ಸಕ್ಕರೆ ಕಾರ್ಖಾನೆ 350 ಕಾರ್ಮಿಕರು ಕಾಯಂ

KannadaprabhaNewsNetwork | Published : Oct 19, 2024 12:20 AM

ಸಾರಾಂಶ

22 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ 350 ಕಾರ್ಮಿಕರನ್ನು ಸಹಕಾರ ಇಲಾಖೆಯ ಮಾನ್ಯತೆಯಂತೆ ಕಾಯಂಗೊಳಿಸಲಾಗಿದೆ ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

22 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ 350 ಕಾರ್ಮಿಕರನ್ನು ಸಹಕಾರ ಇಲಾಖೆಯ ಮಾನ್ಯತೆಯಂತೆ ಕಾಯಂಗೊಳಿಸಲಾಗಿದೆ ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

ಶುಕ್ರವಾರ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ೨೩ನೇ ಬಾಯ್ಲರ್ ಪ್ರದೀಪನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಹಿತ ಕಾಪಾಡುತ್ತಲಿದ್ದು, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಕೂಡ ರೈತರ ಮಕ್ಕಳಾಗಿದ್ದಾರೆ. ಕಾರ್ಖಾನೆಯ ಬೆಳವಣಿಗೆಯಲ್ಲಿ ಅವರ ಪಾತ್ರವೂ ಮುಖ್ಯವಾಗಿದ್ದು, ಸೇವೆ ಕಾಯಂಗೊಳಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಇತ್ತು. ಆದರೆ, ಕೆಲ ಕಾನೂನಿನ ಅಡತಡೆಯಿಂದ ವಿಳಂಬವಾಗಿತ್ತು. ಈಗ ಅವರ ಬೇಡಿಕೆ ಈಡೇರಿದೆ ಎಂದರು.ಪ್ರಸಕ್ತ ವರ್ಷದಲ್ಲಿ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ತಾಲೂಕಿನ ರೈತರು ಕಾರ್ಖಾನೆಗೆ ಉತ್ತಮ ಕಬ್ಬು ಪೂರೈಸಿ ಸಹಕರಿಸಬೇಕು. ಅಥಣಿ ತಾಲೂಕಿನಲ್ಲಿ ಐದು ಸಕ್ಕರೆ ಕಾರ್ಖಾನೆಗಳಿದ್ದು, ನಮ್ಮದು ರೈತರ ಕಾರ್ಖಾನೆ. ರೈತರಿಗೆ ತೂಕದಲ್ಲಿ ಯಾವುದೇ ಕಾಲದಲ್ಲೂ ಮೋಸ ಮಾಡಿಲ್ಲ , ರೈತರ ಕಬ್ಬನ್ನು ಬಂಗಾರ ತೂಕ ಮಾಡಿದ ಹಾಗೆ ತೂಕ ಮಾಡುತ್ತೇವೆ. ತೂಕದಲ್ಲಿ ವ್ಯತ್ಯಾಸ ಬಂದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಅವರು.ಈ ಬಾರಿಯೂ ಎಫ್ಆರ್ ಪಿಗಿಂತ ಹೆಚ್ಚಿಮ ದರ ನೀಡುತ್ತೇವೆ. ರ್ಮಿಕರ ಶ್ರಮದಿಂದ ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದು ತಿಳಿಸಿದರು.ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಮಾತನಾಡಿದರು. ಕವಲಗುಡ್ಡದ ಅಮರೇಶ್ವರ ಮಹಾರಾಜರು, ಹಲ್ಯಾಳದ ಅಭಿನವ ಗುರುಸಿದ್ದ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಬ್ಯಾಡಗಿಯ ಬನಸಿದ್ದ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಉಪಾಧ್ಯಕ್ಷ ಶಂಕರ ವಾಘಮೋಡೆ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಶಾಂತಿನಾಥ ನಂದೇಶ್ವರ, ರಮೇಶ ಪಟ್ಟಣ, ಸೌರಭ ಪಾಟೀಲ, ಎಂ.ಎಂ.ಗೋಟಕಿಂಡಿ, ಎಸ್.ಎಚ್.ನಾಯಿಕ, ಎಚ್‌.ವೈ. ಜಗದೇವ, ಪಿ.ಸಿ.ಪಾಟೀಲ ಸೇರಿದಂತೆ ಇತರರು ಇದ್ದರು. ಜಿ.ಎಂ.ಜತ್ತಿ ಸ್ವಾಗತಿಸಿದರು. ಸುರೇಶ ಠಕ್ಕಣ್ಣವರ ನಿರೂಪಿಸಿದರು. ಸಿ.ಡಿ.ಪಾಶ್ಚಾಪೂರೆ ವಂದಿಸಿದರು.

Share this article