ಮಕ್ಕಳಲ್ಲಿ ಸೂಕ್ತ ಪ್ರತಿಭೆ ಹೊರಹಾಕಲು ಬೇಸಿಗೆ ಶಿಬಿರ ಸಹಕಾರಿ-ಹಿರೇಮಠ

KannadaprabhaNewsNetwork |  
Published : Apr 21, 2025, 12:47 AM IST
ಪೋಟೊ ಕ್ಯಾಪ್ಸನ್:ಡಂಬಳ ಹೋಬಳಿಯ ಚುರ್ಚಿಹಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಸಿಗೆ ಸಂಭ್ರಮ ಶಿಬಿರದಲ್ಲಿ ದೇಶೀಯ ಸಂಸ್ಕೃತಿ ಪರಿಚಯ ಸಮಾರೋಪ‌ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ವಿ.ಎಂ. ಹಿರೇಮಠ. | Kannada Prabha

ಸಾರಾಂಶ

ಮಕ್ಕಳ ಬೇಸಿಗೆ ಸಂಭ್ರಮ ಶಿಬಿರವು ಅವರಲ್ಲಿನ ಸೂಕ್ತ ಪ್ರತಿಭೆಯನ್ನು ಹೊರ ತರಲು ಸಹಕಾರಿಯಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ಹಿರೇಮಠ ಹೇಳಿದರು.

ಡಂಬಳ: ಮಕ್ಕಳ ಬೇಸಿಗೆ ಸಂಭ್ರಮ ಶಿಬಿರವು ಅವರಲ್ಲಿನ ಸೂಕ್ತ ಪ್ರತಿಭೆಯನ್ನು ಹೊರ ತರಲು ಸಹಕಾರಿಯಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ಹಿರೇಮಠ ಹೇಳಿದರು.

ಡಂಬಳ ಹೋಬಳಿಯ ಚುರ್ಚಿಹಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೇಸಿಗೆ ಸಂಭ್ರಮ ಶಿಬಿರದಲ್ಲಿ ದೇಶೀಯ ಸಂಸ್ಕೃತಿ ಪರಿಚಯ ಸಮಾರೋಪ‌ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ, ಧ್ಯಾನ, ನೃತ್ಯ, ಚಿತ್ರಕಲೆ ಜೊತೆಗೆ ದೇಶಿಯ ಕ್ರೀಡೆಗಳಾದ ಲಗೋರಿ, ಚಿಣಿಮಿಣಿ ಬಿಲ್ಲಿ, ಗೋಲಿಯಂತಹ ಜಾನಪದ ಆಟಗಳನ್ನು ಮಕ್ಕಳಿಗೆ ಕಲಿಸಿಕೊಡಲಾಯಿತು. ಸಾಮೂಹಿಕ ನೃತ್ಯ, ಜಾನಪದ ಹಾಡುಗಳು, ಮೋಜಿನ ಗಣಿತ, ಸೃಜನಶೀಲ ಬರವಣಿಗೆ, ಕಥೆ, ಕವನ ರಚನೆ, ರಂಗಾಟ ಸೇರಿದಂತೆ ಮುಂತಾದ ದೇಶಿಯ ಸಂಸ್ಕೃತಿಯನ್ನು ಕಲೆಗಳನ್ನು ಮಕ್ಕಳಿಗೆ ಮೂರು ದಿನದ ಶಿಬಿರದಲ್ಲಿ ಹೇಳಿ ಕೊಡಲಾಯಿತು.

ಮೊದಲನೇ ದಿನ ವಾಯ್. ಎನ್. ಒಸೆಕರ ಪ್ರೌಢಶಾಲಾ ದೈಹಿಕ ಶಿಕ್ಷಕರು ಮಕ್ಕಳಿಗೆ ಏರೋಬಿಕ್ಸ್ ವ್ಯಾಯಾಮವನ್ನು ಹೇಳಿಕೊಟ್ಟರು. 2ನೇ ದಿನ ಶಿಕ್ಷಕರಾದ ಎಸ್. ಆರ್. ಬಂಡಿ ಮಕ್ಕಳಿಗೆ ಚಿತ್ರಕಲೆ ಮತ್ತು ಕಥೆಗಳನ್ನು ಹೇಳಿಕೊಟ್ಟರು. 3ನೇ ದಿನ ವಿ. ಕೂಬಳ್ಳಿ ಗುರುಮಾತೆಯರು ಧ್ಯಾನ ಮತ್ತು ಯೋಗ ಹೇಳಿಕೊಟ್ಟರು. ಜೊತೆಗೆ ವಿಜಯ ಕಿರೇಸೂರು ಮತ್ತು ಚಿತ್ರಕಲಾ ಶಿಕ್ಷಕರು ಮಕ್ಕಳಿಗೆ ಪೇಪರ್‌ ಕಟ್ಟಿಂಗ್ ಹಾಗೂ ಒರಿಗಾಮಿ ಕಲೆಯ ಪರಿಚಯ ಮಾಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಬಿ.ಬಿ. ಪುರದ ಗ್ರಾಪಂ ಸದಸ್ಯ ಸಂಗನಗೌಡ ಹುಚ್ಚನಗೌಡ್ರ್, ಎಸ್. ಆರ್. ಬಂಡಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಪಿ. ಬಿ. ಮುಧೋಳಮಠ, ಮೋಹನ್ ಮೆಣಸಿನಕಾಯಿ, ಬಿ.ಬಿ. ಹಡಪದ, ಗೋಡಿ ಗುರುಗಳು, ಸಂಪನ್ಮೂಲ ವ್ಯಕ್ತಿ ಎಸ್. ಎಮ್. ಪಾಟೀಲ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರುಗಳಾದ ಬಸಯ್ಯ ಗದಗಿನಮಠ, ರಾಮಪ್ಪ ಹರಣಶಿಕಾರಿ, ಸಿದ್ಧಲಿಂಗಯ್ಯ ವೀರಾಪುರ, ಗೇನಯ್ಯ ಹಿರೇಮಠ, ಹುಸೇನಸಾಬ ನದಾಫ, ಈರಣ್ಣ ಕವಲೂರ, ಪುಟ್ಟರಾಜ ನಂದಿಹಳ್ಳಿ ಮತ್ತು ಊರಿನ ಹಿರಿಯರಾದ ಸಿದ್ಧಲಿಂಗಯ್ಯ ಭೂಸನೂರಮಠ, ಶಿವಕುಮಾರ ಗದಗಿನಮಠ, ಜಂಬಯ್ಯ ವೀರಾಪುರ, ಸಿದ್ಧರಾಮಯ್ಯ ಪಾಟೀಲ, ಪರ್ವತಗೌಡ ಹಿರೇಮಠ, ಮಲ್ಲಪ್ಪ ಮಡಿವಾಳರ, ಸಣ್ಣಅಯ್ಯನಗೌಡ್ರ್, ಶಾಲೆಯ ಶಿಕ್ಷಕರಾದ ಆರ್.ಎಂ. ಕುಲಕರ್ಣಿ ಸ್ವಾಗತಿಸಿದರು. ಕುಮಾರ ಕೋಡಗಂಟಿ ನಿರೂಪಿಸಿದರು. ಆರ್.ಬಿ. ನದಾಫ್ ವಂದನಾರ್ಪಣೆಯನ್ನು ಸಲ್ಲಿಸಿದರು. ಕದಾಂಪುರ ಗ್ರಾಮದ ವಿವಿಧ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ