ಅಭಿವೃದ್ಧಿ, ಬಡವರ ಪರ ಕಾಂಗ್ರೆಸ್‌ ಬೆಂಬಲಿಸಿ

KannadaprabhaNewsNetwork |  
Published : Apr 19, 2024, 01:00 AM IST
18ಡಿಡಬ್ಲೂಡಿ7ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ತಡಕೋಡ ಹಾಗೂ ಹೆಬ್ಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಮಹಿಳೆಯರಿಗೆ ಗೌರವ ನೀಡಿದ ವಿನೋದ ಅಸೂಟಿ | Kannada Prabha

ಸಾರಾಂಶ

ಬಿಜೆಪಿ ಎಂಬ ಸುಳ್ಳಿನ ಪಕ್ಷವನ್ನು ಮತದಾರರು ತಿರಸ್ಕರಿಸಬೇಕಾದ ಸಮಯ ಬಂದಿದೆ. ಕೇಂದ್ರ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಬಡವರ ಬದುಕನ್ನು ದುರ್ಬರವಾಗಿಸಿದೆ.

ಧಾರವಾಡ:

ಯಾರು ಅಭಿವೃದ್ಧಿ, ಬಡವರ, ರೈತ ಪರ ಹಾಗೂ ನುಡಿದಂತೆ ಇರುತ್ತಾರೆಯೋ ಅಂತಹ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಮನವಿ ಮಾಡಿದರು.

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ತಡಕೋಡ ಹಾಗೂ ಹೆಬ್ಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಅವರು, ಬಿಜೆಪಿ ಎಂಬ ಸುಳ್ಳಿನ ಪಕ್ಷವನ್ನು ಮತದಾರರು ತಿರಸ್ಕರಿಸಬೇಕಾದ ಸಮಯ ಬಂದಿದೆ. ಕೇಂದ್ರ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಬಡವರ ಬದುಕನ್ನು ದುರ್ಬರವಾಗಿಸಿದೆ. ಬೆಲೆ ಏರಿಸಿ ಕಷ್ಟಕ್ಕೆ ದೂಡಿದೆ. ಆದ್ದರಿಂದ ಈ ಬಾರಿ ಬಿಜೆಪಿಗೆ ಬುದ್ಧಿ ಕಲಿಸಲು ಕಾಂಗ್ರೆಸ್‌ ಬೆಂಬಲಿಸಿ ಎಂದರು.ಬಡವರ, ದಲಿತರ, ಮಹಿಳೆಯರ ಹಾಗೂ ಶೋಷಿತರ ಅಭಿವೃದ್ಧಿಯಾಗಲು ಕಾಂಗ್ರೆಸ್ ಶ್ರಮಿಸಿದೆ. ಜಾತಿ-ಧರ್ಮಗಳಲ್ಲಿ ಕಿಡಿ ಹೊತ್ತಿಸುತ್ತಿರುವ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರು ಸಹ ಎರಡೂ ಪಕ್ಷಗಳ ಬಗ್ಗೆ ಚಿಂತನೆ ಮಾಡಿ ಉತ್ತಮ ನಿರ್ಧಾರಕ್ಕೆ ಬರಬೇಕು ಎಂದರು. ಈ ವೇಳೆ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಿವಲೀಲಾ ಕುಲಕರ್ಣಿ, ಅಜೀಂ ಪೀರ್ ಖಾದ್ರಿ, ಅನೀಲಕುಮಾರ ಪಾಟೀಲ, ಜಗದೀಶ್ ಉಪ್ಪಿನ, ಮಯೂರ ಮೋರೆ, ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಸುರೇಶಗೌಡ ಕರಿಗೌಡರ್, ತಡಕೋಡ ಸುತ್ತಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಸ್ಯರು ಮತ್ತು ಹಿರಿಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.ಕಾರಡಗಿಯಲ್ಲಿ ಮತಯಾತ್ರೆ:

ವಿನೋದ ಅಸೂಟಿ ಕಾರಡಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರ ವ್ಯಾಪ್ತಿಯ ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಶಾಸಕ ಶ್ರೀನಿವಾಸ ಮಾನೆ, ಯಾಸೀರ್‌ ಅಹ್ಮದ ಖಾನ ಪಠಾಣ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಬಿ.ಸಿ. ಪಾಟೀಲ್, ಎಂ.ಜೆ. ಮುಲ್ಲಾ, ರಾಜೇಶ್ವರಿ ಪಾಟೀಲ, ಶಿವಾನಂದ ರಾಮಗೇರಿ, ಗುಡ್ಡಪ್ಪ ಜಲ್ದಿ, ಮಹಾಂತೇಶ ಸಾಲಿ ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ