ಮೇಲುಕೋಟೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸಹಕಾರ: ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್

KannadaprabhaNewsNetwork |  
Published : Nov 13, 2026, 01:45 AM IST
12ಕೆಎಂಎನ್ ಡಿ22 | Kannada Prabha

ಸಾರಾಂಶ

ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಕರ್ನಾಟಕದ ಪ್ರಾಚೀನ ಇತಿಹಾಸವಿರುವುದು ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲು ಕೋರಿದರು. ಮೈಸೂರಿನಿಂದ ಮೇಲುಕೋಟೆಗೆ ಆಗಮಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ದೇವಾಲಯದ ವತಿಯಿಂದ ಸಾಂಪ್ರದಾಯಿಕವಾಗಿ ಪೂರ್ಣಕುಂಬದೊಂದಿಗೆ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದಲೂ ಅಗತ್ಯ ಸಹಕಾರ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭರವಸೆ ನೀಡಿದರು.

ಮೇಲುಕೋಟೆಗೆ ಗುರುವಾರ ಸಂಜೆ ಆಗಮಿಸಿ ಶ್ರೀಚೆಲುವನಾರಾಯಣಸ್ವಾಮಿ ದರ್ಶನ ಪಡೆದು ಕೈಂಕರ್ಯಪರರು ಮತ್ತು ಶಾಸಕರ ಮನವಿ ಆಲಿಸಿ ಮಾತನಾಡಿ, ಭಾರತದ ಪ್ರಮುಖ ಶ್ರೀವೈಷ್ಣವ ಕ್ಷೇತ್ರದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾ ಚಾರ್ಯರ ದರ್ಶನ ಪಡೆದು ಧನ್ಯತಾ ಭಾವ ಹೊಂದಿದ್ದೇನೆ ಎಂದರು.

ಭಾರತ ಸರ್ಕಾರದ ಪುರಾತತ್ವ ಇಲಾಖೆಗೆ ಸೇರಿದ ರಾಷ್ಟ್ರೀಯ ಸ್ಮಾರಕ ಚೆಲುವನಾರಾಯಣಸ್ವಾಮಿ ದೇವಾಲಯದ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡುತ್ತೇನೆ. ಈ ಸಂಬಂಧ ವಿವರವಾದ ಪ್ರತ್ಯೇಕ ಮನವಿ ಸಲ್ಲಿಸಿ ಎಂದು ಸಲಹೆ ನೀಡಿದರು.

ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಕರ್ನಾಟಕದ ಪ್ರಾಚೀನ ಇತಿಹಾಸವಿರುವುದು ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲು ಕೋರಿದರು. ಮೈಸೂರಿನಿಂದ ಮೇಲುಕೋಟೆಗೆ ಆಗಮಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ದೇವಾಲಯದ ವತಿಯಿಂದ ಸಾಂಪ್ರದಾಯಿಕವಾಗಿ ಪೂರ್ಣಕುಂಬದೊಂದಿಗೆ ಸ್ವಾಗತಿಸಲಾಯಿತು.

ಇದಕ್ಕೂ ಮುನ್ನ ಚೆಲುವನಾರಾಯಣಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿದ ಕೇಂದ್ರ ಸಚಿವರು ರಾಮಾನುಜರ ದರ್ಶನದೊಂದಿಗೆ ಕೈಂಕರ್ಯಪರರ ಆಶೀರ್ವಾದ ಪಡೆದರು. ರಾಜಗೋಪುರದ ಬಳಿ ಬಂದ ಕೇಂದ್ರಸಚಿವರನ್ನು ರಾಮಾನುಜರೇ ಬಿಕ್ಷೆ ಸ್ವೀಕರಿಸುತ್ತಿದ್ದ ಯತಿರಾಜದಾಸರ್ ಗುರುಪೀಠದ ವತಿಯಿಂದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಅಭಿನಂದಿಸಿದರು.

ಜಿಲ್ಲಾಡಳಿತದಿಂದ ಸ್ಮರಣಿಕೆ ನೀಡಿ ಗೌರವಾರ್ಪಣೆ:

ಶ್ರೀಚೆಲುವನಾರಾಯಣಸ್ವಾಮಿ ದರ್ಶನ ಮುಗಿಸಿ ಹೊರಬಂದ ನಿರ್ಮಲ ಸೀತಾರಾಮನ್‌ ಅವರನ್ನು ಜಿಲ್ಲಾಡಳಿತದಿಂದ ಜಿಪಂ ಸಿಇಒ ಕೆ.ಆರ್.ನಂದಿನಿ ಹಾಗೂ ಡಾ.ಕುಮಾರ ಅಭಿನಂದಿಸಿ ಶ್ರೀಚೆಲುವನಾರಾಯಣಸ್ವಾಮಿ ವಿಗ್ರಹದ ಸ್ಮರಣಿಕೆ ನೀಡಿದರು.

ಮೇಲುಕೋಟೆ ಸಂಸ್ಕೃತ ಸಂಶೋಧನಾ ಸಂಸ್ಥೆ ಹಾಗೂ ತಿರುನಕ್ಷತ್ರ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿರುವ ಮಣವಾಳ ಮಾಮುನಿ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದರು.

ಈ ವೇಳೆ ತಹಸೀಲ್ದಾರ್ , ದೇಗುಲದ ಇಒ ಶ್ರೇಯಸ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಮೇಶಗೌಡ, ಸದಸ್ಯರಾದ ಬಚ್ಚಿಕೊಪ್ಪಲು ರಾಜು , ಕೆ.ಎಚ್.ಪುಟ್ಟಸ್ವಾಮಿಗೌಡ, ಪ್ರೀತಿಮಹದೇವ್, ಪಾರುತ್ತೇಗಾರರಾದ ಶ್ರೀನಿವಾಸ ನರಸಿಂಹನ್ ಗುರೂಜಿ, ಪಾರ್ಥಸಾರಥಿ, ಅರ್ಚಕ ವರದರಾಜಭಟ್ಟರ್, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀಳಗಿ ಶುಗರ್ಸ್‌ನಿಂದ 10 ಲಕ್ಷ ಟನ್‌ ಕಬ್ಬು ನುರಿಸುವ ಗುರಿ
14ರವರೆಗೆ 6ನೇ ಲಿಸಾಕಾನ್-2026 ಅಂತಾರಾಷ್ಟ್ರೀಯ ಸಮ್ಮೇಳನ