ಛಾಯಾಚಿತ್ರಗ್ರಾಹಕರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆಗೊಳಿಸುವಲ್ಲಿ ರಾಜ್ಯಸಂಘವು ಯಶಸ್ವಿಯಾಗಿದ್ದು, ಇದರಿಂದ ಛಾಯಾಚಿತ್ರ ಗ್ರಾಹಕರಿಗೆ ಸಾಕಷ್ಟು ಅನುಕೂಲತೆಗಳು ಲಭಿಸಲಿವೆ. ಛಾಯಾಚಿತ್ರಗ್ರಾಹಕರು ಮೃತರಾದ ಸಂದರ್ಭದಲ್ಲಿ ಕುಟುಂಬದವರ ಸಹಾಯಕ್ಕಾಗಿ ಆಸರೆ ಯೋಜನೆಯನ್ನು ರೂಪಿಸಲಾಗಿದೆ. ಸಂಘದಲ್ಲಿ ಸದಸ್ಯತ್ವ ಪಡೆದಿರುವ ಸದಸ್ಯರು ಈ ಯೋಜನೆಗೆ ಅರ್ಹರಾಗಿದ್ದು, ಛಾಯಾಚಿತ್ರಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಆಸರೆ ಯೋಜನೆಯ ಲಾಭ ಮೃತರಾದಾಗ ಸಿಗುತ್ತದೆ ಎಂಬ ಭಾವನೆಯನ್ನು ಬಿಟ್ಟು, ನಾವು ಬದುಕಿದ್ದಾಗ ಇನ್ನೊಬ್ಬರಿಗೆ ಸಹಾಯ ಮಾಡಲು ಸಿಗುವ ಅವಕಾಶದ ಯೋಜನೆ ಎಂದು ಭಾವಿಸಿ, ಆಗಸ್ಟ್ 19ರೊಳಗೆ ಈ ಯೋಜನೆಗೆ ನೋಂದಾಯಿಸಿಕೊಳ್ಳತಕ್ಕದ್ದು ಎಂದರು
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಛಾಯಾಚಿತ್ರ ಗ್ರಾಹಕರ ಸಂಘ ತಾಲೂಕು ಘಟಕದ ವತಿಯಿಂದ ಕೆಪಿಎ ಆಸರೆ ಯೋಜನೆಗೆ ಚಾಲನೆ ನೀಡಲಾಯಿತು.ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜು ಮಾತನಾಡಿ, ಛಾಯಾಚಿತ್ರಗ್ರಾಹಕರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆಗೊಳಿಸುವಲ್ಲಿ ರಾಜ್ಯಸಂಘವು ಯಶಸ್ವಿಯಾಗಿದ್ದು, ಇದರಿಂದ ಛಾಯಾಚಿತ್ರ ಗ್ರಾಹಕರಿಗೆ ಸಾಕಷ್ಟು ಅನುಕೂಲತೆಗಳು ಲಭಿಸಲಿವೆ. ಛಾಯಾಚಿತ್ರಗ್ರಾಹಕರು ಮೃತರಾದ ಸಂದರ್ಭದಲ್ಲಿ ಕುಟುಂಬದವರ ಸಹಾಯಕ್ಕಾಗಿ ಆಸರೆ ಯೋಜನೆಯನ್ನು ರೂಪಿಸಲಾಗಿದೆ. ಸಂಘದಲ್ಲಿ ಸದಸ್ಯತ್ವ ಪಡೆದಿರುವ ಸದಸ್ಯರು ಈ ಯೋಜನೆಗೆ ಅರ್ಹರಾಗಿದ್ದು, ಛಾಯಾಚಿತ್ರಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ ಕೊನೇರಿ ಸೂರಿ ಮಾತನಾಡಿ, ಸಂಘದ ರಾಜ್ಯಧ್ಯಕ್ಷರಾದ ನಾಗೇಶ್ ಅವರು ಛಾಯಾಚಿತ್ರಗ್ರಾಹಕರ ಒಳಿತಿಗಾಗಿ ಸದಾ ಕ್ರಿಯಾಶೀಲವಾಗಿ ಉತ್ತಮ ಕೆಲಸ ಕೆಲಸಗಳನ್ನು ಮಾಡುತ್ತಿರುವರು, ಮುಂದಿನ ದಿನಗಳಲ್ಲಿ ಹೆಲ್ತ್ ಕಾರ್ಡ್ ವಿತರಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು. ತಾಲೂಕು ಘಟಕದ ಅಧ್ಯಕ್ಷ ಪಿ. ಡಿ. ಚಂದ್ರಶೇಖರ್ ಮಾತನಾಡಿ, ಆಸರೆ ಯೋಜನೆಯ ಲಾಭ ಮೃತರಾದಾಗ ಸಿಗುತ್ತದೆ ಎಂಬ ಭಾವನೆಯನ್ನು ಬಿಟ್ಟು, ನಾವು ಬದುಕಿದ್ದಾಗ ಇನ್ನೊಬ್ಬರಿಗೆ ಸಹಾಯ ಮಾಡಲು ಸಿಗುವ ಅವಕಾಶದ ಯೋಜನೆ ಎಂದು ಭಾವಿಸಿ, ಆಗಸ್ಟ್ 19ರೊಳಗೆ ಈ ಯೋಜನೆಗೆ ನೋಂದಾಯಿಸಿಕೊಳ್ಳತಕ್ಕದ್ದು ಎಂದರು.
ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ನಿಲೇಶ್, ಸಹ ಕಾರ್ಯದರ್ಶಿ ಮಲ್ಲೇಶ್, ಆಸರೆ ಯೋಜನೆಯ ಜಿಲ್ಲಾ ಉಸ್ತುವಾರಿ ಲೋಕೇಶ್ ಮಾತನಾಡಿದರು. ತಾಲೂಕು ಘಟಕದ ಮಾಜಿ ಅಧ್ಯಕ್ಷ ಎ. ಬಿ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್. ಜೆ. ಸಂದೀಪ್, ಸಹಕಾರ್ಯದರ್ಶಿ ಅಶ್ವತ್ಥ್, ಖಜಾಂಚಿ ನವೀನ್, ಸಂಘಟನಾ ಕಾರ್ಯದರ್ಶಿ ಪ್ರಭುರಾವ್, ನಿರ್ದೇಶಕ ನೀಲಕಂಠ, ಸುನೀಲ್, ರುದ್ರೇಶ್ ಛಾಯಾಚಿತ್ರಗ್ರಾಹಕರು ಭಾಗವಹಿಸಿದ್ದರು.ಬೇಲೂರಿನಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಆಸರೆ ಯೋಜನೆಗೆ ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜು(ಸ್ವಾಮಿ)ಚಾಲನೆ ನೀಡಿದರು. ರಾಜ್ಯಸಂಘದ ನಿರ್ದೇಶಕ ಕೊನೇರಿ ಸೂರಿ, ಆಸರೆ ಯೋಜನೆಯ ಜಿಲ್ಲಾ ಉಸ್ತುವಾರಿ ಲೋಕೇಶ್ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.