿದ್ದರು.
ಎಸ್.ಐ.ಟಿ ಸಲ್ಲಿಸಿರುವ ವರದಿ ಅಪೂರ್ಣವಾಗಿದ್ದು, ಇದರ ಆಧಾರದ ಮೇಲೆ ಯಾರ ಮೇಲೆಯೂ ಕ್ರಮಕೈಗೊಳ್ಳಲು ಆದೇಶ ನೀಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಈ ಅಪೂರ್ಣ ವರದಿಯನ್ನು ತಟಸ್ಥ ಮಾಡಿ ಆದೇಶ ಹೊರಡಿಸಿದೆ.ತಕರಾರು ಅರ್ಜಿ:
ಧರ್ಮಸ್ಥಳ ಪರವಾಗಿ ಸಲ್ಲಿಕೆಯಾಗಿರುವ ಅರ್ಜಿಗೆ ಹಿರಿಯ ನ್ಯಾಯವಾದಿ ದೊರೆರಾಜು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯೂ ಜ.23ರಂದು ನಡೆಯಲಿದೆ. ಈ ಅರ್ಜಿಯ ಬಗ್ಗೆ ಎಸ್.ಐ.ಟಿ ಪರವಾಗಿ ವಾದ ಮಂಡಿಸಿದ ಸರಕಾರಿ ವಕೀಲರು ಅರ್ಜಿಯನ್ನು ಪರಿಶೀಲಿಸಿ ತಕರಾರು ಇದೆಯೇ ಎಂಬ ಬಗ್ಗೆ ಮುಂದಿನ ವಿಚಾರಣೆಯ ವೇಳೆ ತಿಳಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.