ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯದಲ್ಲಿ ರಕ್ತದೊತ್ತಡ ಮತ್ತು ಇಸಿಜಿ ಯಂತ್ರಗಳು ಹಾಳಾಗಿದ್ದು, ರೋಗಿಗಳು ಈ ಪರೀಕ್ಷೆಗಾಗಿ ಅಂದಾಜು ಖಾಸಗಿ ಲ್ಯಾಬ್ಗಳಲ್ಲಿ 200 ರುಗಳಿಂದ 1,000 ದವರೆಗೂ ವ್ಯಯಿಸುವ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸುಂಟಿಕೊಪ್ಪ: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯದಲ್ಲಿ ರಕ್ತದೊತ್ತಡ ಮತ್ತು ಇಸಿಜಿ ಯಂತ್ರಗಳು ಹಾಳಾಗಿದ್ದು, ರೋಗಿಗಳು ಈ ಪರೀಕ್ಷೆಗಾಗಿ ಅಂದಾಜು ಖಾಸಗಿ ಲ್ಯಾಬ್ಗಳಲ್ಲಿ 200 ರುಗಳಿಂದ 1,000 ದವರೆಗೂ ವ್ಯಯಿಸುವ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸುಂಟಿಕೊಪ್ಪದ 7 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಾಚರಿಸುತ್ತಿದೆ. ಸುಂಟಿಕೊಪ್ಪ ಹೋಬಳಿ ಕೇಂದವಾಗಿದ್ದು, ಸುಂಟಿಕೊಪ್ಪವೊಂದರಲ್ಲೇ ಅಂದಾಜು 12,000 ಕ್ಕೂ ಮಿಕ್ಕಿ ಜನಸಂಖ್ಯೆ ಇದೆ. ಇನ್ನು ಸುತ್ತ ಮುತ್ತಲಿನ 6 ಗ್ರಾಮಗಳ ಜನತೆಯು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದು ಇಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಚಿಕಿತ್ಸೆಗೆ ಆಶ್ರಯಿಸಿದ್ದಾರೆ. ಸರ್ಕಾರದ ನಿಯಮದ ನಿಗದಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಂತಿಷ್ಟು ಪ್ರಮಾಣದಲ್ಲಿ ಜೌಷಧಿಗಳನ್ನು ಪೂರೈಸಲಾಗುತ್ತಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತೀ ಹೆಚ್ಚು ಅನಾರೋಗ್ಯ ಪೀಡಿತರು ಚಿಕಿತ್ಸೆಗೆ ಆಗಮಿಸುವುದರಿಂದ ನಿರ್ದಿಷ್ಟ ಪ್ರಮಾಣದಲ್ಲಿ ಔಷಧಿಗಳನ್ನು ನೀಡಲಾಗುತ್ತಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಗಂಭೀರ ಸಮಸ್ಯೆಯ ದೂರು ಸಲ್ಲಿಸಲಾಗಿದ್ದರೂ ಇಂದಿನವರೆಗೂ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸುವಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಕ್ತದೊತ್ತಡ ಮತ್ತು ಹೃದಯ ಸಂಬಂಧಿಸಿದ ಇಸಿಜಿ ಪರೀಕ್ಷೆಯ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಬಡ ಜನತೆಯು ಇದರ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾಗಿದೆ. ಇದಕ್ಕಾಗಿ 200 ರಿಂದ 1000 ರೂವರೆಗೆ ವ್ಯಯಿಸುವ ಪರಿಸ್ಥತಿ ನಿರ್ಮಾಣಗೊಂಡಿದೆ ಸಂಬಂಧಿಸಿದ ಮೇಲಾಧಿಕಾರಿಗಳು ಕೂಡಲೇ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.
-ಕೆ.ಎ.ಲತೀಫ್ ಸುಂಟಿಕೊಪ್ಪ ವೇವ್ ಸಂಘಟನೆಯ ಸಂಚಾಲಕ
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವೆಂದು ಹೆಸರಿಗಷ್ಟೇ ಕಾರ್ಯಚರಿಸುತ್ತಿದೆ. ಹಲವಾರು ಬಾರಿ ಮೂಲ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿ ಜಿಲ್ಲಾಡಳಿತದಲ್ಲಿ ಗಮನಕ್ಕೆ ತರಲಾಗಿದ್ದರೂ ಸಮಸ್ಯೆ ಪರಿಹಾರಕ್ಕೆ ಇಲಾಖೆ ಮುಂದಾಗದಿರುವುದು ವಿಷಾದ ಸಂಗತಿ.
-ಪಿ.ಆರ್.ಸುನಿಲ್ ಕುಮಾರ್. ಬಡಜನತೆಯು ಅನಾರೋಗ್ಯಕ್ಕೆ ತುತ್ತಾದಾಗ ಮೊದಲಿಗೆ ಬರುವುದು ಈ ಪ್ರಾಥಮಿಕ ಆರೋಗ್ಯ ಬರುತ್ತಿರುವುದು ನಿತ್ಯ ಕಾಣುತ್ತಿದ್ದೇವೆ ಆದರಲ್ಲೂ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ತುತ್ತಾಗಿರುವ ಮಂದಿಗೆ ಪೂರ್ಣ ಪ್ರಮಾಣದ ಚಿಕಿತ್ಸೆಗೆ ಜನತೆಯು ಆಗಮಿಸಿ ಪೂರ್ಣ ಪ್ರಮಾಣದಲ್ಲಿ ಔಷಧ ದೊರಕುತ್ತಿಲ್ಲ
-ಬಿ.ಐ.ಭವಾನಿ ಸುಂಟಿಕೊಪ್ಪ ಗ್ರಾ.ಪಂ.ಮಾಜಿ ಅಧ್ಯಕ್ಷೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಜಿ ಪರೀಕ್ಷಾ ರಕ್ತದೊತ್ತಡ ಪರೀಕ್ಷಾ ಯಂತ್ರಗಳು ಕಾರ್ಯನಿರ್ವಹಿಸದೆ ಇರುವ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.