ಅಭಿವೃದ್ಧಿ, ಜನ ಸೇವೆಗೆ ಕಾಂಗ್ರೆಸ್ ಬೆಂಬಲಿಸಿ: ನಾಯಕ

KannadaprabhaNewsNetwork |  
Published : Mar 31, 2024, 02:00 AM IST
ಹುಣಸಗಿ ತಾಲೂಕಿನ ಯಣ್ಣಿವಡಿಗೇರಾ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು ಮಾತನಾಡಿದರು. | Kannada Prabha

ಸಾರಾಂಶ

ಸುರಪುರ ಕ್ಷೇತ್ರದ ಜನಪರ ಅಭಿವೃದ್ಧಿ ಹಾಗೂ ಜನ ಸೇವೆಗೆ ಕೈಗೆ ಬೆಂಬಲಿಸಿ ಸಹಕಾರ ನೀಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಹುಣಸಗಿ: ಸುರಪುರ ಕ್ಷೇತ್ರದ ಜನಪರ ಅಭಿವೃದ್ಧಿ ಹಾಗೂ ಜನ ಸೇವೆಗೆ ಕೈಗೆ ಬೆಂಬಲಿಸಿ ಸಹಕಾರ ನೀಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ತಾಲೂಕಿನ ಯಣ್ಣಿವಡಗೇರಾ, ಮಾರನಾಳ ತಾಂಡ, ಮಾರನಾಳ, ಕಮಲಪುರ, ಬಸ್ಸಾಪುರ, ಮದಲಿಂಗನಾಳ, ದೊಡ್ಡಚಾಪಿ ತಾಂಡ, ಕೊಟೇಗುಡ್ಡ, ಬಸರಿಗಿಡದ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆ ಕೈಗೊಂಡು ಮಾತನಾಡಿದರು.

ತಂದೆ ದಿ.ರಾಜಾ ವೆಂಕಟಪ್ಪ ನಾಯಕ ಅವರು ನುಡಿದಂತೆ ನಡೆದಿದ್ದಾರೆ. ಪ್ರತಿಯೊಬ್ಬರ ವಿಶ್ವಾಸಕ್ಕೆ ತೆಗೆದುಕೊಂಡು ಅನೇಕ ಅಭಿವೃದ್ಧಿಯೂ ಮಾಡಿದ್ದಾರೆ. ತಂದೆಯವರ ಹಾದಿಯಲ್ಲಿ ನಾನು ಕೂಡ ನಿಮ್ಮ ಸೇವೆಗೆ ಸಿದ್ಧನಾಗಿದ್ದೇನೆ. ಈ ಬಾರಿ ಲೋಕಸಭೆ ಹಾಗೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆಯಲ್ಲಿ ನೀಡಿದ 5 ಗ್ಯಾರಂಟಿಗಳಾದ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಭರವಸೆಗಳೆಲ್ಲವೂ ಈಡೇರಿಸುವ ಕೆಲಸ ಕಾಂಗ್ರೆಸ್ ಮಾಡಿದೆ. ಹೀಗಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿ ಆರಿಸಿ ತರಬೇಕು ಎಂದು ಜನರಲ್ಲಿ ಬೇಡಿಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತನಾಡಿ, ಬಿಜೆಪಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿಗೆ ದೇಶದ ಚಿಂತಿ, ಕಾಂಗ್ರೆಸ್‌ಗೆ ದೇಶದೊಂದಿಗೆ ಜನರ ಚಿಂತೆಯೂ ಇದೆ. ಹೀಗಾಗಿ ಪಂಚಗ್ಯಾರಂಟಿ ಯೋಜನೆಗಳೆಲ್ಲವೂ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರನ್ನು ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ತಿಳಿಸಿದರು.

ಆರ್.ಎಂ. ರೇವಡಿ, ಭೀಮರಾಯ ಮೂಲಿಮನಿ, ಮಲ್ಲಣ್ಣ ಸಾಹುಕಾರ ಮಧೋಳ, ರವಿ ಸಾಹುಕಾರ ಆಲ್ದಾಳ, ನಿಂಗರಾಜ ಬಾಚಿಮಟ್ಟಿ, ದೊಡ್ಡ ದೇಸಾಯಿ, ಯಮನಪ್ಪ ದೊರಿ, ಭೀಮರಾಯ ಮೂಲಿಮನಿ, ನಿಂಗಪ್ಪ ನಾಯ್ಕ, ಅಂಬ್ರಣ್ಣ ಜೋಗಂಡಬಾವಿ, ರಂಗನಗೌಡ ದೇವಿಕೇರಿ, ಅಂಬರೀಶ ನಾರಾಯಣಪುರ, ಪರಶುರಾಮ್ ಚಾಪಿ ತಾಂಡಾ, ಶಾಂತಪ್ಪ ಮೇಸ್ತಾಕ್, ವೆಂಕೋಬ ಯಾದವ, ಶಂಕರ ಚವ್ಹಾಣ, ಕೃಷ್ಣ ಜಾಧವ, ತಿಮ್ಮಣ್ಣ ಮಿಂಚೇರಿ, ಯಲ್ಲಪ್ಪಗೌಡ ಜೋಗಂಡಬಾವಿ ಸೇರಿದಂತೆ ಇತರರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ