ಶ್ರದ್ಧೆಯಿಂದ ಅಧ್ಯನ ಮಾಡಿದರೆ ಜೀವನದಲ್ಲಿ ಸಾಧನೆ: ವಿಶ್ವಾಸ ವ್ಯದ್ಯ

KannadaprabhaNewsNetwork |  
Published : Oct 16, 2024, 12:36 AM ISTUpdated : Oct 16, 2024, 12:37 AM IST
ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ನಿಮಿತ್ಯವಾಗಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ದೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿವ್ಯಾಳನ್ನು ಸನ್ಮಾನಿಸಿ ಶಾಸಕ ವಿಶ್ವಾಸ ವ್ಯದ್ಯ ಮಾತನಾಡಿದರು. | Kannada Prabha

ಸಾರಾಂಶ

ಮಕ್ಕಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಮಕ್ಕಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು ಎಂದು ಸವದತ್ತಿ ಶಾಸಕ ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ನಿಮಿತ್ತ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿವ್ಯಾ ಶ್ರೀಶೈಲ ಗಾಣಿಗೇರ ಅವರ ಸತ್ಕಾರ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.

ನಿವೃತ್ತ ಮುಖ್ಯ ಶಿಕ್ಷಕ ಎ.ವಿ. ಇಂಗಳೆ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಪ್ರಜೆಗಳು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಕರು ಮತ್ತು ಪಾಲಕರ ಮಾರ್ಗದರ್ಶನ ಬಹುಮುಖ್ಯ ಎಂದು ಹೇಳಿದರು.

ಬಾಗೋಜಿಕೊಪ್ಪದ ಡಾ.ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾಯಂದಿರು ಟಿವಿಯಲ್ಲಿ ಧಾರಾವಾಹಿ ನೋಡುವುದನ್ನು ಬಿಟ್ಟು ಅದೇ ಸಮಯ ಮಕ್ಕಳ ಜತೆ ಮಹಾನ್‌ ವ್ಯಕ್ತಿಗಳ ಜೀವನ ಕಥನ ತಿಳಿಸಿ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಹೇಳುವ ಕಡೆ ಗಮನ ನೀಡಬೇಕು ಎಂದರು.

ಶಿಕ್ಷಕ ಯು.ಡಿ. ತಲ್ಲೂರ, ಮುಖ್ಯ ಶಿಕ್ಷಕ ಡಿ.ಡಿ. ಭೋವಿ, ಶಿವಾನಂದ ಅಣ್ಣಿಗೇರಿ, ನಿವೃತ್ತ ಮುಖ್ಯ ಶಿಕ್ಷಕ ಎ.ಬಿ. ಬಾಣದಾರ ಮಾತನಾಡಿದರು. ಈ ಸಂದರ್ಭದಲ್ಲಿ ದಿವ್ಯಾ ಶ್ರೀಶೈಲ ಗಾಣಿಗೇರ, ಸವದತ್ತಿ ಶಾಸಕ ವಿಶ್ವಾಸ ವ್ಯದ್ಯ ಹಾಗೂ ಶ್ರೀಗಳನ್ನು ಸನ್ಮಾನಿಸಿದರು.

ತೊರಗಲ್ಲ ಮಠದ ದೀಪಕ ಸ್ವಾಮಿ, ಜಗದೀಶ ಹೊಸಮಠ ಸಾನ್ನಿಧ್ಯ ವಹಿಸಿದ್ದರು, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ, ಪಿಡಿಒ ಎಚ್.ಕೆ. ಚೌರಡ್ಡಿ, ಯರಗಟ್ಟಿ ತಾಲೂಕ ಗಾಣಿಗೇರ ಸಮಾಜದ ಅಧ್ಯಕ್ಷ ಅಶೋಕ ಗಾಣಿಗೇರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಗಾಣಿಗೇರ, ಚಂಬನ್ನ ಲಕ್ಕನ್ನವರ, ಮಹಾಂತೇಶ ಉಪ್ಪಿನ, ಬಸವರಾಜ ಗಾಣಿಗೇರ, ಕಲ್ಮೇಶ ಬಾಲರಡ್ಡಿ, ಶಂಕರ ಗಾಣಿಗೇರ, ಶಿವಪುತ್ರ ಸವದಿ, ಶ್ರೀಶೈಲ ಗಾಣಿಗೇರ ಸೇರಿದಂತೆ ಇತರರು ಇದ್ದರು. ಶಿಕ್ಷಕ ಬಿ.ಬಿ. ಅಣ್ಣಿಗೇರಿ ಸ್ವಾಗತಿಸಿ, ವಂದಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ