ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸಿ

KannadaprabhaNewsNetwork | Published : Apr 25, 2024 1:04 AM

ಸಾರಾಂಶ

ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕೆಂದು ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕೆಂದು ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮನವಿ ಮಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಎರಡಲ್ಲ ಮೂರು ಬಾರಿ ಸಂಪರ್ಕ ಮಾಡಿದ್ದು, ಕ್ಷೇತ್ರವಾರು, ಬೂತ್ ಮಟ್ಟದಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಸಂಘಟಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿಯ ಕುರಿತ ಸಾಧನೆಯ ಕರಪತ್ರಗಳನ್ನು ಮನೆ ಮನೆಗೆ ತಲುಪಿಸಲಾಗಿದೆ ಎಂದರು. ೨೦೨೯ಕ್ಕೆ ವ್ಯಕ್ತಿ ತಲಾದಾಯ ೧೫೦೦ ರು. ಆಗಲಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಿಂದಾಗಿ ವಾಹನಗಳಿಗೆ ಬಳಕೆ ಮಾಡುತ್ತಿದ್ದ ಪೆಟ್ರೋಲ್, ಡೀಸೆಲ್ ಉಳಿತಾಯದ ಜೊತೆಗೆ ಸಮಯವು ಕಡಿಮೆಯಾಗಲಿದೆ. ಪ್ರತಿ ಮನೆಗಳ ಮೇಲೆ ಸೋಲಾರ್ ಅಳವಡಿಕೆ ಚಿಂತನೆ ನಡೆಸಲಾಗಿದೆ ಹೀಗಾಗಿ ಉಚಿತ ವಿದ್ಯುತ್ ಆಗತ್ಯವೇ ಇರಲ್ಲ. ಆಗ ಉಚಿತ ಯೋಜನೆಗಳನ್ನು ಕೇಳುವುದನ್ನು ಜನರು ಬಿಡುತ್ತಾರೆ. ಸುಲಲಿತವಾಗಿ ಬದುಕುವ ಮಾರ್ಗ ನಿರ್ಮಾಣವಾಗಲಿದೆ ಎಂದರು. ಬಿಜೆಪಿ ಗೆಲುವಿನ ಆರಂಭ ಇಲ್ಲಿಯೇ ಆಗಲಿ:

ಭ್ರಷ್ಟಚಾರ ರಹಿತ ಆಡಳಿತ, ನಿಸ್ವಾರ್ಥ ಸೇವೆ ಮೋದಿ ಅವರ ಉದ್ದೇಶವಾಗಿದೆ. ಮೋದಿಗೆ ಮತ್ತೊಂದು ಅವಕಾಶ ಕೊಡಿ. ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಅವರನ್ನು ಅತ್ಯಧಿಕ ಮತಗಳ ನೀಡಿ ಗೆಲ್ಲಿಸುವ ಮೂಲಕ ಬಿಜೆಪಿಯ ಗೆಲುವಿನ ಅಭಿಯಾನ ಚಾ.ನಗರದಿಂದಲೇ ಆರಂಭವಾಗಲಿ ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಎನ್.ವಿ. ಫಣೀಶ್,ಸಂಚಾಲಕ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಸಹ ಸಂಚಾಲಕ ಪರೀಕ್ಷೀತ್‌ರಾಜ್, ಎಂ. ರಾಮಚಂದ್ರ, ನೂರೊಂದುಶೆಟ್ಟಿ, ಎಚ್.ಎಂ. ಬಸವಣ್ಣ, ಕಾಡಳ್ಳಿ ಶಿವರುದ್ರಸ್ವಾಮಿ ಇದ್ದರು.

ದಲಿತ ಸಮುದಾಯಕ್ಕೆ ಕ್ಷಮೆ ಕೋರುತ್ತೇನೆ : ಮಹೇಶ್

ಚಾಮರಾಜನಗರ: ನನ್ನ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ನೋವುವಾಗಿದ್ದರೆ, ಮತ್ತೊಮ್ಮೆ ಕ್ಷಮೆ ಕೋರುತ್ತೇನೆ. ನನ್ನ ಸಮುದಾಯದ ಬಂಧುಗಳು ಈ ವಿಚಾರವನ್ನು ಇಷ್ಟಕ್ಕೆ ಬಿಟ್ಟು ದೇಶದ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡಲು ಕಮಲದ ಗುರುತಿಗೆ ಮತ ನೀಡಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವ ಎನ್. ಮಹೇಶ್ ಮನವಿ ಮಾಡಿದರು. ನನ್ನ ೪೦ ವರ್ಷಗಳ ರಾಜಕೀಯ ಜೀವನವನ್ನು ನನ್ನ ಸಮುದಾಯದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ್ದೇನೆ. ನನ್ನೊಬ್ಬ ಅಂಬೇಡ್ಕರ್ ವಾದಿಯಾಗಿದ್ದು, ಅವರ ತತ್ವ ಸಿದ್ಧಾಂತಗಳ ಬಗ್ಗೆ ಹೆಚ್ಚಿನ ಅರಿವಿದೆ. ಅವರ ಅಶಯದಂತೆ ಸಮುದಾಯ ಅಭಿವೃದ್ಧಿಗೆ ದುಡಿಯುತ್ತಿದ್ದೇನೆ. ನಾನು ಭಾಷಣ ಮಾಡುವಾಗ ಬಂದ ಆ ಗ್ರಾಮೀಣ ಭಾಷೆಯ ಪದಕ್ಕೆ ಎಚ್ಚೆತ್ತು ಕೊಂಡು ಅಂದೇ ಸಾಮಾಜಿಕ ಜಾಲತಾಣದ ಮುಖಾಂತರ ಕ್ಷಮೆ ಕೋರಿದ್ದೇನೆ. ಅದರೂ ಕೂಡ ಮತ್ತೆ ಮತ್ತೇ ಪುನರ್‍ಚುರಿಸಿ, ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ದ ಷಡ್ಯಂತರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ನನ್ನ ಸಮುದಾಯದವರಲ್ಲಿ ಕ್ಷಮೆ ಕೋರುತ್ತೇನೆ. ಈ ವಿಚಾರವನ್ನು ಇಲ್ಲಿಗೆ ಅಂತ್ಯ ಮಾಡಿ ಎಂದು ಎನ್. ಮಹೇಶ್ ಮನವಿ ಮಾಡಿಕೊಂಡರು.

ಕಾಂಗ್ರೆಸ್ ಪಕ್ಷದವರು ಸೋಲಿನ ಭೀತಿಯಿಂದ ನನ್ನ ಮತ್ತು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನ ಶಿಲ್ಪ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನೇ ಸೋಲಿದ ಕಾಂಗ್ರೆಸ್ ಪಕ್ಷದವರಿಂದ ನೀತಿ ಪಾಠ ಕೇಳಬೇಕಾಗಿಲ್ಲ. ಪ್ರತಿ ಹಂತ ಹಂತದಲ್ಲಿಯೂ ಅಂಬೇಡ್ಕರ್ ಅವರಿಗೆ ಮಾನಸಿಕ ಕಿರುಕುಳ ನೀಡಿ, ಅವರ ಸಾವಿಗೆ ಮತ್ತು ಸಾವಿನ ನಂತರವು ಸಹ ಅಪಮಾನ ಮಾಡಿದ್ದ ಕಾಂಗ್ರೆಸ್ ನಮ್ಮಂಥ ಸಾಮಾನ್ಯರನ್ನು ಬಿಡುವುದೇ ? ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್‌ ಪಕ್ಷ ಉರಿಯುವ ಮನೆ:

ಅಂಬೇಡ್ಕರ್ ಹೇಳಿದಂತೆ ಕಾಂಗ್ರೆಸ್ ಪಕ್ಷ ಹುರಿಯುವ ಮನೆ. ಅಲ್ಲಿಗೆ ಹೋದರೆ ಸುಟ್ಟು ಹೋಗುತ್ತೀರಿ ಎಂದು ಅಂದೇ ನಮ್ಮ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದರು. ಈಗ ಚುನಾವಣೆಯಲ್ಲಿ ಯಾವುದೇ ವಿಚಾರ ಸಿಗದ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಿ ಬಿಡುತ್ತಾರೆ ಎಂದ ಅಪಪ್ರಚಾರ ಮಾಡಿ, ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಬಿಜೆಪಿಯಲ್ಲಿ ಪ್ರಬಲ ನಾಯಕನಾಗಿ ಬೆಳೆಯುತ್ತಿರುವ ನನ್ನ ಏಳಿಗೆಯನ್ನು ಸಹಿಸದೇ ಇಂಥ ಪಿತೂರಿಗಳನ್ನು ಮಾಡಿ, ತೇಜವಧೆ ಮಾಡಲು ನನ್ನ ಸಮುದಾಯವನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸಿಗರು ನಿಂತರವಾಗಿ ಮಾಡುತ್ತಿದ್ದಾರೆ ಎಂದು ಎನ್. ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.

.

Share this article