ಯಶಸ್ವಿಗೊಂಡ ರಾಜ್ಯಮಟ್ಟದ ಚೆಸ್ ಚಾಂಪಿಯನ್‌ಶಿಪ್

KannadaprabhaNewsNetwork |  
Published : Aug 31, 2026, 01:30 AM IST
30ಎಚ್ಎಸ್ಎನ್12 :  | Kannada Prabha

ಸಾರಾಂಶ

ಚೆಸ್ ಕ್ರೀಡೆಯನ್ನು ಶಾಲಾ ಹಂತದಿಂದಲೇ ಪ್ರೋತ್ಸಾಹಿಸುವ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಬೆಳೆಸುವ ನಿಟ್ಟಿನಲ್ಲಿ ಪಂದ್ಯಾವಳಿ ಮಹತ್ವ ಪಡೆದುಕೊಂಡಿದೆ. ರೇಟೆಡ್ ಪಂದ್ಯಾವಳಿಯಾಗಿರುವುದರಿಂದ ಸ್ಪರ್ಧಾಳುಗಳಿಗೆ ಅಧಿಕೃತ ರೇಟಿಂಗ್ ಪಡೆಯಲು ಹಾಗೂ ತಮ್ಮ ಚೆಸ್ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದರು. ಮಲೆನಾಡು ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಸ್. ಪ್ರದೀಪ್ ಮಾತನಾಡಿ, ಚೆಸ್ ಕ್ರೀಡೆ ಎಂಬುದು ಏಕಾಗ್ರತೆಯನ್ನು ಹೆಚ್ಚಿಸುವುದಲ್ಲದೇ ಬುದ್ದಿ ವೃದ್ಧಿಸುತ್ತದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಚೆಸ್ ಸಂಘ, ಕದಂಬ ಚೆಸ್ ಅಕಾಡೆಮಿ ಹಾಗೂ ಜನಮಿತ್ರ ಪತ್ರಿಕೆಯ ಸಹಯೋಗದಲ್ಲಿ 15 ವರ್ಷದೊಳಗಿನವರ ಮುಕ್ತ ಮತ್ತು 15 ವರ್ಷದೊಳಗಿನ ಬಾಲಕಿಯರ ರೇಟೆಡ್ ಚೆಸ್ ಚಾಂಪಿಯನ್‌ಶಿಪ್-೨೦೨೬ ಶುಕ್ರವಾರ ಯಶಸ್ವಿಯಾಗಿ ನಡೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ೧೫ ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಯುವ ಚೆಸ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಯಿತು. ಇದೇ ವೇಳೆ ರಾಯಲ್ ಅಪೋಲೊ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಡಾ. ಎಲ್.ಪಿ. ರವಿಕುಮಾರ್‌ ಮಾತನಾಡಿ, ಚೆಸ್ ಕ್ರೀಡೆಯನ್ನು ಶಾಲಾ ಹಂತದಿಂದಲೇ ಪ್ರೋತ್ಸಾಹಿಸುವ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಬೆಳೆಸುವ ನಿಟ್ಟಿನಲ್ಲಿ ಪಂದ್ಯಾವಳಿ ಮಹತ್ವ ಪಡೆದುಕೊಂಡಿದೆ. ರೇಟೆಡ್ ಪಂದ್ಯಾವಳಿಯಾಗಿರುವುದರಿಂದ ಸ್ಪರ್ಧಾಳುಗಳಿಗೆ ಅಧಿಕೃತ ರೇಟಿಂಗ್ ಪಡೆಯಲು ಹಾಗೂ ತಮ್ಮ ಚೆಸ್ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದರು. ಮಲೆನಾಡು ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಸ್. ಪ್ರದೀಪ್ ಮಾತನಾಡಿ, ಚೆಸ್ ಕ್ರೀಡೆ ಎಂಬುದು ಏಕಾಗ್ರತೆಯನ್ನು ಹೆಚ್ಚಿಸುವುದಲ್ಲದೇ ಬುದ್ದಿ ವೃದ್ಧಿಸುತ್ತದೆ. ಇಂತಹ ಕ್ರೀಡೆಯನ್ನು ಶಿಕ್ಷಣದೊಂದಿಗೆ ಕೊಡುವುದರಿಂದ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜನಮಿತ್ರ ಪತ್ರಿಕೆ ಸಂಪಾದಕ ನವೀನ್ ಸಿ. ಆರ್‌, ಕದಂಬ ಚೆಸ್ ಅಕಾಡೆಮಿ ಸಂಸ್ಥಾಪಕ ತ್ಯಾಗರಾಜ್ ಎಂ.ಟಿ., ಎಲ್.ಪಿ., ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಚೇತನ್ ರಾಮ್ ಎಚ್.ಆರ್‌, ಹಾಸನ ಜಿಲ್ಲಾ ಚೆಸ್ ಅಸೋಸಿಯೇಷನ್ ಖಜಾಂಚಿ ಪ್ರತಾಪ್ ವಿ.ಜಿ.ಎಂ., ಮಲ್ನಾಡ್ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಇಂದಿರಾ ಬನುದ್ದೂರ್‌ ಹಾಗೂ ಅಂತಾರಾಷ್ಟ್ರೀಯ ಮಧ್ಯಸ್ಥಗಾರ ಅನಿಲ್ ಎನ್.ಜೆ. ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಕ್ರೀಡಾಸಕ್ತಿ ಬೆಳೆಸಬೇಕು: ಚಲುವರಾಯಸ್ವಾಮಿ
ಯುವಕರೇ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಶಂಕರಲಿಂಗೇಗೌಡ