ವಿದ್ಯಾರ್ಥಿಗಳು ವಿಭಿನ್ನವಾಗಿ ಚಿಂತಿಸಿದರೆ ಯಶಸ್ಸು ಸಾಧ್ಯ: ಮಾಧವ ಬಿಜಾಪುರೆ

KannadaprabhaNewsNetwork |  
Published : Mar 19, 2024, 12:49 AM IST
ಚಿತ್ರ 18ಬಿಡಿಆರ್58 | Kannada Prabha

ಸಾರಾಂಶ

ಔರಾದ್ ಪಟ್ಟಣದ ಬಸವ ಗುರುಕುಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹತ್ತನೇ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾಧವ ಬಿಜಾಪುರೆ ಮಾತನಾಡಿದರು.

ಔರಾದ್: ವಿದ್ಯಾರ್ಥಿಗಳು ನಿರ್ಧಿಷ್ಟ ಮಾನಸಿಕತೆಯಿಂದ ಹೊರಬಂದು ವಿಭಿನ್ನವಾಗಿ ಚಿಂತಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಾಧವ ಬಿಜಾಪುರೆ ಹೇಳಿದರು.

ಪಟ್ಟಣದ ಬಸವ ಗುರುಕುಲ ಪ್ರೌಢಶಾಲೆಯಲ್ಲಿ ಸೋಮವಾರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ ಹತ್ತನೇ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಲ್ಪಿತ ಮನಸ್ಥಿತಿಯಿಂದ ಹೊರಬಂದು ಸ್ವಾತಂತ್ರ್ಯವ ಆಲೋಚನೆಗಳಿಗೆ ಮಹತ್ವ ನೀಡಿ ನಾವು ಬದಲಾದಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂದರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಮನ್ಮತ್ತಪ್ಪ ಹುಗ್ಗೆ, ಮುಖ್ಯಶಿಕ್ಷಕಿ ನರ್ಮರಲ ಶೇರಿ, ಸಂಪನ್ಮೂಲ ಶಿಕ್ಷಕ ರಾಜಕುಮಾರ ಡೊಂಗ್ರೆ, ಪಂಡರಿನಾಥ ಪವಾರ್ ಮಾತನಾಡಿದರು.

ಮುಖ್ಯಗುರುಗಳಾದ ಇಂದುಮತಿ ಎಡವೆ, ಅಮರ ದ್ಯಾಡೆ, ಶಿಕ್ಷಕರಾದ ಸತೀಶ್ ಸೂರ್ಯವಂಶಿ, ಬಸವರಾಜ್ ಬಂತೆ, ಶರಣಪ್ಪ ನೌಬಾದೆ, ಶಿವಪುತ್ರ ಧರಣಿ, ನಾಗನಾಥ್ ಶಂಕು, ಸಂತೋಷ್ ಮೇತ್ರೆ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪ್ರದಾಯ ತಿರಸ್ಕರಿಸದಿದ್ರೆ ಪ್ರಗತಿಶೀಲತೆ ಪ್ರಬಲವಾಗದು
ಸೋಮಾರಿಗಳಾಗದೆ ಕ್ರಿಯಾಶೀಲರಾಗಲಿ