ಕನ್ನಡಪ್ರಭ ವಾರ್ತೆ ಬೆಳಗಾವಿ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಉತ್ತಮ ಅಭ್ಯರ್ಥಿ ಆಗಿದ್ದು, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾನೆ. ಕಾಂಗ್ರೆಸ್ ಬೆಂಬಲಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿದರು.
ಬಳಿಕ ಪೀರನವಾಡಿಯಲ್ಲಿ ಮತಯಾಚಿಸಿದ ಸಚಿವರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಡಜನರಿಗೆ ಸಾಕಷ್ಟು ಅನುಕೂಲ ಆಗಿದೆ. ಪೀರನವಾಡಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ, ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಗೆಲುವಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕೋರಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಶುರಾಮ ಡಗೆ, ಪ್ರದೀಪ್.ಎಂ.ಜೆ.ಅಮೂಲ ದೇಸಾಯಿ, ಮಹಾದೇವ ಗಡ್ಕರಿ, ಸಾಕ್ಷಿ ಕಣಬರಕರ, ಮಾಧುರಿ ಮಿರ್ಜೆ, ಮಹೇಶ್ ಪಾಟೀಲ್, ಸಚಿನ್ ಗೊರ್ಲೆ, ಪೀರಾಜಿ ಸೂಳಗೆಕರ್, ಪ್ರಮೋದ್ ಪಾಟೀಲ್, ವಿಠಲ್ ಸಾಂಬ್ರೇಕರ್, ಮಲ್ಲಿಕಾರ್ಜುನ ಕೊಡಗೂರು, ಮಹಾಂತೇಶ್ ಕರಿಗಾರ್, ರಾಜು ಕಡೋಲ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.