ಕುಕ್ಕುಂದೂರು-ನಕ್ರೆ-ಪೊಸನೊಟ್ಟು ರಸ್ತೆ ಕಾಮಗಾರಿಗೆ ಸುನಿಲ್‌ ಚಾಲನೆ

KannadaprabhaNewsNetwork |  
Published : May 30, 2026, 02:45 AM IST
ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸುನೀಲ್‌ | Kannada Prabha

ಸಾರಾಂಶ

ಕುಕ್ಕುಂದೂರು ಗ್ರಾಮದ ಆನಂದಿ ಮೈದಾನ-ನಕ್ರೆ-ಪೊಸನೊಟ್ಟು ಸಂಪರ್ಕ ರಸ್ತೆಯ ದುರಸ್ತಿ ಕಾಮಗಾರಿಗೆ ಶಾಸಕ ವಿ.ಸುನೀಲ್ ಕುಮಾರ್ 70 ಲಕ್ಷ ₹ ಅನುದಾನ ಮಂಜೂರು ಮಾಡಿದ್ದು, ನಮನಪುರ-ಪೊಸನೊಟ್ಟು ಕ್ರಾಸ್ ಬಳಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಕಾರ್ಕಳ: ಕುಕ್ಕುಂದೂರು ಗ್ರಾಮದ ಆನಂದಿ ಮೈದಾನ-ನಕ್ರೆ-ಪೊಸನೊಟ್ಟು ಸಂಪರ್ಕ ರಸ್ತೆಯ ದುರಸ್ತಿ ಕಾಮಗಾರಿಗೆ ಶಾಸಕ ವಿ.ಸುನೀಲ್ ಕುಮಾರ್ 70 ಲಕ್ಷ ₹ ಅನುದಾನ ಮಂಜೂರು ಮಾಡಿದ್ದು, ನಮನಪುರ-ಪೊಸನೊಟ್ಟು ಕ್ರಾಸ್ ಬಳಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.ರಸ್ತೆಯ ಶಾಶ್ವತ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದರು.

ಜ್ಯೋತಿ ನಗರ-ಕೊಂಡೇನಾಕ್ಯಾರು-ಗುಳಿಗಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಗೂ 55 ಲಕ್ಷ ₹ವೆಚ್ಚದಲ್ಲಿ ಚಾಲನೆ ನೀಡಲಾಯಿತು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರವೀಂದ್ರ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಂತೋನಿ ಡಿಸೋಜಾ ಹಾಗೂ ಶಶಿಮಣಿ ಸಂಪತ್, ಪ್ರಶಾಂತ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಶೇಖರ್ ಸುವರ್ಣ, ಪ್ರಸಾದ್, ಪ್ರಾಣೇಶ್ ಶೆಟ್ಟಿ, ಹರೀಶ್ ಕುಂದರ್, ಜಯಕರ ಮಡಿವಾಳ, ಮಧುಕರ ಸುವರ್ಣ ಮತತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಗ್ಗಹಳ್ಳಿಯಲ್ಲಿ ಅದ್ಧೂರಿ ಬಸವ ಜಯಂತಿ ಆಚರಣೆ
ಅವಶ್ಯಕತೆಯಂತೆ ಬೀಜ, ಗೊಬ್ಬರ ಸಂಗ್ರಹವಿದೆ