ಕಠಿಣ ಪರಿಶ್ರಮ, ಪ್ರಾಮಾಣಿಕತೆಯಿದ್ದರೆ ಯಶಸ್ಸು: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Apr 07, 2025, 12:32 AM IST
ಫೋಟೊ ಶೀರ್ಷಿಕೆ: 6ಆರ್‌ಎನ್‌ಆರ್6ರಾಣಿಬೆನ್ನೂರು ತಾಲೂಕಿನ ಕಮದೋಡ ಗ್ರಾಮದ ಬಳಿ ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಅವರು ನೂತನವಾಗಿ ಆರಂಭಿಸಿದ ವಿಂಡೋ ಕ್ರಾಪ್ಟ್ ಕಂಪನಿಯನ್ನು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಆಧುನಿಕವಾಗಿ ಕಿಟಕಿ ಹಾಗೂ ಬಾಗಿಲ ಚೌಕಟ್ಟು ತಯಾರಿಸುವ ಕಂಪನಿ ಈ ಭಾಗದಲ್ಲಿ ಆರಂಭ ಮಾಡುತ್ತಿರುವುದು ಸಂತಸ ವಿಷಯವಾಗಿದೆ.

ರಾಣಿಬೆನ್ನೂರು: ದುಡಿಮೆಯಲ್ಲಿ ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿದ್ದರೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ತಾಲೂಕಿನ ಕಮದೋಡ ಗ್ರಾಮದ ಬಳಿ ಭಾನುವಾರ ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಅವರು ನೂತನವಾಗಿ ಆರಂಭಿಸಿದ ವಿಂಡೋ ಕ್ರಾಪ್ಟ್ ಕಂಪನಿಯನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕವಾಗಿ ಕಿಟಕಿ ಹಾಗೂ ಬಾಗಿಲ ಚೌಕಟ್ಟು ತಯಾರಿಸುವ ಕಂಪನಿ ಈ ಭಾಗದಲ್ಲಿ ಆರಂಭ ಮಾಡುತ್ತಿರುವುದು ಸಂತಸ ವಿಷಯವಾಗಿದೆ. ಮೊದಲು ಮನೆ ಕಟ್ಟಲು ಕಟ್ಟಿಗೆಯನ್ನು ಬಳಕೆ ಮಾಡುತ್ತಿದ್ದರು. ಆದರೆ ಕಾಲಕ್ರಮೇಣ ಕಾಡು ಕಡಿಮೆಯಾಗುತ್ತಿದ್ದು, ಮನುಷ್ಯ ಹಲವಾರು ಆರೋಗ್ಯದ ಸಮಸ್ಯೆ ಎದುರಿಬೇಕಾಗಿದೆ. ಹೀಗಾಗಿ ಬೇರೆ ವಸ್ತುಗಳ ಬಳಕೆ ಮಾಡಿಕೊಂಡು ಮನೆ ನಿರ್ಮಾಣ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತದೆ ಎಂದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಬೆಂಗಳೂರು ಜಿಲ್ಲೆಯಲ್ಲಿಯೇ ಸುಮಾರು 7 ಸಾವಿರ ಬೃಹತ್ ಕೈಗಾರಿಕೆಗಳಿವೆ. ನಮ್ಮ ಜಿಲ್ಲೆಯಲ್ಲಿ ಏಳು ಕಡೆಗಳಲ್ಲಿವೆ. ಉತ್ತರ ಕರ್ನಾಟಕಕ್ಕೆ ಏಕೆ ತಾರತಮ್ಯ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ನಾನು ಪ್ರಶ್ನೆ ಮಾಡಿದ್ದೇನೆ. ನಮ್ಮ ಭಾಗದಲ್ಲಿಯೂ ಬೃಹತ್ ಕೈಗಾರಿಕೆ ಕೊಡಿ ಎಂದು ಕೇಳಿಕೊಳ್ಳಲಾಗಿದೆ. ಸಕಾರಾತ್ಮಕ ಉತ್ತರ ಬಂದಿದೆ. ಒಟ್ಟಾರೆ ಎಲ್ಲರೊಂದಿಗೆ ಸೇರಿಕೊಂಡು ರಾಣಿಬೆನ್ನೂರು ತಾಲೂಕನ್ನು ಅಭಿವೃದ್ಧಿಪಡಿಸಬೇಕು ಎಂಬುದು ನಮ್ಮ ಉದ್ದೇಶವಿದೆ ಎಂದರು.

ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಎಚ್.ಎಸ್. ಶಿವಶಂಕರ, ದಾವಣಗೆರೆ ಮಾಜಿ ಮೇಯರ್‌ ಅಜಯಕುಮಾರ ಬಿ.ಜಿ., ಭರತ ಬೊಮ್ಮಾಯಿ, ವಿರುಪಾಕ್ಷಪ್ಪ ಬಳ್ಳಾರಿ, ಎಸ್.ಎಸ್. ರಾಮಲಿಂಗಣ್ಣನವರ, ಕೆ. ಶಿವಲಿಂಗಪ್ಪ, ಡಾ. ಶೋಭಾ ನಿಸ್ಸಿಮಗೌಡ್ರ, ವಿ.ವಿ. ಮಕರಿ, ಚೋಳಪ್ಪ ಕಸವಾಳ, ಶಿವಕುಮಾರ ಮುದ್ದಪ್ಪಳವರ, ಎನ್.ಜಿ. ನಾಗನಗೌಡ್ರ, ಜುಂಜಪ್ಪ ಹೆಗ್ಗಪ್ಪನವರ, ಪಿ.ಆರ್. ಕುಪ್ಪೇಲೂರ, ಸೊರಟೂರ, ಪ್ರಭು ಮುಂಡಾಸದ ಮತ್ತಿತರರಿದ್ದರು.ಶ್ರದ್ಧಾ ಭಕ್ತಿಯ ರಾಮಜನ್ಮೋತ್ಸವ

ಹಾನಗಲ್ಲ: ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಮಹಿಳೆಯರು ರಾಮ ಜನ್ಮೋತ್ಸವವನ್ನು ಧಾರ್ಮಿಕ ವಿಧಿ- ವಿಧಾನಗಳ ಮೂಲಕ ಶ್ರದ್ಧಾ- ಭಕ್ತಿಯಿಂದ ನೆರವೇರಿಸಿದರು.

ಪಟ್ಟಣದ ಶಿವರಾಮ ಮಂದಿರದಲ್ಲಿ ಮುಕುಂದ ಭಟ್ ಕಾಗಿನೆಲ್ಲಿ ಅವರ ನೇತೃತ್ವದಲ್ಲಿ ಬೆಳಗ್ಗೆ ಕಾಕಡಾರತಿ, ರುದ್ರಾಭಿಷೇಕ ಜರುಗಿದವು. ಮಹಿಳೆಯರು ಸಡಗರದಿಂದ ತೊಟ್ಟಿಲೋತ್ಸವ ನಡೆಸಿದರು. ಸೋಮವಾರಪೇಟೆಯ ಮಾರುತಿ ದೇವಸ್ಥಾನದಲ್ಲಿ ಭಜನೆ ಹಾಗೂ ತೊಟ್ಟಿಲೋತ್ಸವ ನಡೆದವು.ಶಿವರಾಮ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಘನಶ್ಯಾಮ ದೇಶಪಾಂಡೆ, ಆದರ್ಶಗಳಿಗೆ ಇನ್ನೊಂದು ಹೆಸರೇ ಶ್ರೀರಾಮ. ಅದಕ್ಕಾಗಿಯೇ ಆದರ್ಶರಾಮ ಎಂದು ಕರೆಯಲಾಗುತ್ತದೆ. ರಾಮನಾಮ ಜಪದಿಂದ ಎಲ್ಲ ಸಾಧನೆ ಸಾಧ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಪಂ. ಗಂಗಾಧರಶಾಸ್ತ್ರಿ ಕಾಶೀಕರ, ಹನುಮಂತಭಟ್ ಕುಲಕರ್ಣಿ, ಪಾರ್ವತಿಬಾಯಿ ಕಾಶೀಕರ, ಪ್ರಲ್ಹಾದ ಆಚಾರ ರಾಜಪುರೋಹಿತ್, ಪ್ರಮೋದ ದೇಸಾಯಿ ಪಾಲ್ಗೊಂಡಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...