ಆಸಕ್ತಿ, ಶ್ರದ್ಧೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ

KannadaprabhaNewsNetwork | Published : Jan 27, 2025 12:45 AM

ಸಾರಾಂಶ

ತಂತ್ರಜ್ಞಾನ ಬೆಳೆದಂತೆ ಬೇರೆ ಬೇರೆ ಕೋರ್ಸುಗಳು ಇದ್ದು ಅವುಗಳ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಜ್ಞಾನವವು ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ಸರೋಜಿನಿ ಮಹರ್ಷಿ ವರದಿಯಂತೆ ಸ್ಥಳೀಯರಿಗೆ ಶೇ.೮೦ರಷ್ಟು ಉದ್ಯೋಗ ನೀಡುವಂತೆ ಸರ್ಕಾರದ ಆದೇಶವಿದೆ.

ಕನ್ನಡಪ್ರಭ ವಾರ್ತೆ ಕೋಲಾರಕಲಿಯಲು ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಮಾತ್ರವೇ ಯಶಸ್ಸು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಎಂಎಲ್ಸಿ ಇಂಚರ ಗೋವಿಂದರಾಜು ಹೇಳಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ೩೬ ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಂಪ್ಯೂಟರ್‌ ಜ್ಞಾನ ಅಗತ್ಯ

ತಂತ್ರಜ್ಞಾನ ಬೆಳೆದಂತೆ ಬೇರೆ ಬೇರೆ ಕೋರ್ಸುಗಳು ಇದ್ದು ಅವುಗಳ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಜ್ಞಾನವವು ಬಹಳ ಮುಖ್ಯವಾಗಿದೆ. ಈ ಸುಮಾರು ೩೬ ವರ್ಷಗಳಿಂದ ಸಾವಿರಾರು ವಿದ್ಯಾಧ್ಯಾರ್ಥಿಗಳಿಗೆ ತರಬೇತಿ ಕೊಟ್ಟಿರುವ ಸಂಸ್ಥೆಯ ಸಂಸ್ಥಾಪಕರಾದ ಎಸ್.ವಿ ಸುಧಾಕರ್ ಮತ್ತು ರತ್ನಾಸುಧಾಕರ್ ಸಾಧನೆಯ ಶ್ರಮ ಎಂದು ತಿಳಿಸಿದರು.ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ಸರೋಜಿನಿ ಮಹರ್ಷಿ ವರದಿಯಂತೆ ಸ್ಥಳೀಯರಿಗೆ ಶೇ.೮೦ರಷ್ಟು ಉದ್ಯೋಗ ನೀಡುವಂತೆ ಸರ್ಕಾರದ ಆದೇಶವಿದ್ದು ಇದಕ್ಕೆ ಸಂಬಂಧಿಸಿದಂತೆ ಜ.೩೦ ರಂದು ಜಿಲ್ಲೆಯ ಕೈಗಾರಿಕೆಗಳ ಸಿಇಒಗಳ ಸಭೆ ನಡೆಯಲಿದೆ. ಕಂಪ್ಯೂಟರ್ ಕಲಿತ ಎಲ್ಲರಿಗೂ ಉದ್ಯೋಗ ಸಿಗುತ್ತದೆ ಎಂಬ ವಿಶ್ವಾಸವಿದ್ದು, ವಿದ್ಯಾರ್ಥಿಗಳು ಶಿಸ್ತಿನಿಂದ ಕಲಿತು ಒಳ್ಳೆಯ ಉದ್ಯೋಗಸ್ಥರಾಗುವಂತೆ ಸಲಹೆ ನೀಡಿದರು.ಸ್ವಯಂ ಉದ್ಯೋಗ ಆರಂಭಿಸಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಶ್ರದ್ಧೆ ಕಡಿಮೆಯಾಗಿದೆ. ಅನುಭವದ ಕೊರತೆ ಆಧಾರದಲ್ಲಿ ಅವಕಾಶಗಳು ಕಡಿಮೆಯಾಗಿವೆ. ತರಬೇತಿ ಸಂದರ್ಭದಲ್ಲಿ ಶ್ರದ್ಧೆಯಿಂದ ಮಾಡಿದರೆ ಅಷ್ಟೇ ಯಶಸ್ಸು ಸಾಧಿಸಲು ಸಾಧ್ಯ. ಸರ್ಕಾರಿ ನೌಕರರಿಗೆ ಸೀಮಿತವಾಗದೇ ಸ್ವಯಂ ಉದ್ಯೋಗ ಅವಕಾಶಗಳನ್ನು ಪಡೆಯಬೇಕು ಎಂದರು.ಎಡಿಸಿ ಮಂಗಳಾ ಎಸ್.ಎಂ ಮಾತನಾಡಿ, ತಂತ್ರಜ್ಞಾನದ ಯುಗದಲ್ಲಿ ಕಂಪ್ಯೂಟರ್ ಕಲಿಕೆ ಮುಖ್ಯವಾಗಿದೆ ಎಲ್ಲವನ್ನೂ ಆನ್ಲೈನ್ ವ್ಯವಸ್ಥೆ ನಿರ್ಧಾರ ಮಾಡಲಿದ್ದು, ಪ್ರತಿಯೊಬ್ಬರೂ ಕಂಪ್ಯೂಟರ್ ಕಲಿಕೆಯಿಂದ ಮಾತ್ರವೇ ಜೀವನವಾಗಿದೆ. ಕಲಿಕೆ ಉತ್ತಮವಾಗಿದ್ದಾಗ ಮಾತ್ರವೇ ಉತ್ತಮ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.ಉದ್ಯಮ ಸ್ಥಾಪನೆಗೂ ಅ‍ವಕಾಶ

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಈ ಭಾಗದಲ್ಲಿ ಸುಮಾರು ೩೬ ವರ್ಷದಿಂದ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವ ಸಂಸ್ಥೆಯಾಗಿ ಬೆಳೆದಿದೆ. ಉದ್ಯೋಗಕ್ಕೆ ಅಷ್ಟೇ ಸೀಮಿತವಾಗದೇ ಉದ್ಯಮಕ್ಕೂ ಅವಕಾಶಗಳು ಇದ್ದು ಎಲ್ಲರೂ ಅ ನಿಟ್ಟಿನಲ್ಲಿ ಹೊಸ ಹೊಸ ಅಧ್ಯಯನಗಳಿಗೆ ಮುಂದಾಗುವಂತೆ ಕರೆ ನೀಡಿದರು.ಸಿಇಎನ್ ಪೋಲಿಸ್ ಇನ್ಸ್‌ಪೆಕ್ಟರ್ ಎಸ್.ಆರ್.ಜಗದೀಶ್, ಸಂಸ್ಥೆಯ ಅಧ್ಯಕ್ಷ ಎಸ್.ವಿ.ಸುಧಾಕರ್, ಸಂಸ್ಥೆಯ ಕಾರ್ಯದರ್ಶಿ ರತ್ನಾ ಸುಧಾಕರ್, ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ವೆಂಕಟರಮಣಪ್ಪ, ರೋಟರಿ ನಿರ್ಗಮಿತ ರಾಜ್ಯಪಾಲ ಉದಯಕುಮಾರ್ ಭಾಸ್ಕರ್, ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಟಿ.ಎಸ್.ರಾಜಶೇಖರ್ ಇದ್ದರು.

Share this article