ಹೇಮಾವತಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಚಾಲನೆ

KannadaprabhaNewsNetwork |  
Published : Jun 30, 2025, 12:34 AM IST
29ಎಚ್ಎಸ್ಎನ್10 : ಕಬ್ಬು ಅರೆಯುವ ಮುನ್ನ ಪೂಜೆ ಮಾಡಿ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ನಿಗದಿತ ಅವಧಿಯೊಳಗೆ ಕಬ್ಬು ಕಟಾವು ಮಾಡಲು ಸಹಾಯವಾಗುವಂತೆ ನೆರೆ ಜಿಲ್ಲೆ ಹಾಗೂ ರಾಜ್ಯದ ಕಟಾವು ಗುಂಪುಗಳ ಆಳುಗಳಿಗೆ ೩.೩೦ ಕೋಟಿ ರು. ಹಣವನ್ನು ಮುಂಗಡವಾಗಿ ನೀಡಲಾಗಿದೆ.

ಕನ್ನಡಪ್ರಭವ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆಗೆ ಭಾನುವಾರ ಚಾಲನೆ ನೀಡಲಾಯಿತು.

ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪೂರ್ಣಸ್ವಾಮಿ ಮಾತನಾಡಿ, ಪ್ರತಿ ಟನ್ ಕಬ್ಬಿಗೆ ೩,೨೯೧ ರು. ದರ ನಿಗದಿಪಡಿಸಲಾಗಿದೆ ಎಂದರು. ಕಬ್ಬು ಅಭಿವೃದ್ಧಿ ಅಧಿಕಾರಿ ದೇವೇಗೌಡ ಮಾತನಾಡಿ, ೨೦೨೪- ೨೫ನೇ ಸಾಲಿನಲ್ಲಿ ೪.೧೩ ಲಕ್ಷ ಟನ್ ಕಬ್ಬನ್ನು ಅರೆಯಲಾಗಿದೆ. ಈ ಬಾರಿ ೫೦೮ ಎಕರೆ ವಿಸ್ತೀರ್ಣದಲ್ಲಿ ಅಂದಾಜು ೪ ಲಕ್ಷ ಟನ್ ಕಬ್ಬು ಲಭ್ಯವಿದ್ದು, ಪಕ್ಕದ ಜಿಲ್ಲೆಗಳಿಂದ ಕಬ್ಬನ್ನು ತರಿಸಿಕೊಂಡು ೫ ಲಕ್ಷ ಟನ್ ಕಬ್ಬನ್ನು ಅರೆಯುವ ಗುರಿ ಒಂದಲಾಗಿದೆ ಎಂದರು.

ನಿಗದಿತ ಅವಧಿಯೊಳಗೆ ಕಬ್ಬು ಕಟಾವು ಮಾಡಲು ಸಹಾಯವಾಗುವಂತೆ ನೆರೆ ಜಿಲ್ಲೆ ಹಾಗೂ ರಾಜ್ಯದ ಕಟಾವು ಗುಂಪುಗಳ ಆಳುಗಳಿಗೆ ೩.೩೦ ಕೋಟಿ ರು. ಹಣವನ್ನು ಮುಂಗಡವಾಗಿ ನೀಡಲಾಗಿದೆ, ೧೫೦ ಕಬ್ಬು ಕಟಾವು ಮೇಸ್ತ್ರಿಗಳಿಂದ ೩೬೦ ಕಟಾವು ಗುಂಪುಗಳನ್ನು ಒದಗಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕಬ್ಬು ಸಾಗಿಸಲು ಕಾರ್ಖಾನೆಗೆ ಆಗತ್ಯಕ್ಕೆ ತಕ್ಕಂತೆ ದಾರಿ, ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿ ನೋಂದಣಿ ಪ್ರಾರಂಭಿಸಲಾಗಿದೆ ಎಂದರು.

ಕಾರ್ಖಾನೆಯು ರೈತರಿಗೆ ಕಬ್ಬಿನ ಬಿತ್ತನೆ ಬಡ್ಡಿರಹಿತವಾಗಿ ಸಾಲ ನೀಡುತ್ತಿದೆ. ರೈತರಿಗೆ ಸಸಿಗಳ ಸಾಗಾಣಿಕೆಗೆ ತಗಲುವ ಸಾಗಾಣಿಕ ವೆಚ್ಚವನ್ನು ಕಾರ್ಖಾನೆಯಿಂದ ಒದಗಿಸಲಾಗುವುದು. ಕಬ್ಬಿನ ಬೆಳೆಗೆ ಸಮತೋಲನ ಗೊಬ್ಬರವನ್ನು ಒದಗಿಸಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8ನೇ ಸೆಮಿಸ್ಟರ್‌ನಲ್ಲಿ 6 ತಿಂಗಳು ಕಡ್ಡಾಯ ಇಂಟರ್ನ್ ಶಿಪ್
ಕ್ರೀಡೆಯಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ: ಆರ್ ಟಿಒ ಮಲ್ಲಿಕಾರ್ಜುನ್ ಕಿವಿಮಾತು