ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೀಳಗಿ ತಾಲೂಕಿನ ಕುಂದರಗಿಯ ಶ್ರೀಕ್ಷೇತ್ರ ಸುರಗಿರಿ ಬೆಟ್ಟದಲ್ಲಿರುವ ಶ್ರೀಭುವನೇಶ್ವರಿ ದೇವಿ ದೇವಸ್ಥಾನದ ಭುವನೋತ್ಸವ, ಅಂಬಾರಿ ಉತ್ಸವ ಅ.25ರಿಂದ 28ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಭಕ್ತರಾದ ಪಾಂಡುರಂಗ ಪೂಜಾರಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಗಿರಿ ಬೆಟ್ಟವು ಶತಮಾನಗಳ ಆಧ್ಯಾತ್ಮಿಕ ಪರಂಪರೆಯ ಕೇಂದ್ರವಾಗಿದೆ. ಪ್ರತಿ ವರ್ಷವೂ ಇಲ್ಲಿ ಉತ್ಸವವು ನಡೆಯಲಿದೆ ಎಂದರು.
ಅ.25ರಂದು ಅಂಕುರ ಸ್ಥಾಪನೆ ಹಾಗೂ ಸಂಗೀತ ಕಾರ್ಯಕ್ರಮ, 26ರಂದು ಅಮ್ಮನವರಿಗೆ ಉಡಿ ತುಂಬುವುದು. 27ರಂದು ಅಂಬಾರಿ ಉತ್ಸವ ಸಂಜೆ 4.15ಕ್ಕೆ ಆರಂಭಗೊಳ್ಳಲಿದೆ. ನಂತರ ಸಂಜೆ 6 ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ದಿವ್ಯ ಸಾನ್ನಿಧ್ಯವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಲಕ್ಷ್ಮಣ ಶರಣರು, ಅಧ್ಯಕ್ಷತೆ ಶಾಸಕ ಜೆ.ಟಿ.ಪಾಟೀಲ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ವಿಶೇಷ ಆಹ್ವಾನಿತರಾಗಿ ಡಾ.ಸಂಗಮೇಶ ಕಲ್ಯಾಣಿ, ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ.ಗದ್ದಿಗೌಡರ, ವಿಪ ಸದಸ್ಯ ಹನಮಂತ ನಿರಾಣಿ ಆಗಮಿಸಲಿದ್ದಾರೆ. ರಾತ್ರಿ 8 ಗಂಟೆಗೆ ಸರಿಗಮಪ ವಿನ್ನರ್ ಶಿವಾನಿ ಶಿವದಾಸ ಅವರಿಂದ ಸಂಗೀತ, ಕೃಷ್ಣ ಪಾರಿಜಾತ ನಡೆಯಲಿದೆ. ಅ.28ರಂದು ಲಕ್ಷ ದೀಪೋತ್ಸವ ಸಂಜೆ 7.05 ಗಂಟೆಗೆ ಲಕ್ಷ ದೀಪೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಂಆರ್‌ಎನ್ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ, ರೀಣಾ ದೊಡಮನಿ, ಉದ್ಯಮಿಗಳಾದ ಸತೀಶ ಹಜಾರೆ ಸೇರಿದಂತೆ ಮತ್ತಿತರರು ಆಗಮಿಸಲಿದ್ದಾರೆ. 31 ರಂದು ಅಂಕುರಾರ್ಪಣೆ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರಾಮಪ್ಪ ಮುದಕನ್ನ ವರ್, ರಾಮಪ್ಪ ಗಾಜಾಪೂರ, ಅನೀಲ ಪಾಟೀಲ, ಯಲ್ಲಪ್ಪ ನರಸಾಪೂರ, ಅಶೋಕ ಜಾಲಪ್ಪನವರ್ ಇದ್ದರು.