ಏಕಾಏಕಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಅನರ್ಹ: ಖಂಡನೆ

KannadaprabhaNewsNetwork |  
Published : Aug 26, 2025, 01:03 AM IST
25ಕೆಎಂಎನ್ ಡಿ26 | Kannada Prabha

ಸಾರಾಂಶ

ಕೆ.ಆರ್.ಪೇಟೆ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರನ್ನು ಏಕಾಏಕಿ ಅನರ್ಹಗೊಳಿಸಿರುವ ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಆರ್.ನಾಗಭೂಷಣ್ ‌ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೆ.ಆರ್.ಪೇಟೆ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರನ್ನು ಏಕಾಏಕಿ ಅನರ್ಹಗೊಳಿಸಿರುವ ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಆರ್.ನಾಗಭೂಷಣ್ ‌ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.

ಪಟ್ಟಣದ ಸಹಕಾರ ಸಂಘದ ಕಚೇರಿ ಎದುರು ಅಡುಗೆ ತಯಾರಿಸಿ ಟೀ ಕುಡಿದು ಪ್ರತಿಭಟಿಸಿದ ನಿರ್ದೇಶಕರು‌, ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ್ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಚ್.ಟಿ.ಮಂಜು ಪ್ರತಿಭಟನಾ ಸ್ಥಳದಲ್ಲಿ ಮೊಕಂ ಹೂಡಿ ಅಧಿಕಾರಿ ನಡೆಯನ್ನು ಖಂಡಿಸಿ, ಕರ್ತವ್ಯ ಲೋಪವೆಸಗಿರುವ ನಾಗಭೂಷಣ್ ವಿರುದ್ಧ ಶಿಸ್ತು ಕ್ರಮಕ್ಕೆ ಕೈಗೊಳ್ಳುವಂತೆ ಸ್ಥಳಕ್ಕೆ ಧಾವಿಸಿದ ಪ್ರಭಾರ ಉಪ ನಿಬಂಧಕ‌ ಬೀರೇಂದ್ರ ಅವರನ್ನು ಆಗ್ರಹಿಸಿದರು.

ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿಯ ಸಂಘದ ನಿರ್ದೇಶಕರಾದ ಲಲ್ಲಿತಮ್ಮ ಮತ್ತು ನಂಜುಂಡರವರು 2020-25ನೇರ ಅವಧಿಯಲ್ಲಿ ನಿರ್ದೇಶಕರಾಗಿದ್ದು, ಮತ್ತೆ 2025-2930 ಅವಧಿಗೆ ಪುನರ್ ಆಯ್ಕೆಯಾಗಿದ್ದರೂ ಸಹಾಯ ನಿಬಂಧಕರ ಆದೇಶದಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಅವರು ಕಟ್ಟಡ ನಿರ್ಮಾಣಕ್ಕೆ ಸಹಕಾರ ಮಂಡಳಿ ಮಂಜೂರಾತಿ ಇಲ್ಲದೆ ನಿರ್ಮಾಣ ಮಾಡಲಾಗಿದ್ದ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಚರಣೆ ಮಾಡಲಾಗಿದೆ ಎಂದು ಕಾರಣ ನೀಡಿ ದುರುದ್ದೇಶದಿಂದ ನಿರ್ದೇಶಕ ಸ್ಥಾನದಿಂದ ಮೂರು ವರ್ಷಗಳವರೆಗೆ ಅನರ್ಹಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಹೊಸಹೊಳಲು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿದ್ದ ಎಚ್.ಎಂ.ಕೃಷ್ಣ ಅವರನ್ನು ಜಾತಿ ಆಧಾರದ ಮೇಲೆ ವಜಾಗೊಳಿಸಿದ್ದಾರೆ. ಇದೇ ರೀತಿ ಸೋಮನಹಳ್ಳಿ, ಹೊಸಹೊಳಲು, ಆಗ್ರಹಾರಬಾಚಹಳ್ಳಿ ಸೇರಿದಂತೆ ವಿವಿಧ ಸಂಘಗಳಲ್ಲಿನ ನಿರ್ದೇಶಕರನ್ನು ವಜಾಗೊಳಿಸಲಾಗಿದೆ. ಜತೆಗೆ ಮನ್ಮುಲ್ ಚುನಾವಣೆ ವೇಳೆಯೂ ಆರ್ಹ ಡೆಲಿಗೇಟ್‌ಗಳನ್ನು ಅನರ್ಹಗೊಳಿಸಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಸಹಾಯಕ ನಿಬಂಧಕ‌ ಎಚ್.ಆರ್ ನಾಗಭೂಷಣ್ ರಜೆ ಹಾಕಿರುವ ಬಗ್ಗೆ ಉಳಿದ ಅಧಿಕಾರಿಗಳು ಮಾಹಿತಿ ನೀಡಲಾಗಿ ಯಾವ ಆದರದ ಮೇಲೆ ವಜಾ ಗೊಳಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಉಪ ನಿಬಂಧಕರು ಪ್ರತಿಭಟನಾ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದು ಕುಳಿತರು.

ಶಾಸಕರಿಂದ ಮನವಿ ಪತ್ರ ಸ್ವೀಕರಿಸಿದ ಉಪನಿಬಂಧಕ‌ ಬೀರೇಂದ್ರ ಅವರು, ಸಹಾಯಕ‌ ನಿಬಂಧಕ ನಾಗಭೂಷಣ್ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ಟಿಎಪಿಎಂಎಸ್ ನಿರ್ದೇಶಕ ಟಿ.ಬಲದೇವ್, ಜೆಡಿಎಸ್ ತಾಲೂಕು ಯುವ ಅಧ್ಯಕ್ಷ ಮೋಹನ್ ಮಲ್ಲೇನಹಳ್ಳಿ, ಮಹಾದೇವೆಗೌಡ, ಅಲೋಕ್ ಚಂದ್ರ, ಸಿಂಧಘಟ್ಟ ಗಿರೀಶ್, ಇತರೆ ನಿರ್ದೇಶಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!
ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ