ಆಧ್ಯಾತ್ಮಿಕತೆ ರೂಡಿಸಿಕೊಂಡರೆ ಬದುಕಿನಲ್ಲಿ ಯಶಸ್ಸು

KannadaprabhaNewsNetwork | Published : Aug 26, 2024 1:34 AM

ಸಾರಾಂಶ

‘ಮಾನಸಿಕ ಶಾಂತಿ ಇಲ್ಲದಿದ್ದರೆ, ಒಂದು ಕೆಲಸಕ್ಕೆ ನಾಲ್ಕು ಪಟ್ಟು ಸಮಯ ವ್ಯರ್ಥವಾಗುತ್ತದೆ. ಶಾಂತಿ ಹೊಂದಿದಾಗ, ಒಂದು ಗಂಟೆಯ ಕೆಲಸವನ್ನು 10 ನಿಮಿಷದಲ್ಲಿ ಪೂರೈಸಬಹುದು. ಇದೇ ಆಂತರಿಕ ಸಶಕ್ತೀಕರಣವಾಗಿದೆ. ಅಧ್ಯಾತ್ಮವು ಮೊಬೈಲ್ ಚಾರ್ಜ್ ಮಾಡಿದಂತೆ. ‘ಚಾರ್ಜ್‌’ ಕಾಣುವುದಿಲ್ಲ. ಆದರೆ, ಅದರಿಂದ ಎಲ್ಲವೂ ಸಾಧ್ಯವಾಗುತ್ತದೆ’

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಿತ್ಯ ನಿರಂತರವಾಗಿ ಒತ್ತಡ ಬದುಕಿನಲ್ಲಿ ಸಾಗುತ್ತಿರುವ ನಾವು ಜೀವನದಲ್ಲಿ ಆಧ್ಯಾತ್ಮಿಕತೆ ರೂಡಿಸಿಕೊಂಡರೆ ಬದುಕು ಸುಂದರವಾಗಲಿದೆ ಹಾಗೂ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಜೈ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ. ಜಯಕುಮಾರ್ ಹೇಳಿದರು.

ನಗರದ ಕೃಷ್ಣಾ ಟಾಕೀಸ್ ರಸ್ತೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ “ಶಿವ ಪ್ರೇರಣಾ ಭವನ”ದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಹಾಗೂ ರಾಕಿ ಹಬ್ಬಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

‘ಮಾನಸಿಕ ಶಾಂತಿ ಇಲ್ಲದಿದ್ದರೆ, ಒಂದು ಕೆಲಸಕ್ಕೆ ನಾಲ್ಕು ಪಟ್ಟು ಸಮಯ ವ್ಯರ್ಥವಾಗುತ್ತದೆ. ಶಾಂತಿ ಹೊಂದಿದಾಗ, ಒಂದು ಗಂಟೆಯ ಕೆಲಸವನ್ನು 10 ನಿಮಿಷದಲ್ಲಿ ಪೂರೈಸಬಹುದು. ಇದೇ ಆಂತರಿಕ ಸಶಕ್ತೀಕರಣವಾಗಿದೆ. ಅಧ್ಯಾತ್ಮವು ಮೊಬೈಲ್ ಚಾರ್ಜ್ ಮಾಡಿದಂತೆ. ‘ಚಾರ್ಜ್‌’ ಕಾಣುವುದಿಲ್ಲ. ಆದರೆ, ಅದರಿಂದ ಎಲ್ಲವೂ ಸಾಧ್ಯವಾಗುತ್ತದೆ’ ಆತ್ಮವು ಪರಮಾತ್ಮನಡೆಗೆ ತುಡಿಯುತ್ತದೆ. ಅದುವೇ ಅಧ್ಯಾತ್ಮದ ಆರಂಭ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕರ್ನಾಟಕ-ಆಂಧ್ರ ಉಪ ವಲಯ ಸಹ ಸಂಚಾಲಕಿ ರಾಜಯೋಗಿನಿ ಸಹೋದರಿ ಬಿ.ಕೆ. ಗೀತಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ‘ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕು. ಇಂಥಹ ಆಂತರಿಕ ಶಕ್ತಿಯು ಧ್ಯಾನದಿಂದ ಬರುತ್ತದೆ ಎಂದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳು ಶ್ರೀಕೃಷ್ಣ ವೇಷದಾರಿಗಳಾಗಿ ಆಗಮಿಸಿ ಎಲ್ಲರ ಮನಸೋರೆಗೊಂಡರು.

ಕಾರ್ಯಕ್ರಮದಲ್ಲಿ ಸ್ಥಾನಿಕ ಸಂಚಾಲಕಿ ರಾಜ ಯೋಗಿನಿ ಸಹೋದರಿ ಬಿ.ಕೆ.ಲಲಿತಾ, ರಾಜಯೋಗಿನಿ ಬಿ.ಕೆ. ಜಾನ್ಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರೇಮಲೀಲಾವೆಂಕಟೇಶ್, ಜೈ ಫೌಂಡೇಶನ್ ಕಾರ್ಯದರ್ಶಿ ಮುಬಾರಕ್, ಸಹೋದರಿಯರಾದ ಸುಜಾತ, ಚಿನ್ನಮ್ಮ, ಚಿಕ್ಕ ಲಕ್ಷ್ಮಿದೇವಿ, ಶ್ರೀದೇವಿ , ರಾಜೇಶ್ವರಿ, ಮತ್ತಿತರರು ಇದ್ದರು.

Share this article