ನಿರಂತರ ಶ್ರಮದಿಂದ ಯಶಸ್ಸು: ಸಿಎ ರಾಘವೇಂದ್ರ ಶೆಟ್ಟಿ

KannadaprabhaNewsNetwork |  
Published : Aug 19, 2026, 02:30 AM IST
 ಸಿಎ ಫೌಂಡೇಶನ್ ಹಾಗೂ ಸಿಎಸ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ  ಸಿಎ ರಾಘವೇಂದ್ರ ಶೆಟ್ಟಿ  | Kannada Prabha

ಸಾರಾಂಶ

ಸಿಎ ಕೋರ್ಸ್ ಅತ್ಯಂತ ಕಷ್ಟಕರವಾದದ್ದೇನೂ ಅಲ್ಲ. ನಿರಂತರ ಅಧ್ಯಯನ ಹಾಗೂ ಬದ್ಧತೆ ಇದ್ದರೆ ಇದನ್ನು ಸುಲಭವಾಗಿ ಸಾಧಿಸಬಹುದು. ಅಲ್ಲದೆ, ಈ ವೃತ್ತಿಗೆ ಯಾವುದೇ ನಿವೃತ್ತಿ ಇಲ್ಲದಿರುವುದರಿಂದ ಜೀವನಪರ್ಯಂತ ದುಡಿಯಬಹುದು ಎಂದು ಕರ್ನಾಟಕ ಲೆಕ್ಕಪರಿಶೋಧಕರ ಸಂಘದ ಮಾಜಿ ಅಧ್ಯಕ್ಷ ಸಿಎ ರಾಘವೇಂದ್ರ ಶೆಟ್ಟಿ ಹೇಳಿದರು.

ಕುಂದಾಪುರ: ಸಿಎ ಕೋರ್ಸ್ ಅತ್ಯಂತ ಕಷ್ಟಕರವಾದದ್ದೇನೂ ಅಲ್ಲ. ನಿರಂತರ ಅಧ್ಯಯನ ಹಾಗೂ ಬದ್ಧತೆ ಇದ್ದರೆ ಇದನ್ನು ಸುಲಭವಾಗಿ ಸಾಧಿಸಬಹುದು. ಅಲ್ಲದೆ, ಈ ವೃತ್ತಿಗೆ ಯಾವುದೇ ನಿವೃತ್ತಿ ಇಲ್ಲದಿರುವುದರಿಂದ ಜೀವನಪರ್ಯಂತ ದುಡಿಯಬಹುದು ಎಂದು ಕರ್ನಾಟಕ ಲೆಕ್ಕಪರಿಶೋಧಕರ ಸಂಘದ ಮಾಜಿ ಅಧ್ಯಕ್ಷ ಸಿಎ ರಾಘವೇಂದ್ರ ಶೆಟ್ಟಿ ಹೇಳಿದರು.

ಅವರು ಕುಂದಾಪುರದ ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಿಎ ಫೌಂಡೇಶನ್ ಹಾಗೂ ಸಿಎಸ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉನ್ನತ ಭವಿಷ್ಯ ರೂಪಿಸಲು ಕಾಲೇಜಿನಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಪರಿಣಿತರಿಂದ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ದೊಡ್ಡ ಕನಸು ಕಾಣಬೇಕು. ಸವಾಲುಗಳಿಗೆ ಅಂಜದೆ, ಸಿಎ ನಂತಹ ವೃತ್ತಿಪರ ಕೋರ್ಸ್‌ಗಳನ್ನು ಧೈರ್ಯವಾಗಿ ಸ್ವೀಕರಿಸಿ ಸಾಧನೆ ಮಾಡಬೇಕು ಎಂದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಮಯ ಪರಿಪಾಲನೆ ಅತೀ ಮುಖ್ಯ. ಸಿಎ ಮತ್ತು ಸಿಎಸ್ ಪರೀಕ್ಷೆಗಳು ಕೇವಲ ಜ್ಞಾನವನ್ನಷ್ಟೇ ಅಲ್ಲದೆ, ನಿಮ್ಮ ತಾಳ್ಮೆ ಮತ್ತು ಶ್ರಮವನ್ನು ಪರೀಕ್ಷಿಸುತ್ತವೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ ಇದ್ದರು. ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಪೂಜಾ ಶೆಟ್ಟಿ ನಿರೂಪಿಸಿದರು. ಸಿಎ ಫೌಂಡೇಶನ್‌ ಸಂಯೋಜಕ ಪ್ರಮಥ್ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದ್ಭಾವನಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಸುಜ್ಞಾನ ಪಿಯು ಕಾಲೇಜಿನಲ್ಲಿ ನಾಗರಪಂಚಮಿ ಸಂಭ್ರಮ