ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ: ಕೆ.ಎಂ.ತಿಮ್ಮರಾಯಪ್ಪ

KannadaprabhaNewsNetwork |  
Published : Apr 28, 2024, 01:26 AM IST
ಫೋಟೋ 17ಪಿವಿಡಿ2ಪಾವಗಡ,ಅಂಬೇಡ್ಕರ್‌ ಯುವಕ ಸಂಘದ ವತಿಯಿಂದ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತ್ತುತ್ಸವದಲ್ಲಿ ಗಿಡಕ್ಕೆ ನೀರೆರೆದ ಬಳಿಕ ಅಂಬೇಡ್ಕರ್‌ ವಿಚಾರಧಾರೆ ಕುರಿತು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ವಕೀಲೆ ಎಲ್‌.ದಿವ್ಯ ಹಾಗೂ ಉಪನ್ಯಾಸಕ ಪ್ರೇಮಕುಮಾರ್‌ ಮಾತನಾಡಿದರು.   | Kannada Prabha

ಸಾರಾಂಶ

ವಿಶ್ವ ಕಂಡ ಮಹಾನ್‌ ಮಾನವತಾವಾದಿ ಡಾ.ಬಿ.ಅಂಬೇಡ್ಕರ್‌ ಕಲ್ಪಿಸಿದ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮುನ್ನಡೆಯುತ್ತಿರುವುದು ನಮ್ಮೆಲ್ಲರ ಸುದೈವವಾಗಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ವಿಶ್ವ ಕಂಡ ಮಹಾನ್‌ ಮಾನವತಾವಾದಿ ಡಾ.ಬಿ.ಅಂಬೇಡ್ಕರ್‌ ಕಲ್ಪಿಸಿದ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮುನ್ನಡೆಯುತ್ತಿರುವುದು ನಮ್ಮೆಲ್ಲರ ಸುದೈವವಾಗಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

ತಾಲೂಕಿನ ವೈ.ಎನ್‌.ಹೊಸಕೋಟೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದ ಅಂಬೇಡ್ಕರ್‌ ಪ್ರತಿಮೆ ಬಳಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸಂವಿಧಾನದ ಮೀಸಲು ವ್ಯವಸ್ಥೆಯಿಂದ ನಮ್ಮೆಲ್ಲರ ಬದುಕು ಹಸನಾಗಲು ಸಾಧ್ಯವಾಗಿದೆ. ಅಂಬೇಡ್ಕರ್‌ ಜಾತಿ ವ್ಯವಸ್ಥೆಯ ಮಧ್ಯೆ ಅನೇಕ ರೀತಿಯ ಕಷ್ಟದಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು ವಿದೇಶಗಳ ವಿವಿಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಮೂಲಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ ಎಂದರು.

ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದ ಮಹಾನ್‌ ವ್ಯಕ್ತಿಯಾಗಿದ್ದಾರೆ. ಶಿಕ್ಷಣ, ಸಂಘಟನೆ ಹೋರಾಟದ ಮೂಲಕ ಪ್ರಗತಿ ಕಾಣಬೇಕು. ಮೀಸಲು ಸೌಲಭ್ಯ ಸರಿಯಾದ ರೀತಿಯಲ್ಲಿ ಸದ್ಬಳಿಕೆ ಆಗಬೇಕು. ಎಲ್ಲರಲ್ಲಿಯೂ ಸ್ನೇಹ ಸೌಹಾರ್ಧತೆಯ ವಾತವಾರಣ ಕಟ್ಟಿಕೊಳ್ಳುವ ಮೂಲಕ ವಿದ್ಯಾವಂತರಾಗಿ ಪ್ರಗತಿ ಕಾಣುವಂತೆ ಕರೆ ನೀಡಿದರು.

ಉಪನ್ಯಾಸಕ ತಿಪ್ಪಗಾನಹಳ್ಳಿ ಪ್ರೇಮಕುಮಾರ್‌ ಮಾತನಾಡಿ, ಅಂಬೇಡ್ಕರ್‌ ಕಷ್ಟದ ದಾರಿಯಲ್ಲಿ ಬೆಳೆದು ಉತ್ತಮ ವ್ಯಕ್ತಿಯಾಗಿದ್ದಾರೆ. ಅವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು.

ವಕೀಲೆ ಎಲ್‌.ದಿವ್ಯ ಮಾತನಾಡಿ ,ಸಂವಿಧಾನದ ಮೂಲಕ ಅಂಬೇಡ್ಕರ್‌ ಕಲ್ಪಿಸಿದ್ದ ಮೀಸಲಾತಿ ಹಿನ್ನಲೆಯಲ್ಲಿ ನಾವು ವಿದ್ಯಾವಂತರಾಗಲು ಸಾಧ್ಯವಾಗಿದೆ. ಗ್ರಾಮದ ಯುವಕರು ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆ ನಡೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ಹೊಸಹಳ್ಳಿ ಮಲ್ಲಿಕಾರ್ಜನಪ್ಪ ಮಾತನಾಡಿದ್ದು, ವಕೀಲರಾದ ಅದಿನಾರಾಯಣಪ್ಪ, ರಘುನಂದನ್‌, ಚಂದ್ರಮೌಳಿ, ಮಲ್ಲೇಶ್‌, ಸಮಾಜ ಸೇವಕ ಪ್ರಸಾದ್‌ಬಾಬು ಮುಖಂಡರಾದ ಅಂಜಿನಪ್ಪ, ಪಾತನ್ನ ಹಾಗೂ ರಾಮಣ್ಣ, ನಾಗರಾಜ್‌, ಅಶೋಕ್‌, ಮಧು ಇತರೆ ಅಂಬೇಡ್ಕರ್‌ ಯುವಕ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ