ಹಳಿಯಾಳದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರೋಪ
ಪಟ್ಟಣದ ಕೆ.ಎಲ್.ಎಸ್. ಸಂಸ್ಥೆಯ ವಿ.ಡಿ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತದ ಖ್ಯಾತ ವಿಜ್ಞಾನಿ ಡಾ. ಸಿ.ವಿ. ರಾಮನ್ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಡಾ. ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಅವರು, ಜೀವನದಲ್ಲಿ ಯಶಸ್ಸನ್ನು ಪಡೆಯಲು ಸತತ ಪರಿಶ್ರಮ, ತ್ಯಾಗ ಅವಶ್ಯಕವಾಗಿದೆ. ನಾವಿಂದು ಕಾಣುವ ಪ್ರತಿಯೊಬ್ಬ ಆದರ್ಶ ಪುರುಷರು, ಸಾಧಕರ ಸಾಧನೆಯ ಹಿಂದೆ ಶ್ರಮ, ಸತತ ಪ್ರಯತ್ನದ ಕಥೆಯಿದೆ ಎಂದರು.ಡಾ. ಸಮೀರ ಗಲಗಲಿ ಮಾತನಾಡಿ, ಡಾ. ಸಿ.ವಿ. ರಾಮನ್ ಅವರ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಸ್ಪರ್ಧೆ:
ಚರ್ಚಾ ಸ್ಪರ್ಧೆಯಲ್ಲಿ ತೇಜಸ್ ಬಿರಾದಾರ ಪ್ರಥಮ, ಸುಪ್ರೀತ ಗೌಡಾ ದ್ವಿತೀಯ, ಭವಾನಿ ಗೌಡರ್ ತೃತೀಯ ಸ್ಥಾನ ಗಳಿಸಿದರು.
ಭಿತ್ತಿಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಶಿವಾನಿ ಬಾನಿ ಪ್ರಥಮ, ನಮಿತಾ ಗುಡಿ ದ್ವಿತೀಯ, ನಿಲೋಪರ್ ತೃತೀಯ ಸ್ಥಾನ ಪಡೆದರು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.