ಬೇರೆ ರಾಜ್ಯಗಳಲ್ಲೂ ಭರತ ನಾಟ್ಯ ಪ್ರದರ್ಶನಕ್ಕೆ ಸಹಕಾರ: ವಿದೂಷಿ ಅಂಕಿತ ಪ್ರಜ್ವಲ್

KannadaprabhaNewsNetwork |  
Published : Oct 24, 2026, 02:00 AM IST
ನರಸಿಂಹರಾಜಪುರ ರಾಗಮಯೂರಿ ಅಕಾಡೆಮಿ ವತಿಯಿಂದ ನಡೆದ ಗೆಜ್ಜೆ ಪೂಜೆ, ಗುರು ವಂದನಾ ಕಾರ್ಯಕ್ರಮದಲ್ಲಿ  ತಾ.ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ಸುರೇಶ್ ಅವರನ್ನು  ರಾಗಮಯೂರಿ ಅಕಾಡೆಮಿ ಮುಖ್ಯಸ್ಥೆ, ವಿದೂಷಿ ಅಂಕಿತ ಪ್ರಜ್ವಲ್ ಹಾಗೂ ಕಾರ್ಯದರ್ಶಿ ಪ್ರಜ್ವಲ್ ಸನ್ಮಾನಿಸಿದರು.  | Kannada Prabha

ಸಾರಾಂಶ

ನರಸಿಂಹರಾಜಪುರಗಡಿನಾಡು ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ರಾಗ ಮಯೂರಿ ಅಕಾಡೆಮಿ ವಿದ್ಯಾರ್ಥಿನಿಯರು ಬೇರೆ, ಬೇರೆ ರಾಜ್ಯಗಳಲ್ಲೂ ತಿಂಗಳಿಗೆ ಒಂದು ಭರತ ನಾಟ್ಯ ಪ್ರದರ್ಶನ ನಡೆಸುತ್ತಿದ್ದಾರೆ ಎಂದು ರಾಗ ಮಯೂರಿ ಅಕಾಡೆಮಿ ಮುಖ್ಯಸ್ಥೆ ಹಾಗೂ ವಿದೂಷಿ ಅಂಕಿತ ಪ್ರಜ್ವಲ್ ತಿಳಿಸಿದರು.

- ರಾಗ ಮಯೂರಿ ಅಕಾಡೆಮಿಯಿಂದ 7 ನೇ ವರ್ಷದ ಗೆಜ್ಜೆ ಪೂಜೆ। ಗುರು ವಂದನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಗಡಿನಾಡು ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ರಾಗ ಮಯೂರಿ ಅಕಾಡೆಮಿ ವಿದ್ಯಾರ್ಥಿನಿಯರು ಬೇರೆ, ಬೇರೆ ರಾಜ್ಯಗಳಲ್ಲೂ ತಿಂಗಳಿಗೆ ಒಂದು ಭರತ ನಾಟ್ಯ ಪ್ರದರ್ಶನ ನಡೆಸುತ್ತಿದ್ದಾರೆ ಎಂದು ರಾಗ ಮಯೂರಿ ಅಕಾಡೆಮಿ ಮುಖ್ಯಸ್ಥೆ ಹಾಗೂ ವಿದೂಷಿ ಅಂಕಿತ ಪ್ರಜ್ವಲ್ ತಿಳಿಸಿದರು.

ಅಗ್ರಹಾರದ ಬ್ರಾಹ್ಮಣ ಮಹಾ ಸಭಾದ ಸಭಾಂಗಣದಲ್ಲಿ ನಡೆದ 7 ನೇ ವರ್ಷದ ಶಾರದಾ ಪೂಜೆ, ಗೆಜ್ಜೆ ಪೂಜೆ, ಹಾಗೂ ಗುರು ವಂದನಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಗಮಯೂರಿ ಅಕಾಡೆಮಿಯಲ್ಲಿ 150 ವಿದ್ಯಾರ್ಥಿಗಳು ನೃತ್ಯ ಕಲಿಯುತ್ತಿದ್ದಾರೆ. ಇವರಲ್ಲಿ 47 ವಿದ್ಯಾರ್ಥಿ ಗಳು ಜೂನಿಯರ್ ಪರೀಕ್ಷೆ ಮುಗಿಸಿದ್ದಾರೆ. 30 ವಿದ್ಯಾರ್ಥಿಗಳು ಸಂಗೀತ ಕಲಿಯುತ್ತಿದ್ದು ಇವರಲ್ಲಿ ಈಗಾಗಲೇ 4 ವಿದ್ಯಾರ್ಥಿಗಳು ಜೂನಿಯರ್ ಪರೀಕ್ಷೆ ಮುಗಿಸಿದ್ದಾರೆ. ಈ ವರ್ಷ ರಾಗಮಯೂರಿ ಅಕಾಡೆಮಿ ವಿದ್ಯಾರ್ಥಿಗಳು 50 ಕ್ಕೂ ಹೆಚ್ಚು ಭರತ ನಾಟ್ಯ ಪ್ರದರ್ಶನ ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ಸುರೇಶ್ ಮಾತನಾಡಿ ಮಹಿಳೆಯರು ಹಣೆಗೆ ಕುಂಕುಮ ಹಚ್ಚು ವುದರಿಂದ, ಕೈಗೆ ಬಳೆ ಇಡುವುದರಿಂದ ಆರೋಗ್ಯ ವೃದ್ಧಿಸಲಿದೆ. ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಂಪ್ರದಾಯಕ್ಕೂ ವೈಜ್ಞಾನಿಕ ಕಾರಣ ಗಳಿವೆ ಎಂದರು. ಸಭೆಯಲ್ಲಿ ರಾಗಮಯೂರಿ ಅಕಾಡೆಮಿ ಕಾರ್ಯದರ್ಶಿ ಪ್ರಜ್ವಲ್, ಸಂಗೀತ ವಿದೂಷಿ ಗಾಯಿತ್ರಿ ನಾಗರಾಜ್ ಇದ್ದರು.

ವಿದ್ಯಾರ್ಥಿಗಳು ದೀಪ ಹಚ್ಚಿ ಪ್ರಾರ್ಥನೆ ಮಾಡಿದರು ನೃತ್ಯ ಹಾಗೂ ಸಂಗೀತದ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ವಿದ್ಯಾರ್ಥಿನಿ ಯರಿಂದ ಸಂಗೀತ, ನೃತ್ಯ ಕಾರ್ಯಕ್ರಮ ನಡೆಯಿತು.ಸಂಗೀತ ವಿದ್ಯಾರ್ಥಿಗಳು ವಿದೂಷಿ ಗಾಯಿತ್ರಿ ನಾಗರಾಜ್ ಅವರನ್ನು ಗೌರವಿಸಿದರು.ನೃತ್ಯ ವಿದ್ಯಾರ್ಥಿಗಳು ವಿದೂಷಿ ಅಂಕಿತ ಪ್ರಜ್ವಲ್ ಅವರನ್ನು ಗೌರವಿಸಿದರು. ರಾಗ ಮಯೂರಿ ಅಕಾಡೆಮಿ ವತಿಯಿಂದ ತಾಲೂಕು ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ಸುರೇಶ್ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಶೇ.86.50ರಷ್ಟು ಮತದಾನ