ಬಿಜೆಪಿ ಅಭ್ಯರ್ಥಿಗಳ ಬೆಂಬಲಿಸಿ: ಬೆಳ್ಳಿ ಪ್ರಕಾಶ್ ಮನವಿ

KannadaprabhaNewsNetwork |  
Published : Jun 02, 2024, 01:46 AM IST
1ಕೆೆಕೆಡಿಯು5. | Kannada Prabha

ಸಾರಾಂಶ

ಕಡೂರು, ಬುದ್ಧಿವಂತರು ಹಾಗೂ ವಿಚಾರವಂತರು ಆಗಿರುವ ಸರಳ ವ್ಯಕ್ತಿತ್ವದ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಎಸ್ ಎಲ್ ಭೋಜೇಗೌಡರನ್ನು ಬೆಂಬಲಿಸಬೇಕು ಎಂದು ಅಪೆಕ್ಸ್‌ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ಕಡೂರು

ಬುದ್ಧಿವಂತರು ಹಾಗೂ ವಿಚಾರವಂತರು ಆಗಿರುವ ಸರಳ ವ್ಯಕ್ತಿತ್ವದ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಎಸ್ ಎಲ್ ಭೋಜೇಗೌಡರನ್ನು ಬೆಂಬಲಿಸಬೇಕು ಎಂದು ಅಪೆಕ್ಸ್‌ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮನವಿ ಮಾಡಿದರು.

ಕಡೂರು ಪಟ್ಟಣದ ನ್ಯಾಯಾಲಯ, ಪ್ರಥಮ ದರ್ಜೆ ಕಾಲೇಜು, ಭಾರತೀಯ ಜೀವವಿಮಾ ನಿಗಮ ಮತ್ತಿತರ ಕಡೆ ಅಭ್ಯರ್ಥಿಗಳ ಪರ ಮತಯಾಚಿಸಿದರು. 2018 ರಲ್ಲಿ ತಾವುಗಳು ನನಗೆ ಶಾಸಕನಾಗಲು ಅಭೂತಪೂರ್ವ ಅವಕಾಶ ನೀಡಿದ್ದೀರಿ ಅದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದೀಗ ಮತ್ತೆ ಮತಯಾಚನೆಗೆ ಬಂದಿದ್ದೇನೆ. ಉತ್ತಮ ವ್ಯಕ್ತಿತ್ವ ಹೊಂದಿರುವ ಡಾ. ಧನಂಜಯ ಸರ್ಜಿಯವರು ಬಿಜೆಪಿ ನೈರುತ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ವೈದ್ಯಕೀಯ ರಂಗದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡು ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಸರಳ ವ್ಯಕ್ತಿತ್ವದ ಧನಂಜಯ್ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಬೇಕು ಎಂದರು.

ಸ್ವಾತಂತ್ರ್ಯ ಪೂರ್ವದಿಂದಲೂ ವಕೀಲ ಸಮೂಹ ದೇಶದ ಎಲ್ಲ ಆಗು ಹೋಗುಗಳನ್ನು ನೋಡುತ್ತಾ ದೇಶದ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಹೆಚ್ಚು ವಕೀಲರಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬುದನ್ನು ತಿಳಿಯುವ ಮೂಲಕ ತಮ್ಮ ಅಮೂಲ್ಯವಾದ ಮತವನ್ನು ಡಾ. ಧನಂಜಯ ಸರ್ಜಿ ಹಾಗು ಶಿಕ್ಷಕರ ಕ್ಷೇತ್ರದಿಂದ ನಮ್ಮ ಪಕ್ಷದ ಮೈತ್ರಿ ಅಭ್ಯರ್ಥಿ ಎಸ್ ಎಲ್ ಭೋಜೇಗೌಡ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.

ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಜೇಶ್ , ಕಾರ್ಯದರ್ಶಿ ಸುನಿತಾ ಕಲ್ಲೇಶ್, ಗೌರವಾಧ್ಯಕ್ಷ ಕೆ.ಎನ್ ಜಯಣ್ಣ, ಶಿವಕುಮಾರ್, ಗೋವಿಂದರಾಜು,ಮುಖಂಡರಾದ ಮಲ್ಲಿಕಾರ್ಜುನ್,ಸಿದ್ದಪ್ಪ,ಚಂದ್ರು, ಸೀಗೇಹಡ್ಲು ಹರೀಶ್ ಮತ್ತಿತರರು ಇದ್ದರು.

1ಕೆಕೆಡಿಯು5.

ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನೈರುತ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕಡೂರು ನ್ಯಾಯಾಲಯದಲ್ಲಿ ಮತಯಾಚನೆ ಮಾಡಿದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ